ಶೇಂಗಾ- ಈರುಳ್ಳಿ ಚಟ್ನಿ

Groundnut-Onion Chutney
Highlights

ಶೇಂಗಾ ಚಟ್ನಿ ಗೊತ್ತು. ಜೋಳದ ರೊಟ್ಟಿಯೊಟ್ಟಿಗೆ ಇದನ್ನು ತಿಂದರೆ ಸಿಗೋ ಮಜಾನೇ ಬೇರೆ. ಇದೇ ಚಟ್ನಿಗೆ ಈರುಳ್ಳಿ ಹಾಕಿದರೆ ರುಚಿ ಮತ್ತಷ್ಟು ಹೆಚ್ಚುತ್ದೆ. ಇದನ್ನು ಮಾಡುವ ರೆಸಿಪಿ ನಿಮಗಾಗಿ...

ಬೇಕಾಗುವ ಸಾಮಾಗ್ರಿ:

  • 1 ಚಮಚ ಎಣ್ಣೆ
  •  ಬ್ಯಾಡಗಿ ಮೆಣಸಿನ ಕಾಯಿ
  •  4 ಬೆಳ್ಳುಳ್ಳಿ 
  •  1 ಈರುಳ್ಳಿ
  •  ಉಪ್ಪು
  •  ಕಡ್ಲೆಕಾಯಿ
  • ಸಾಸಿವೆ
  •  ಉದ್ದಿನ ಬೇಳೆ

 ಮಾಡುವ ವಿಧಾನ:

ಬಾಣಲೆಯಲ್ಲಿ 1 ಚಮಚ ಎಣ್ಣೆ, 4 ಬ್ಯಾಡಗಿ ಮೆಣಸು, 4 ಬೆಳ್ಳುಳ್ಳಿ ಎಸಳನ್ನು ಹಾಕಿ ಹುರಿಯಿರಿ. 1 ದೊಡ್ಡ ಈರುಳ್ಳಿ ಹೆಚ್ಚಿ ಹಾಕಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 1/4 ಚಮಚ ಹುರಿದು ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜ ಹಾಕಿ ಹುರಿದು, ಹುಣಸೆ ಹಣ್ಣು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು, ಸಾಸಿವೆ ಉದ್ದಿನಬೇಳೆ ಒಗ್ಗರಣೆ ಕೊಟ್ಟರೆ ಶೇಂಗಾ-ಈರುಳ್ಳಿ ಚಟ್ನಿ ರೆಡಿ.

loader