ಲವ್ವಾ? ಹೀಗೂ ಎಕ್ಸ್‌ಪ್ರೆಸ್ ಮಾಡ್ಬಹುದು ನೋಡಿ...

Here are simple tips to express love
Highlights

ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತೇವೆ. ಅದು ಪತಿ-ಪತ್ನಿಯ ನಡುವಿನ ಪ್ರೇಮವೂ ಆಗಬಹುದು. ಆದರೆ, ಎಕ್ಸೆಪ್ರೆಸ್ ಮಾಡ್ಲಿಕೆ ಮಾತ್ರ ಕಂಜೂಸ್. ಇವೆನ್ನೆಲ್ಲ ಬಿಟ್ಹಾಕಿ. ನಿಮ್ಮ ಕೈಯಲ್ಲಿ ಹೇಗೆ ಆಗುತ್ತೋ, ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ. ಇಲ್ಲಿವೆ ಸಿಂಪಲ್ ಟಿಪ್ಸ್...

ಈಗಷ್ಟೇ ಲವ್ ಅಲ್ಲಿ ಬಿದ್ದಿದ್ದೀರಾ? ಹುಡುಗಿ ಜೊತೆ  ಸುತ್ತಾಡೋ , ಆಕೆ ಕೈ  ಹಿಡಿದ ಕನಸು ಕೂಡ ಬೀಳುತ್ತಿದ್ಯಾ? ಆ ಹುಡುಗಿ ಬಗ್ಗೆ ಫ್ರೆಂಡ್ಸ್ ಜೊತೆಯೂ ಫುಲ್ ಖುಷಿಯಾಗಿ ಹೇಳಿದ್ದಾಗಿದೆ. ಆದರೆ ಆಕೆಯ ಬಳಿ ಹೇಳಲು ಧೈರ್ಯ ಇಲ್ಲ. ಅವರ ಜೊತೆ ನೀವು ತುಂಬಾ ಸಮಯ ಕಳೆದಿರುತ್ತೀರಿ ಅಥವಾ ಯಾವಾಗ್ಲೋ ಒಂದು ಸಾರಿ ಸಿಗುತ್ತಾರೆ.  ಆದರೆ ಪ್ರೀತಿ ತಿಳಿಸಲು ನಿಮಗೆ ಭಯ ಎಂದಾದರೆ ಈ ಸಿಂಪಲ್ ಮತ್ತು ರೊಮ್ಯಾಂಟಿಕ್ ವಿಧಾನದಲ್ಲಿ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಅನ್ನೋದನ್ನು ತಿಳಿಸಿ. 

ಪ್ರೀತಿ ತುಂಬಿದ ನಗು 
ಯಾವಾಗ್ಲೂ ನೀಡೋ ಆ ಸ್ಮೈಲ್ ಅಲ್ಲ , ಆ ನಗುವಿನಲ್ಲಿ ರೋಮ್ಯಾನ್ಸ್ ಇರಲಿ, ಆಕೆಯ ಜೊತೆ ಮಾತನಾಡುವಾಗ ಅಥವಾ ಆಕೆ ಎದುರಿಗೆ ಬಂದಾಗ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮನಸಾರೆ ಒಂದು ನಗು ನಕ್ಕು ಬಿಡಿ. ಅಷ್ಟೇ ಸಾಕು ಅವ್ರಿಗೂ ಅರ್ಥವಾಗುತ್ತೆ. 

ಡಿನ್ನರ್‌ಗೆ ಕರೆದುಕೊಂಡು ಹೋಗಿ
ಇಬ್ಬರು ಜೊತೆಯಾಗಿರುವ ಈ ಸಮಯ ನಿಮ್ಮ ಮನಸ್ಸನ್ನು ಹಗುರ ಮಾಡಲು ಪ್ರೀತಿ ತಿಳಿಸಲು ಸರಿಯಾದ ಸಮಯವಾಗಿದೆ. 

ರೋಮ್ಯಾನ್ಸ್ ಮಾಡಿ 
ಪ್ರೀತಿ ಹೇಳಲೇ ಭಯ, ಇನ್ನು ರೋಮ್ಯಾನ್ಸ್ ಹೇಗೆ ಮಾಡೋದು ಅಂದ್ಕೊಂಡ್ರಾ? ರೋಮ್ಯಾನ್ಸ್ ಎಂದರೆ ಸಮಯ ಸಿಕ್ಕಾಗಲೆಲ್ಲ ಆಕೆಯ ಜೊತೇ ಹೆಚ್ಚಿನ ಸಮಯ ಕಳೆಯಿರಿ. ಮುದ್ದು ಮುದ್ದಾಗಿ ಮಾತನಾಡಿ ಆಕೆಯ ಮನ ಗೆಲ್ಲಲು ಪ್ರಯತ್ನಿಸಿ. 

ಲಾಂಗ್ ಡ್ರೈವ್
ಇದು ಬೆಸ್ಟ್ ಐಡಿಯಾ. ಆಕೆಯನ್ನು ಕರೆದುಕೊಂಡು ಆಕೆಯ ಇಷ್ಟವಾದ ತಾಣಕ್ಕೆ ಲಾಂಗ್ ಡ್ರೈವ್ ಗೆ ಹೋಗಿ. ಇದರಿಂದ ಅವರು ನಿಮಗೆ ಇನ್ನಷ್ಟು ಕ್ಲೋಸ್ ಆಗುತ್ತಾರೆ. 

ಕಣ್ ಕಣ್ಣ ಸಲುಗೆ 
ಯಸ್ ಇದು ತುಂಬಾನೇ ಮುಖ್ಯವಾದ ಅಂಶ. ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿ. ಆದರೆ ಆಕೆಗೆ ಮುಜುಗರ ಆಗೋ ಹಾಗೆ ಮಾಡಬೇಡಿ. 

ಸರ್ ಪ್ರೈಸ್ ನೀಡಿ 
ಆಕೆಗೆ ಸರ್ಫ್ ಪ್ರೈಸ್ ನೀಡಿ, ಗಿಫ್ಟ್, ಚಾಕಲೇಟ್, ಹೂವು ಹೀಗೆ ಏನಾದರೂ ನೀಡಿ ಆಕೆಗೆ ಖುಷಿಯಾಗುವಂತೆ ಮಾಡಿ. 

loader