Asianet Suvarna News Asianet Suvarna News

Dry Cleaning: ಡ್ರೈ ವಾಶ್ ಎಂದರೇನು? ಬಟ್ಟೆ ಹೇಗೆ ಕ್ಲೀನ್ ಆಗುತ್ತೆ ಗೊತ್ತಾ?

ದುಬಾರಿ ಬೆಲೆಯ ಬಟ್ಟೆ ಕಲೆಯಾದ್ರೆ ನಾವು ಮೊದಲು ಡ್ರೈ ಕ್ಲೀನರ್ ಬಳಿ ಓಡ್ತೇವೆ. ಎಷ್ಟೇ ಹಣ ಹೇಳಿದ್ರೂ ಕೊಟ್ಟು ಬಟ್ಟೆ ಕ್ಲೀನ್ ಮಾಡಿಸಿಕೊಂಡು ಬರ್ತೇವೆ. ನಮ್ಮಲ್ಲಿ ಸ್ವಚ್ಛವಾಗದ ಬಟ್ಟೆ ಅಲ್ಲಿ ಅಷ್ಟು ಹೊಳಪು ಪಡೆಯಲು ಕಾರಣ ಏನು ಎಂಬುದು ಇಲ್ಲಿದೆ. 
 

How Are Clothes Washed In Dry Clean  roo
Author
First Published Nov 28, 2023, 11:58 AM IST

ಬಟ್ಟೆ ಖರೀದಿ ಮಾಡುವಾಗ ಅಂಗಡಿ ಮಾಲಿಕರು ಇದು ಡ್ರೈ ಕ್ಲಿನಿಂಗ್ ಬಟ್ಟೆ ಎಂದೇ ನಮಗೆ ನೀಡಿರ್ತಾರೆ. ಅದನ್ನು ನಾವು ಮನೆಯಲ್ಲಿ ವಾಶ್ ಮಾಡಿದ್ರೆ ಬಟ್ಟೆ ಹಾಳಾದಂತೆ. ದುಬಾರಿ ಬೆಲೆಕೊಟ್ಟು ಖರೀದಿ ಮಾಡಿದ ಬಟ್ಟೆ ಒಂದೇ ದಿನದಲ್ಲಿ ಮೂಲೆ ಸೇರುತ್ತದೆ. ಎಲ್ಲ ಬಟ್ಟೆಗಳನ್ನು ಹ್ಯಾಂಡ್ ವಾಶ್ ಅಥವಾ ವಾಶಿಂಗ್ ಮಶಿನ್ ನಲ್ಲಿ ವಾಶ್ ಮಾಡಲು ಸಾಧ್ಯವಿಲ್ಲ. ರೇಷ್ಮೆ, ಉಣ್ಣೆ, ಲಿನಿನ್, ರೇಯಾನ್, ಲೆದರ್, ಡೆನಿಮ್ ಮುಂತಾದ ಬಟ್ಟೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ನೀವು ಡ್ರೈ ಕ್ಲಿನಿಂಗ್ ಮಾಡಿದ್ರೆ ಬಟ್ಟೆ ತುಂಬಾ ದಿನ ಬಾಳಿಗೆ ಬರೋದಲ್ಲದೆ ಬಣ್ಣ ಹೋಗೋದಿಲ್ಲ. ಡ್ರೈ ಕ್ಲಿನಿಂಗ್ ಮಾಡೋದು ಹೇಳಿದಷ್ಟು ಸುಲಭವಲ್ಲ. ಯಾಕೆಂದ್ರೆ ಅದನ್ನು ನಾವು ಮನೆಯಲ್ಲಿ ಮಾಡೋಕೆ ಸಾಧ್ಯವಿಲ್ಲ. ಡ್ರೈ ಕ್ಲಿನಿಂಗ್ ಶಾಪ್ ಗೆ ನೀಡ್ಬೇಕು. ಅವರು ಒಂದು ಬಟ್ಟೆ ಕ್ಲೀನಿಂಗ್ ಗೆ ದುಬಾರಿ ಹಣ ವಸೂಲಿ ಮಾಡ್ತಾರೆ ಎಂಬುದು ನಿಮಗೆಲ್ಲ ಗೊತ್ತು. ಆದ್ರೆ ಅವರು ಇಷ್ಟೊಂದು ಚಾರ್ಜ್ ಮಾಡೋದು ಏಕೆ ಎಂಬುದನ್ನು ಹಾಗೆ ಡ್ರೈ ವಾಶ್ ಗೆ ಬಳಸುವ ಡಿಟರ್ಜೆಂಟ್, ಬಟ್ಟೆ ವಾಶಿಂಗ್ ವಿಧಾನದ ಬಗ್ಗೆ ನಾವು ಮಾಹಿತಿ ನೀಡ್ತೇವೆ.

ಡ್ರೈ (Dry) ವಾಶ್ ಎಂದರೇನು? : ಹೆಸರೇ ಹೇಳುವಂತೆ ಡ್ರೈ ಅಂದ್ರೆ ಒಣ, ಕ್ಲೀನಿಂಗ್ ಅಂದ್ರೆ ಸ್ವಚ್ಛತೆ. ಒಣ ಅಥವಾ ಶುಷ್ಕವಾಗಿ ನಡೆಯುವ ಕ್ಲೀನಿಂಗ್. ಡ್ರೈ ಕ್ಲೀನಿಂಗ್ (Cleaning) ನಲ್ಲಿ ನೀರನ್ನು ಬಳಸೋದಿಲ್ಲ. ನಾವು ಬಳಸುವ ಬಟ್ಟೆ ಸೋಪ್ ಅಥವಾ ಸೋಪಿನ ಪುಡಿಯನ್ನು ಕೂಡ ಬಳಕೆ ಮಾಡೋದಿಲ್ಲ. ಸೋಪ್ (Soap) ಅಥವಾ ನೀರು ಬಳಸಿದ್ರೆ ಬಟ್ಟೆ ಬಣ್ಣ ಕಳೆದುಕೊಳ್ಳುವ, ಕಲೆಯಾಗುವ ಅಪಾಯವಿರುತ್ತದೆ.

MEN FASHION: ಈ ಕಲರ್ ಕಾಂಬಿನೇಶನ್ ಶರ್ಟ್ - ಪ್ಯಾಂಟ್ ಪುರುಷರಿಗೆ ಸ್ಟೈಲಿಶ್ ಲುಕ್ ಕೊಡುತ್ತೆ!

ಡ್ರೈ ಕ್ಲೀನಿಂಗ್ ಗೆ ಬಳಸುವ ರಾಸಾಯನಿಕ ಯಾವುದು? : ಡ್ರೈ ಕ್ಲೀನಿಂಗ್ ನಲ್ಲಿ ಅನೇಕ ಬಟ್ಟೆಗಳನ್ನು ಒಂದು ದೊಡ್ಡ ಮಶಿನ್ ಗೆ ಹಾಕಿ ಕ್ಲೀನ್ ಮಾಡಲಾಗುತ್ತದೆ. ಕ್ಲೋರಿನೇಟೆಡ್ ದ್ರಾವಕವಾದ ಪರ್ಕ್ಲೋರೋಎಥಿಲೀನ್ ಅನ್ನು ಬಳಸುತ್ತಾರೆ. ಇದಲ್ಲದೇ ಪೆಟ್ರೋಲಿಯಂ ಆಧಾರಿತ ದ್ರಾವಕಗಳಾದ ಸ್ಟಾಡಾರ್ಡ್ ದ್ರಾವಕ, ಹೈಡ್ರೋಕಾರ್ಬನ್ ದ್ರಾವಕ ಇತ್ಯಾದಿಗಳನ್ನು ಇದರಲ್ಲಿ ಬೆರೆಸಲಾಗುತ್ತದೆ. 

ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ, ಈಗ ದುಬೈನಲ್ಲಿ ಅತೀ ಶ್ರೀಮಂತ ಭಾರತೀಯ, ಬೆರಗಾಗಿಸುತ್ತೆ ಒಟ್ಟು ಆಸ್ತಿ ಮೌಲ್ಯ!

ಡ್ರೈ ಕ್ಲೀನಿಂಗ್ ಹೇಗೆ ನಡೆಯುತ್ತದೆ? : ಮೊದಲು ಎಲ್ಲ ಬಟ್ಟೆಗಳನ್ನು ಒಂದು ಯಂತ್ರಕ್ಕೆ ಹಾಕಿ ಬಾಗಿಲು ಮುಚ್ಚಲಾಗುತ್ತದೆ. ರಾಸಾಯನಿಕವನ್ನು ಅದಕ್ಕೆ ಹಾಕಿ, ಯಂತ್ರವನ್ನು ಆನ್ ಮಾಡಲಾಗುತ್ತದೆ. ಸ್ವಲ್ಪ ಸಮಯದ ನಂತ್ರ ಯಂತ್ರವನ್ನು ಬಂದ್ ಮಾಡಲಾಗುತ್ತದೆ. ಮಶಿನ್ ನಲ್ಲಿರುವ ಬಟ್ಟೆಯನ್ನು ತೆಗೆದು ಒಣಗಿಸಲಾಗುತ್ತದೆ. ಬಟ್ಟೆ ಒಣಗಿದ ನಂತ್ರ ಇಸ್ತ್ರಿ ಮಾಡಲಾಗುತ್ತದೆ. ಬಟ್ಟೆಯ ಎಲ್ಲ ಭಾಗದಲ್ಲಿರುವ ತೇವಾಂಶ ಹೋಗುವಂತೆ ಅನೇಕ ಬಾರಿ ಇಸ್ತ್ರಿ ಮಾಡಲಾಗುತ್ತದೆ. 

ಡ್ರೈ ಕ್ಲೀನಿಂಗ್ ಏಕೆ ದುಬಾರಿ? : ಡ್ರೈ ಕ್ಲೀನಿಂಗ್ ಸ್ವಲ್ಪ ದುಬಾರಿ. ಇದಕ್ಕೆ ಕಾರಣ ಡ್ರೈ ಕ್ಲೀನಿಂಗ್ ಗೆ ಬಳಸುವ ರಾಸಾಯನಿಕಗಳ ಬೆಲೆ ಹೆಚ್ಚಿರುವುದು ಕಾರಣ. ಹಾಗಾಗಿಯೇ ಡ್ರೈ ಕ್ಲೀನಿಂಗ್ ಬಟ್ಟೆಗಳಿಗೆ  200-300 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಡ್ರೈ ಕ್ಲೀನಿಂಗ್ ಮಶಿನ್ ಕೂಡ ಸ್ವಲ್ಪ ಭಿನ್ನವಾಗಿರುತ್ತದೆ. ಇವು ವಾಶಿಂಗ್ ಮಶಿನ್ ನಂತೆ ಇದ್ರೂ ನೀರನ್ನು ಬಳಸದ ಮಶಿನ್ ಆಗಿವೆ.

ಡ್ರೈ ಕ್ಲೀನಿಂಗ್ ಬಗ್ಗೆ ಇರುವ ತಪ್ಪು ಕಲ್ಪನೆ : ಡ್ರೈ ಕ್ಲೀನಿಂಗ್ ನಲ್ಲಿ ಬಟ್ಟೆ ಕ್ಲೀನ್ ಆಗುತ್ತದೆ, ಕಲೆಗಳು ಹೋಗುತ್ತವೆ. ಹಾಗೆ ಬಣ್ಣ ಮಾಸುವುದಿಲ್ಲ ಎಂಬುದು ನಿಮಗೆ ಗೊತ್ತು. ಹಾಗಂತ ಎಲ್ಲ ರೀತಿಯ ಕಲೆ ಇದರಿಂದ ಹೋಗೋದಿಲ್ಲ. ಕೆಲ ಹಳೆ ಕಲೆಗಳನ್ನ ತೆಗೆಯಲು ಸಾಧ್ಯವಾಗೋದಿಲ್ಲ. ಹಾಗೆಯೇ ಬಟ್ಟೆ ಕ್ವಾಲಿಟಿ ಚೆನ್ನಾಗಿಲ್ಲವಾದ್ರೆ ಆ ಬಟ್ಟೆಯ ಬಣ್ಣ ಹೋಗುವ ಸಾಧ್ಯತೆ ಇರುತ್ತದೆ. 

Follow Us:
Download App:
  • android
  • ios