ಇಲ್ಲಿದೆ ನೋಡಿ ಉಳಿದ ಅನ್ನದಲ್ಲಿನ ನಿಮ್ಮ ಆರೋಗ್ಯದ ಗುಟ್ಟು.
ರಾತ್ರಿ ಮಾಡಿದ ಅನ್ನ ಹಾಗೆಯೇ ಉಳಿದು ಬಿಟ್ಟದೆ, ಸುಮ್ಮನೆ ವ್ಯರ್ಥ ಆಯಿತು ಎಂದು ಚಿಂತಿಸಬೇಡಿ. ಉಳಿದ ಅನ್ನದಲ್ಲಿ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಕೆಲವು ಅಂಶಗಳಿವೆ. ಇಲ್ಲಿದೆ ನೋಡಿ ಉಳಿದ ಅನ್ನದಲ್ಲಿನ ನಿಮ್ಮ ಆರೋಗ್ಯದ ಗುಟ್ಟು.
ಅನ್ನ ನೈಸರ್ಗಿಕವಾಗಿ ತಂಪು ಉಂಟುಮಾಡುತ್ತದೆ. ಬೆಳಗ್ಗೆ ರಾತ್ರಿಯ ಅನ್ನವನ್ನು ಊಟ ಮಾಡುವುದರಿಂದ ದೇಹ ತಂಪಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನವನ್ನು ಬೆಳಗ್ಗೆ ಸೇವಿಸುವುದರಿಂದ ಉದರ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ. ದೇಹದಲ್ಲಿ ಎಲ್ಲಾದರೂ ಹುಣ್ಣುಗಳಾಗಿದ್ದರೆ ರಾತ್ರಿ ಮಿಕ್ಕಿದ ಅನ್ನವನ್ನು ಅದಕ್ಕೆ ಹಚ್ಚುವುದರಿಂದ ಹುಣ್ಣು ಬೇಗ ವಾಸಿಯಾಗುತ್ತದೆ. ರಾತ್ರಿ ಉಳಿದ ಅನ್ನವನ್ನು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗಿ ದೇಹದ ತೂಕ ಕಡಿಮೆಯಾಗಿತ್ತದೆ.
ರಾತ್ರಿ ಅನ್ನ ಉಳಿದರೆ ಚೆಲ್ಲಬೇಡಿ ಉಪಯೋಗಿಸಿ.
