ಸೆಕ್ಸ್, ಗರ್ಭಧಾರಣೆ ಸತ್ಯಾಸತ್ಯಗಳೇನು?

First Published 20, Nov 2018, 3:41 PM IST
How Many Times Have Sex to Make a Baby
Highlights

 ಮದುವೆಯಾಗಿ ವರ್ಷ ತುಂಬುವುದರಲ್ಲೇ ಕೆಲವರು ಗರ್ಭ ಧರಿಸುತ್ತಾರೆ. ಮತ್ತೆ ಕೆಲವರಿಗೆ ವರ್ಷಗಳುರುಳಿದರೂ ತಾಯಿ ಆಗೋ ಭಾಗ್ಯ ಕೂಡಿ ಬರೋಲ್ಲ. ಇದಕ್ಕಿರಬಹುದು ಇದು ಕಾರಣ...

ಎಲ್ಲಿಯೋ ಅಪ್ಪಿ ತಪ್ಪಿ ಆಗಿ ಹೋಯಿತು. ಒಂದೇ ಒಂದು ಸಲ ಲೈಂಗಿಕ ಕ್ರಿಯೆ ನಡೆಸಿದರೂ ಕನ್ಸೀವ್ ಆಗಿ ಬಿಟ್ಟಿದ್ದೇನೆ. ಅಬಾರ್ಷನ್ ಮಾಡಿ...ಎಂದು ವೈದ್ಯರ ಮುಂದೆ ಅಂಗಲಾಚುವವರಿದ್ದಾರೆ.  ಆದರೆ, ವೈದ್ಯ ಕೋರ್ಸ್ ಮುಗಿಸಿದವರಿಗೆ ಗೊತ್ತು, ಕನ್ಸೀವ್ ಆಗಬೇಕೆಂದರೆ ಎಷ್ಟು ಸಲ ಲೈಂಗಿಕ ಕ್ರಿಯೆ ನಡೆಸುವ ಅಗತ್ಯವಿದೆ ದು. ಕೇವಲ ಒಂದೆರಡು ಸಲ ಲೈಂಗಿಕ ಕ್ರಿಯೆ ನಡೆಸಿದ ಕೂಡಲೇ ಗರ್ಭ ಧರಿಸುವ ಸಾಧ್ಯತೆ ಕಡಿಮೆ.

ಮಕ್ಕಳಾಗದ ಕಾರಣ ಸಲಹೆ ಪಡೆಯಲು ವೈದ್ಯರನ್ನು ಭೇಟಿ ಮಾಡುವುದು ಸಾಮಾನ್ಯ. ಆದರೆ, ಮಗು ಹೆರುವ, ಹೊರುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು  ಮೂಲ ವಿಚಾರಗಳನ್ನು ಅರಿತುಕೊಳ್ಳುವುದು ಅಗತ್ಯ. 

  • ಮಕ್ಕಳಾಗಬೇಕೆಂದು ಬಯಸಿದ ದಂಪತಿ ಸುಮಾರು 78 ಸಲ ಲೈಂಗಿಕ ಕ್ರಿಯೆ ನಡೆಸುತ್ತಾರೆಂದು ಸಂಶೋಧನಗೆಳು ಹೇಳಿವೆ. ಸುಮಾರು 158 ದಿನಗಳು ಅಥವಾ ಆರು ತಿಂಗಳ ಕಾಲದ ಪ್ರೊಸೆಸ್ ಇದು.
  • ಕುಟುಂಬ ಯೋಜನೆ ಮಾಡೋ ದಂಪತಿ ತಿಂಗಳಲ್ಲಿ ಕೇವಲ 13 ಸಲ ಲೈಂಗಿಕ ಕ್ರಿಯೆ ನಡೆಸುತ್ತಾರಂತೆ. ಆದರೆ, ಇದರಿಂದ ಇಬ್ಬರಲ್ಲೂ ಲೈಂಗಿಕಾಸಕ್ತಿ ಕುಂದುವ ಸಾಧ್ಯತೆ ಹೆಚ್ಚಿರುತ್ತಂತೆ. ಇದರಿಂದ ಇಬ್ಬರಿಗೂ ಏಕತಾನತೆ ಕಾಡುತ್ತೆ ಎಂಬುವುದು ಪೇರೆಂಟಿಂಗ್ ಸೈಟ್ ನಡೆಸಿದ ಸರ್ವೆ ನಡೆಸಿದ ಸಮೀಕ್ಷೆ.
  • ಬಹುತೇಕ ತಾಯಂದಿರಿಗೆ ಹೆರುವ, ಹೊರುವ ಪ್ರಕ್ರಿಯೆ ಎಂದರೆ ಭಯವಂತೆ. ಇದರಿಂದಲೇ ಶೇ.43 ನಾರಿಯರು ಕನ್ಸೀವ್ ಆಗಬೇಕೆಂದು ಬಯಸುವುದೇ ಇಲ್ವಂತೆ. ಬಯಕೆ ಇಲ್ಲದೇ ಗರ್ಭ ಧರಿಸುವುದೂ ಇಲ್ಲ.
  • ಕೆಲವರಿಗೆ ಗರ್ಭಕೋಶದ ಸಮಸ್ಯೆ ಹಾಗೂ ಇತರೆ ಅನೇಕ ಕಾರಣಗಳಿಂದ ಕೆಲವು ಭಂಗಿಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಕನ್ಸೀವ್ ಆಗೋ ಸಾಧ್ಯತೆ ಇರುತ್ತೆ. ಕೆಲವರಿಗೆ ಡಾಗಿ ಸ್ಟೈಲ್‌ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಮಗುವಾಗುವ ಅವಕಾಶ ಇರುತ್ತದೆ.
  • ಪಿರಿಯಡ್ಸ್‌ ಅನುಸರಿಸಿ, ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದವರು ಕೇವಲ ಶೇ.36 ದಂಪತಿ ಪಾಸ್ ಆಗ್ತಾರಂತೆ.
  • ಮನಸ್ಸಿನ ಭಯ, ಉದ್ಯೋಗದ ಆತಂಕ...ಮುಂತಾದ ಕಾರಣಗಳೂ ಕನ್ಸೀವ್ ಆಗದಂತೆ ತಡೆಯುತ್ತದೆ.
  • ಇವೆಲ್ಲವನ್ನೂ ಹೊರತುಪಡಿಸಿ, ಗರ್ಭ ಧರಿಸುತ್ತಿಲ್ಲವೆಂದರೆ ಮಾತ್ರ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಸುಖಾ ಸುಮ್ಮನೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿರೋಲ್ಲ.
loader