ಬೆಡ್‌ಸೋರ್ ಬಗ್ಗೆ ನಿಮಗೆಷ್ಟು ಗೊತ್ತು?

life | Saturday, March 10th, 2018
Suvarna Web Desk
Highlights

ಹಾಸಿಗೆ ಹುಣ್ಣುಗಳು, ಬೆಡ್ ಸೋರ್ ಅಂದರೆ ಬಹಳ ದಿನಗಳಿಂದ ಮಲಗಿದ್ದಲ್ಲಿಯೆ ಮಲಗಿ ಆಗುವಂಥ ವ್ರಣಗಳು (ಹುಣ್ಣುಗಳು). ಈ ಹುಣ್ಣುಗಳು ರೋಗಿಗಳಿಗೆ ಒಂದು ಶಾಪವೆಂದೇ ಹೇಳಬಹುದು. ರೋಗಿಯು ತನ್ನ ರೋಗಕ್ಕಿಂತ ಹೆಚ್ಚಾಗಿ ಇವುಗಳಿಂದ ಬಹಳ ಕಷ್ಟ ಅನುಭವಿಸುತ್ತಾರೆ. ಇದನ್ನು ನೋಡಲೂ ಆಗದು. ಅಂದಮೇಲೆ ಅನುಭವಿಸುವವರು ಕಷ್ಟ ಬೇರೆಯವರಿಗೆ ತಿಳಿಸುವುದು ಅಸಾಧ್ಯ.

- ಡಾ. ಕರವೀರಪ್ರಭು ಕ್ಯಾಲಕೊಂಡ

ಹಾಸಿಗೆ ಹುಣ್ಣುಗಳು, ಬೆಡ್ ಸೋರ್ ಅಂದರೆ ಬಹಳ ದಿನಗಳಿಂದ ಮಲಗಿದ್ದಲ್ಲಿಯೆ ಮಲಗಿ ಆಗುವಂಥ ವ್ರಣಗಳು (ಹುಣ್ಣುಗಳು). ಈ ಹುಣ್ಣುಗಳು ರೋಗಿಗಳಿಗೆ ಒಂದು ಶಾಪವೆಂದೇ ಹೇಳಬಹುದು. ರೋಗಿಯು ತನ್ನ ರೋಗಕ್ಕಿಂತ ಹೆಚ್ಚಾಗಿ ಇವುಗಳಿಂದ ಬಹಳ ಕಷ್ಟ ಅನುಭವಿಸುತ್ತಾರೆ. ಇದನ್ನು ನೋಡಲೂ ಆಗದು. ಅಂದಮೇಲೆ ಅನುಭವಿಸುವವರು ಕಷ್ಟ ಬೇರೆಯವರಿಗೆ ತಿಳಿಸುವುದು ಅಸಾಧ್ಯ.

ಏನು ಕಾರಣ?: 

ಹಾಸಿಗೆ ಹುಣ್ಣುಗಳು ಆಗಲು ರೋಗಿಯ ಸೇವೆ ಮಾಡುವವರು ಅಲಕ್ಷ್ಯ ಅಜಾಗರೂಕತೆ. ರೋಗಿಯಂತೂ ಅಸಹಾಯಕ ಸ್ಥಿತಿಯಲ್ಲಿರುತ್ತಾನೆ. ಅವನ ಸೇವೆ ಮಾಡುವವರು ಮಾತ್ರ ಬಹಳ ಲಕ್ಷ್ಯ ಪೂರ್ವಕವಾಗಿ ಕಾಳಜಿಯಿಂದ ನೋಡಿಕೊಂಡಲ್ಲಿ ಮಾತ್ರ ಈ ಹುಣ್ಣುಗಳು ಆಗದಂತೆ ತಡೆಯುವುದು ಸಾಧ್ಯವಿದೆ.  ಅದಕ್ಕೆ ಸ್ವಲ್ಪ ತ್ಯಾಗವೂ ಅವಶ್ಯಕ. ಯಾಕೆಂದರೆ ಅದಕ್ಕೆ ಹೆಚ್ಚಿನ ದುಡಿಮೆ ಬೇಕು. 

ಹುಣ್ಣುಗಳಾಗದಂತೆ ಎಚ್ಚರ ವಹಿಸಿ: 

ಈ ಹುಣ್ಣುಗಳು ಆದ ಮೇಲೆ ಅವನ್ನು ಗುಣಪಡಿಸುವುದು ಬಹಳ ಕಷ್ಟ. ಆದ್ದರಿಂದ ಇವು ಆಗದಂತೆ ಮೊದಲೇ ಎಚ್ಚರಿಕೆ ವಹಿಸುವುದು ಜಾಣತನ. ಒಂದೇ ಜಾಗದಲ್ಲಿ ಮನುಷ್ಯನ ಚರ್ಮ ಹಾಸಿಗೆಗೆ ತರಿದು ತರಿದು ಚರ್ಮ ಸವೆದು ಅಲ್ಲಿಯೆ ನೋವಾಗುವುದು. ಆ ನೋವು ಹೆಚ್ಚಾದಂತೆ ದೊಡ್ಡ ಹುಣ್ಣುಗಳಾಗುತ್ತವೆ. ಒಮ್ಮೊಮ್ಮೆ ಆ ಹುಣ್ಣುಗಳಲ್ಲಿ ಹುಳಗಳಾಗುವುದುಂಟು.

ಬೆಡ್‌ಸೋರ್ ತಡೆ

ರೋಗಿಗಳನ್ನು ಮೇಲಿಂದ ಮೇಲೆ ಜಾಗ ಬದಲಿಸಿ ಹೊರಳಿಸುತ್ತಿರಬೇಕು. ಇದರಿಂದ ಚರ್ಮ ಸವೆಯುವುದಿಲ್ಲ. ೨ ಹಾಸಿಗೆ ಮೇಲಿರುವ ಚರ್ಮದ ಭಾಗವನ್ನು ಮೆತ್ತಗಿಡುವದು ಅವಶ್ಯಕ. ಪೆಟ್ರೋಲಿಯಂ ಜೆಲ್ಲಿಯನ್ನು ಸವೆಯುತ್ತಿರುವ ಚರ್ಮದ ಭಾಗಕ್ಕೆ ದಿನಕ್ಕೆ 3 ಸಲವಾದರೂ ಹಚ್ಚಬೇಕು. ನಂತರ ಟಾಲ್ಕಂ ಪೌಡರ್ ಉದುರಿಸಬೇಕು೩ 'ವಾಟರ್ ಬೆಡ್'ಗಳ ಸಕಾಲಿಕ ಬಳಕೆಯಿಂದ ಈ ಅನಾಹುತ ತಪ್ಪಿಸಬಹುದು.
 

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk