ನೀವು ಸೆಕ್ಸ್ಟಿಂಗ್ ಮಾಡಲ್ವಾ? ಹಾಗಿದ್ದರೆ ನಾರ್ಮಲ್ ಅಲ್ಲ ಬಿಡಿ!

life | 8/27/2017 | 6:25:00 PM
Chethan Kumar
Suvarna Web Desk
Highlights

ಭಾರತೀಯರಿಗೆ ವಿಷಯದಲ್ಲಿ ಬಹಳ ಮುಜುಗರ. ಹೀಗೆ ಮಾಡುವವರು ನಾಚಿಕೆ ಬಿಟ್ಟವರು ಎಂಬ ಭಾವನೆಯಿದೆ.

ಪ್ರೇಮಿಗಳು, ಅಕ್ರಮ ಸಂಬಂಧ ಹೊಂದಿರುವ ವರು ಅಥವಾ ಗಂಡ-ಹೆಂಡತಿಯರು ಮೊಬೈಲ್‌ನಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ಚಾಟ್ ಮಾಡುವುದೇ ಸೆಕ್ಸ್‌ಟಿಂಗ್. ಭಾರತೀಯರಿಗೆ ಈ ವಿಷಯದಲ್ಲಿ ಬಹಳ ಮುಜುಗರ. ಹೀಗೆ ಮಾಡುವವರು ನಾಚಿಕೆ ಬಿಟ್ಟವರು ಎಂಬ ಭಾವನೆಯಿದೆ. ಆದರೆ, 198 ದೇಶಗಳಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಹೀಗೆ

ಸೆಕ್ಸ್‌ಟಿಂಗ್ ಮಾಡದೇ ಇರುವವರೇ 21ನೇ ಶತಮಾನದಲ್ಲಿ ನಾರ್ಮಲ್ ಮನುಷ್ಯರಲ್ಲವಂತೆ. ಏಕೆಂದರೆ, ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 1,40,೦೦೦ ಜನರಲ್ಲಿ ಶೇ.67ರಷ್ಟು ಜನರು ತಾವು ಸೆಕ್ಸ್‌ಟಿಂಗ್ ಮಾಡುತ್ತೇವೆ, ಅದರಲ್ಲೇನೂ ವಿಶೇಷವಿಲ್ಲ ಎಂದಿದ್ದಾರೆ.

ಅಂದಹಾಗೆ, ಈ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಸೆಕ್ಸ್‌ಟಿಂಗ್ ಮಾಡುವವರು ಅಮೆರಿಕನ್ನರು. ಶೇ.74ರಷ್ಟು ಅಮೆರಿಕನ್ನರು ಈ ಕೆಲಸ ಮಾಡುತ್ತಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಜಪಾನ್, ದಕ್ಷಿಣ ಕೊರಿಯಾಗಳು ಬರುತ್ತವೆ. ಸೆಕ್ಸ್‌ಟಿಂಗ್ ಮಾಡಲು ಕೇವಲ ಎಸ್‌ಎಂಎಸ್, ವಾಟ್ಸಾಪ್‌ಗಳನ್ನಷ್ಟೇ ಇವರು ಬಳಸುವುದಿಲ್ಲ. ಅದಕ್ಕೆಂದೇ ಇರುವ ಹಲವಾರು ಆ್ಯಪ್‌ಗಳನ್ನೂ ಬಳಸುತ್ತಾರೆ. ಇದರಿಂದ ಬದುಕಿನ ಖುಷಿ ಹೆಚ್ಚುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾಗಿ, ಇನ್ಮುಂದೆ ಪ್ರೇಯಸಿ ಅಥವಾ ಪ್ರಿಯಕರನ ಜೊತೆ ಸೆಕ್ಸಿಯಾಗಿ ಚಾಟ್ ಮಾಡುವ ಮುನ್ನ ದೂಸರಾ ಯೋಚನೆ ಮಾಡಬೇಕಿಲ್ಲ!

Comments 0
Add Comment

    ಮತ್ತೆರಡು ಪೂರ್ವ ಸಮೀಕ್ಷೆಯಲ್ಲೂ ಬಯಲಾಯ್ತು ರಾಜ್ಯದ ಫಲಿತಾಂಶ : ಇಲ್ಲೂ ಇದೆ ಟ್ವಿಸ್ಟ್

    karnataka-assembly-election-2018/election-special | 4/23/2018 | 6:52:20 PM