ಬೆಂಬಿಡದೇ ಕಾಡುವ ಬೆನ್ನು ನೋವಿಗೆ ಇಲ್ಲಿದೆ ಸಿಂಪಲ್ ಪರಿಹಾರ

First Published 22, Mar 2018, 1:42 PM IST
Here are simple to tips to reduce back pain
Highlights

ಬೆನ್ನುಮೂಳೆ ನಮಗೆ ನಿಲ್ಲಲು ಸಹಾಯ ಮಾಡುತ್ತದೆ ಎಂಬುದನ್ನು ಬಿಟ್ಟರೆ ಈ ಬಗ್ಗೆ ಹೆಚ್ಚೇನೂ ನಮಗೆ ತಿಳಿಯದು. ಆದರೆ ಬೆನ್ನುಮೂಳೆಗೆ ಸಂಬಂಧಿಸಿದ ನೋವುಗಳು ನಮ್ಮನ್ನು ಆಗಾಗ ಬಾಧಿಸುತ್ತಿರುತ್ತವೆ. ಬೆನ್ನುನೋವಿಗೆ ಕಾರಣ ಬದಲಾದ ಜೀವನಶೈಲಿ: ಮಾನವರಾಗಿ ನಾವು ದೈಹಿಕವಾಗಿ ಚಟುವಟಿಕೆಯಿಂದಿರುವಂತೆ ವಿನ್ಯಾಸಗೊಂಡಿದ್ದೇವೆ.

-ಡಾ. ಮುರಳಿಮೋಹನ್ ಎಸ್.


ಬೆನ್ನುಮೂಳೆ ನಮಗೆ ನಿಲ್ಲಲು ಸಹಾಯ ಮಾಡುತ್ತದೆ ಎಂಬುದನ್ನು ಬಿಟ್ಟರೆ ಈ ಬಗ್ಗೆ ಹೆಚ್ಚೇನೂ ನಮಗೆ ತಿಳಿಯದು. ಆದರೆ ಬೆನ್ನುಮೂಳೆಗೆ ಸಂಬಂಧಿಸಿದ ನೋವುಗಳು ನಮ್ಮನ್ನು ಆಗಾಗ ಬಾಧಿಸುತ್ತಿರುತ್ತವೆ. ಬೆನ್ನುನೋವಿಗೆ ಕಾರಣ ಬದಲಾದ ಜೀವನಶೈಲಿ: ಮಾನವರಾಗಿ ನಾವು ದೈಹಿಕವಾಗಿ ಚಟುವಟಿಕೆಯಿಂದಿರುವಂತೆ ವಿನ್ಯಾಸಗೊಂಡಿದ್ದೇವೆ. ಆದರೆ ಇಂದಿನ ಯಾಂತ್ರೀಕೃತ ಅನುಕೂಲತೆಗಳು ನಮ್ಮ ದೈಹಿಕ ಚಟುವಟಿಕೆಗಳಿಗೆ ಕುತ್ತಾಗಿವೆ. ಇದು ಮಾನಸಿಕ ಒತ್ತಡ ಮತ್ತು ಆತಂಕವನ್ನೂ ಹೆಚ್ಚಿಸಿದೆ. ಬೆನ್ನು ಮೂಳೆ ದೇಹದ ತೂಕವನ್ನು ಬೆಂಬಲಿಸುವ ಆಧಾರ ಸ್ತಂಭ. ಇದು ಬೆನ್ನು ಹುರಿಗೆ, ನರಗಳಿಗೆ ರಕ್ಷಣೆ ನೀಡುತ್ತದೆ. ಚಟುವಟಿಕೆಗಳ ಕೊರತೆಯಿಂದ ಬೆನ್ನು ಮೂಳೆ ಸ್ನಾಯುಗಳ ತಿರುವುಗಳನ್ನು ಬದಲಾಯಿಸುತ್ತದೆ.  ಇದು ವಯಸ್ಸಾಗುವಿಕೆ ಮತ್ತು ಕ್ಷೀಣಗೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ಸ್ಪಾಂಡಿಲೋಸಿಸ್ ಎನ್ನುತ್ತಾರೆ.

ಬೆನ್ನುಮೂಳೆಯ ಸದೃಢತೆಗೆ ..
- ಜಂಕ್, ಫಾಸ್ಟ್‌ಫುಡ್‌ಗಳಿಂದ ದೂರವಿರಿ.
- 45 ನಿಮಿಷಗಳ ವಾಕಿಂಗ್ ಅತ್ಯಗತ್ಯ.
- ಬೊಜ್ಜು ಬೆನ್ನು ಮೂಳೆಯ ಭಾರ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಬೊಜ್ಜು ಬರದಂತೆ ಎಚ್ಚರ ವಹಿಸಿ.

ಈ ನಿಯಮ ಪಾಲಿಸಿ
ಕುರ್ಚಿಯ ಪೂರ್ಣ ಭಾರವನ್ನು ಬಳಸಿ ಕುಳಿತುಕೊಳ್ಳಿ. ಬೆನ್ನು ಮೂಳೆಯ ಎಲ್ಲ ತಿರುವುಗಳಿಗೂ ಹೆಚ್ಚಿನ ಭಾರ ಬೀಳಬಾರದು. ಪಾದಕ್ಕೆ ಬೆಂಬಲವಿರಬೇಕು.
- ನಿಲ್ಲುವಾಗ ಕಾಲುಗಳು ಅಗಲವಾಗಿರಬೇಕು. ಮೊಣಕಾಲುಗಳು ಬಿಗಿಯಾಗಿರಬೇಕು. ಭುಜವನ್ನು ಒಳಕ್ಕೆ ಎಳೆದುಕೊಂಡಿರಬಾರದು. ಭುಜದ ಇಳಿಜಾರು ಬೆನ್ನುಮೂಳೆಯ ತಿರುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
- ಉದ್ಯೋಗಿಗಳು ಹೆಚ್ಚು ಹೊತ್ತು ಬಾಗಿ ಕುಳಿತಿರುವುದರಿಂದ ಬೆನ್ನುಮೂಳೆಗೆ ಹಾನಿಯಾಗುತ್ತದೆ.
- ನಿಕೋಟಿನ್, ತಂಬಾಕು, ಧೂಮಪಾನ ಅಥವಾ ಹೊಗೆಸೊಪ್ಪು ಬೆನ್ನುಮೂಳೆಯನ್ನು ದುರ್ಬಲಗೊಳಿಸುತ್ತದೆ. ಇವುಗಳಿಂದ ದೂರವಿರಿ.
 

loader