ಶಿಶುವಿನಿಂದ - ವೃದ್ಧರವರೆಗೆ ಪ್ರತಿದಿನ ಎಷ್ಟು ನಿದ್ದೆಯ ಅಗತ್ಯವಿದೆ ಗೊತ್ತೇ..?

First Published 15, Feb 2018, 3:55 PM IST
How Much Sleep Do You Really Need For Your Age
Highlights

ವಯಸ್ಸಿಗೆ ತಕ್ಕಂತೆ ಪ್ರತೀ ವ್ಯಕ್ತಿಗೂ ಕೂಡ ಇಷ್ಟೇ ಪ್ರಮಾಣದಲ್ಲಿ ನಿದ್ದೆ ಮಾಡಬೇಕೆನ್ನುವುದು ವೈಜ್ಞಾನಿಕ ನಿಯಮ. ಪ್ರತೀ ರಾತ್ರಿಯೂ ಕೂಡ ಅಗತ್ಯ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.ಆದರೆ ಯಾವಾಗ ವ್ಯಕ್ತಿಗೆ ನಿದ್ದೆಯು ಕಡಿಮೆಯಾಗುತ್ತದೆಯೋ ಅವರ ಆರೋಗ್ಯವೂ ಕೂಡ ಹದಗೆಡಲು ಕಾರಣವಾಗುತ್ತದೆ.

ಬೆಂಗಳೂರು :  ನಾಗರಿಕತೆ ನಾಗಾಲೋಟದಲ್ಲಿ ಸಾಗುತ್ತಿದ್ದಂತೆ ಮನುಷ್ಯ ಹೆಚ್ಚು ಬ್ಯಸಿಯಾಗುತ್ತಿದ್ದಾನೆ. ಅಲ್ಲದೇ ಹೆಚ್ಚು ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಅನೇಕ ಕಾರಣಗಳಿಂದ ಪ್ರತೀ ವ್ಯಕ್ತಿಯೂ ಕೂಡ ನಿದ್ದೆ ಮಾಡುವಂತಹ ಸಮಯವು ಕಡಿಮೆಯಾಗುತ್ತಾ ಬಂದಿದೆ.  ಆಧುನಿಕ ಕಾಲದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನದ ಬಳಕೆಯಾಗಿರುಬಹುದು, ಅವರ ಒತ್ತಡವಾಗಿರಬಹುದು ಆರೋಗ್ಯಕರವಾದ ನಿದ್ದೆಯಿಂದ ಮನುಷ್ಯನನ್ನು ದೂರ ಸರಿಸುತ್ತಿದೆ.

ವಯಸ್ಸಿಗೆ ತಕ್ಕಂತೆ ಪ್ರತೀ ವ್ಯಕ್ತಿಗೂ ಕೂಡ ಇಷ್ಟೇ ಪ್ರಮಾಣದಲ್ಲಿ ನಿದ್ದೆ ಮಾಡಬೇಕೆನ್ನುವುದು ವೈಜ್ಞಾನಿಕ ನಿಯಮ. ಪ್ರತೀ ರಾತ್ರಿಯೂ ಕೂಡ ಅಗತ್ಯ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.ಆದರೆ ಯಾವಾಗ ವ್ಯಕ್ತಿಗೆ ನಿದ್ದೆಯು ಕಡಿಮೆಯಾಗುತ್ತದೆಯೋ ಅವರ ಆರೋಗ್ಯವೂ ಕೂಡ ಹದಗೆಡಲು ಕಾರಣವಾಗುತ್ತದೆ.

ಯಾವ ವಯಸ್ಸಿಗೆ ಎಷ್ಟು ಪ್ರಮಾಣದಲ್ಲಿ ನಿದ್ದೆ ಅಗತ್ಯ

*ನವಜಾತ ಶಿಶುಗಳು : (0 ಯಿಂದ 3 ತಿಂಗಳು ) ನವಜಾತ ಶಿಶುಗಳಿಗೆ ಪ್ರತಿ ದಿನವೂ ಕೂಡ 14 ರಿಂದ 17 ಗಂಟೆಗಳವರೆಗೆ ನಿದ್ದೆಯು ಅಗತ್ಯವಾಗಿರುತ್ತದೆ. ಮಕ್ಕಳು ಇಷ್ಟು ಸಮಯದವರೆಗೆ ನಿದ್ದೆ ಮಾಡುವಂತೆ ನೋಡಿಕೊಳ್ಳಬೇಕು.

*ಮಗು (4ರಿಂದ 11 ತಿಂಗಳು ) ಈ ವಯಸ್ಸಿನ ಮಕ್ಕಳಿಗೆ 12ರಿಂದ 15 ಗಂಟೆಗಳವರೆಗೆ ನಿದ್ದೆ ಮಾಡುವುದು ಪ್ರತಿದಿನ ಅಗತ್ಯವಾಗಿರುತ್ತದೆ.

*1ರಿಂದ 2 ವರ್ಷದ ಮಗು : ಈ ವಯಸ್ಸಿನ ಮಕ್ಕಳಿಗೆ  11ರಿಂದ 14 ಗಂಟೆಗಳ ಕಾಲ ಪ್ರತಿದಿನವೂ ಕೂಡ ನಿದ್ದೆಯ ಪ್ರಮಾಣದ ಅಗತ್ಯವಿದೆ.

*ಶಾಲಾಪೂರ್ವದಲ್ಲಿರುವ ಮಕ್ಕಳು (3ರಿಂದ 5 ವರ್ಷದವರೆಗೆ) ಈ ವಯಸ್ಸಿನ ಮಕ್ಕಳಿಗೆ 10 ರಿಂದ 13 ಗಂಟೆಗಳ ಕಾಲ ನಿದ್ದೆಯು ಅವಶ್ಯಕವಾಗಿರುತ್ತದೆ.

*ಶಾಲೆಗೆ ಹೋಗುವ ಪುಟಾಣಿಗಳು (6ರಿಂದ 13 ವರ್ಷದ ಮಕ್ಕಳು) : 9 ರಿಂದ 11 ಗಂಟೆಗಳವರೆಗೆ ಪ್ರತಿರಾತ್ರಿ ನಿದ್ದೆಯು ಅವಶ್ಯಕವಾಗಿರುತ್ತದೆ.

*14ರಿಂದ 17 ವರ್ಷದ ಮಕ್ಕಳು : ಈ ವಯಸ್ಸಿನ ಮಕ್ಕಳಿಗೆ 8 ರಿಂದ 10 ಗಂಟೆಗಳ ಕಾಲ ನಿದ್ದೆಯು ಅತ್ಯವಶ್ಯಕವಾಗಿರುತ್ತದೆ.

*ಯುವಜನತೆ: 18ರಿಂದ 25 ವರ್ಷದವರಿಗೆ 7ರಿಂದ 9 ಗಂಟೆಯಷ್ಟು ನಿದ್ದೆಯು ಪ್ರತಿದಿನ ಅವಶ್ಯಕವಾಗಿರುತ್ತದೆ.

*ವಯಸ್ಕರು  (26 ರಿಂದ 64 ) ವಯಸ್ಸಿನವರಿಗೆ 7 ರಿಂದ 9 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇರುತ್ತದೆ.

*ವಯಸ್ಸಾದವರು : 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ರತಿದಿನ 7 ರಿಂದ 8 ಗಂಟೆಗಳಷ್ಟು ನಿದ್ದೆಯು ಅವಶ್ಯಕವಾಗಿರುತ್ತದೆ.

ಈ ಪ್ರಮಾಣದಲ್ಲಿ ನಿದ್ದೆ ಮಾಡಿದಲ್ಲಿ ಉತ್ತಮ ಆರೋಗ್ಯದೊಂದಿಗೆ ಮನಸಿನ ಆರೋಗ್ಯವೂ ಕೂಡ ಸುಸ್ಥಿತಿಯಲ್ಲಿರುತ್ತದೆ.

loader