Asianet Suvarna News Asianet Suvarna News

ಕೈ ಕೈ ಹಿಡಿಯೋ ರೀತಿಯೇ ಹೇಳುತ್ತೆ ಎಷ್ಟಿದೆ ಪ್ರೀತಿ ಎಂದು?

ಕೈ ಹಿಡಿದೋರು ಕೈ ಹಿಡಿದುಕೊಳ್ಳುವುದರಲ್ಲಿ ಏನೂ ವಿಶೇಷವಿಲ್ಲ. ಆದರೆ, ಹಿಡಿಯೋ ರೀತಿ ಹೇಗಿದೆ ಎನ್ನುವುದರ ಮೇಲೆ ಇಬ್ಬರಲ್ಲಿ ಯಾವ ರೀತಿ ಇಂಟಿಮೆಸಿ ಇದೆ ಎಂಬುದನ್ನು ಲೆಕ್ಕ ಹಾಕಬಹುದು. ಅದು ಹೇಗೆ?

How partners hold hand reveal about relationship!
Author
Bengaluru, First Published Oct 16, 2018, 5:30 PM IST
  • Facebook
  • Twitter
  • Whatsapp

ಪ್ರೀತಿಯನ್ನು ವಿಧ ವಿಧವಾಗಿ ಎಕ್ಸ್‌ಪ್ರೆಸ್ ಮಾಡಬಹುದು. ಅದರಲ್ಲಿಯೂ ಸಂಗಾತಿಗಳು ತಮ್ಮ ಆಪ್ತತೆಯನ್ನು ವಿಭಿನ್ನವಾಗಿ ಅಭಿವ್ಯಕ್ತಿಗೊಳಿಸುವ ಅವಕಾಶ ಇರುತ್ತದೆ. ಈ ಪ್ರೀತಿಯನ್ನು ಕೈ ಕೈ ಹಿಡಿಯುವುದರಲ್ಲಿಯೂ ತೋರಿಸಬಹುದೆಂಬುವುದು ಗೊತ್ತಾ? 

ಕಿರು ಬೆರಳು ಹಿಡಿಯುವುದು
ಕಿರು ಬೆರಳು ಹಿಡಿಯುವವರು ಪ್ರೀತಿಯ ಮೊದಲ ಹಂತದಲ್ಲಿದ್ದಾರೆಂದರ್ಥ. ಆಗಷ್ಟೇ ಪ್ರೀತಿಸಲು ಮುಂದಾದವರೂ ಕಿರು ಬೆರಳನ್ನೇ ಹಿಟ್ಕೊಂಡು ಓಡಾಡುತ್ತಾರೆ. 

ಲೂಸ್ ಲೂಸ್ ಆಗಿದ್ದರೆ ಬೆರಳು..

ಇಬ್ಬರು ಆಕಸ್ಮಿಕವಾಗಿ, ಪ್ರೀತಿಯೊಂದಿಗೆ ಕೇರಿಂಗ್ ತೆಗೆದುಕೊಳ್ಳುವವರು ಈ ರೀತಿ ಕೈ ಹಿಡಿದುಕೊಳ್ಳುತ್ತಾರೆ. ಇಲ್ಲಿ ಪ್ರೀತಿಗಿಂತಲೂ, ಸ್ನೇಹಕ್ಕೇ ಹೆಚ್ಚು ಸ್ಥಾನ ಇದೆಯಂದರ್ಥ.

ಬಿಗಿಯಾಗಿ ಕೈ ಹಿಡಿದುಕೊಂಡರೆ?

ಇದರಲ್ಲಿ ಸಾಲ್ಕು ಬೆರಳು ಒಟ್ಟಿಗೆ ಇರುತ್ತದೆ ಹಾಗೂ ಹೆಬ್ಬೆರಳು ಹಿಂದಿರುತ್ತದೆ.  ಹೀಗೆ ಹಿಡಿಯುವ ಸಂಗಾತಿಗಳು ಒಬ್ಬರನ್ನೊಬ್ಬರು ನಂಬುತ್ತಾರೆಂದರ್ಥ. 

ಒಬ್ಬರ ಬೆರಳಲ್ಲಿ ಮತ್ತೊಬ್ಬರ ಬೆರಳು 

ಇದರಲ್ಲಿ ದೈಹಿಕ ಆಕರ್ಷಣೆ ಹೆಚ್ಚಿರುತ್ತದೆ. ಹೀಗೆ ಇಟ್ಟಕೊಳ್ಳುವುದರಿಂದ ಮನಸಿಗೆ ಹೆಚ್ಚು ಹತ್ತಿರ ಎಂಬ ಹಿತ ಭಾವ ಮೂಡಿರುತ್ತದೆ.

ತೋಳು ಹಿಡಿದುಕೊಳ್ಳುವುದು

ಒಬ್ಬರು ಮತ್ತೊಬ್ಬರ ತೋಳು ಹಿಡಿದುಕೊಳ್ಳುವುದರಿಂದ ಅವರು ಜೀವನದ ಹಾದಿಯಲ್ಲಿ ಜೊತೆ ಇದ್ದು ಸಾಥ್ ಕೊಡುತ್ತಿದ್ದಾರೆಂದರ್ಥ. ಒಬ್ಬರನ್ನು ಮತ್ತೊಬ್ಬರು ಸಿಕ್ಕಾಪಟ್ಟೆ ಪ್ರೊಟೆಕ್ಟಿವ್ ಮಾಡುತ್ತಿದ್ದರೆ, ಇಂಥ ಆಂಗಿಕ ಭಾಷೆ ಹೊರ ಹೊಮ್ಮುತ್ತದೆ.

Follow Us:
Download App:
  • android
  • ios