ಸೂರ್ಯನಲ್ಲಿ ಸಿಗೋ ಪೋಷಕಾಂಶವೂ ಈ ತರಕಾರಿಯಲ್ಲಿದೆ...

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Feb 2019, 1:27 PM IST
Health benefits of Snake gourd
Highlights

ನಮ್ಮ ಪೂರ್ವಿಕರು ಬಳಸುತ್ತಿದ್ದ ಪ್ರತಿಯೊಂದೂ ತರಕಾರಿ ದೇಹಕ್ಕೆ ಅಗತ್ಯವಿರುತ್ತಿತ್ತು. ಆ ಕಾರಣದಿಂದಲೇ ಅವರು ವೈದ್ಯರಿಂದ ಬಹಳ ದೂರವೇ ಉಳಿಯುತ್ತಿದ್ದರು. ಅಂಥ ತರಕಾರಿಯಾದ ಪಡುವಳಕಾಯಿ ದೇಹಕ್ಕೇಕೆ ಬೇಕು?

ಪಡುವಲಕಾಯಿಯಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಮೆಗ್ನಿಷಿಯಂ, ಸುಣ್ಣ, ಗಂಧಕ, ಪೊಟ್ಯಾಶಿಯಂ, ರಂಜಕ, ನಾರು, ಶರ್ಕರ, ಪಿಷ್ಟ, ತಾಮ್ರ, ಕಬ್ಬಿಣ, ಸತು ಅಲ್ಲದೆ ವಿಟಾಮಿನ್ ಎ, ಸಿ, ಡಿ, ಇ ಮತ್ತು ಬಿ1, ಬಿ12 ಜೇವಸತ್ವಗಳೂ ಈ ತರಕಾರಿಯಲ್ಲಿವೆ. ಇಂಥ ತರಕಾರಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಆಗೋ ಲಾಭಗಳೇನು?

  • ಸಂಧಿವಾತ ಮತ್ತು ಮಧುಮೇಹ ಉಪಶಮನವಾಗುತ್ತದೆ.
  • ಶರೀರವನ್ನು ತಂಪಾಗಿಡುತ್ತದೆ. ಅದಕ್ಕೆ ಶೀತ ಪ್ರಕೃತಿಯವರು ಬಳಸದಿದ್ದರೆ ಒಳಿತು. 
  • ಇದರಲ್ಲಿ ಕ್ಯಾಲೋರಿ ಇದ್ದರೂ ದೇಹದ ತೂಕವನ್ನು ಹೆಚ್ಚಿಸದೇ, ಇಳಿಸುತ್ತದೆ. 
  • ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅದಕ್ಕೆ ಮಧುಮೇಹಕ್ಕೆ ಮದ್ದು. 
  • ಪಚನಕ್ರಿಯೆಯನ್ನುಸುಲಭಗೊಳಿಸುತ್ತದೆ. 
  • ಪಡುವಲಕಾಯಿಯಲ್ಲಿರುವ ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ. 
  • ಹೊಟ್ಟೆಯುಬ್ಬರ ಮೊದಲಾದ ಸಮಸ್ಯೆ ನಿವಾರಿಸಿ, ಅರೋಗ್ಯ ಉತ್ತಮವಾಗಿಡುತ್ತದೆ. 
  • ಕಾಮಾಲೆ ರೋಗಿಗಳಿಗೆ ಇದು ಉತ್ತಮ ಔಷಧ. ಕಾಮಾಲೆ ಖಾಯಿಲೆ ಇರೋರು ಅನ್ನದೊಂದಿಗೆ ಪಡುವಲಕಾಯಿಯನ್ನು ಬೇಯಿಸಿ ಸೇವಿಸಿದರೆ ಒಳಿತು.
  • ಈ ತರಕಾರಿಯ ಪಲ್ಯ ಸೇವಿಸುತ್ತಿದ್ದರೆ  ಕ್ಷಯಕ್ಕೂ ಮದ್ದು. 
  • ಪಡುವಲಕಾಯಿ ತಿನ್ನುತ್ತಾ ಬಂದರೆ ದೇಹಕ್ಕೆಅಗತ್ಯ ಶಕ್ತಿ ದೊರೆಯುತ್ತದೆ. 
loader