ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ರಾಗಿ ಒಂದು ಪೂರ್ಣ ಆಹಾರ. ಉಳಿದೆಲ್ಲ ಧಾನ್ಯಗಳಿಗಿಂತ ಹೆಚ್ಚಿನ ಫೈಬರ್ ಹೊಂದಿರುವುದರಿಂದ ಹಾಗೂ ಅಮೈನೋ ಆ್ಯಸಿಡ್ ಟ್ರಿಪ್ಟೋಫಾನ್ ಇರುವುದರಿಂದ ತೂಕ ಇಳಿಸಬೇಕೆನ್ನುವವರಿಗೆ ರಾಗಿ ಹೇಳಿ ಮಾಡಿಸಿದ ಆಹಾರ ಪದಾರ್ಥ.

ಕ್ಯಾಲ್ಸಿಯಂ ವಿಚಾರಕ್ಕೆ ಬಂದರೆ ಇನ್ನಾವುದೇ ಧಾನ್ಯಗಳು ರಾಗಿಯ ಹತ್ತಿರಕ್ಕೂ ಬಂದು ನಿಲ್ಲಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ ರಾಗಿಯಲ್ಲಿದೆ. ಹೀಗಾಗಿ ಹಲ್ಲು, ಮೂಳೆಗಳ ಬಲವರ್ಧನೆಗೆ ಸಹಕಾರಿ.  ಫೈಬರ್ ಹೆಚ್ಚಿರುವುದರಿಂದ ಡಯಾಬಿಟೀಸ್ ನಿಯಂತ್ರಣಕ್ಕೆ ತರುತ್ತದೆ. ಕೊಲೆಸ್ಟೆರಾಲನ್ನು ಕಡಿಮೆಗೊಳಿಸುವುದಲ್ಲದೆ, ಸ್ಟ್ರೆಸ್ ಹಾರ್ಮೋನ್‌ಗಳನ್ನು ನಿಷ್ಕ್ರಿಯಗೊಳಿಸಿ ಮಾನಸಿಕ ಸಮತೋಲನವನ್ನು ಕಾಪಾಡುತ್ತದೆ.  ಅಧಿಕ ಕಬ್ಬಿಣವನ್ನು ಹೊಂದಿರುವುದರಿಂದ ಅನೀಮಿಯಾ ನಿಯಂತ್ರಿಸಿ, ಮನೋಲ್ಲಾಸ ನೀಡುತ್ತದೆ.