Asianet Suvarna News Asianet Suvarna News

ಭಾವೀ ಸಂಗಾತಿಯೊಂದಿಗೆ ಈ ವಿಷ್ಯ ಮಾತನಾಡಿದ್ರಾ?

ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುವ ಮುಖ್ಯ ಘಟನೆ. ಜೀವನದ ಏಳು ಬೀಳುಗಳು ಸಿಗೋ ಸಂಗಾತಿ ಮೇಲೆ ಅವಲಂಬಿತವಾಗಿರುತ್ತದೆ. ತಮ್ಮ ವ್ಯಕ್ತಿತ್ವಕ್ಕೆ ತಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವ ಜತೆಗೆ, ಕೆಲವು ವಿಷಯಗಳನ್ನು ಮುಕ್ತವಾಗಿ ಶೇರ್ ಮಾಡಿಕೊಳ್ಳಬೇಕು. ಏನವು?

Five thinks must be shared with fiance
Author
Bengaluru, First Published Sep 15, 2018, 5:47 PM IST

ಮದುವೆಯಾಗುವುದು ಎಂದರೆ ನಿಜಕ್ಕೂ ಅದು ಜೀವನದ ಅತ್ಯಂತ ಮುಖ್ಯ ಘಟ್ಟ. ಮದುವೆಯ ನಂತರ ದಾಂಪತ್ಯ ಜೀವನ ಸುಖಮಯವಾಗಿರಬೇಕು ಎಂದರೆ ಮದುವೆಗೂ ಮುನ್ನ ಸಂಗಾತಿ ಜೊತೆ ಕೆಲವೊಂದು ವಿಷಯಗಳ ಕುರಿತು ಚರ್ಚಿಸಬೇಕು. 

ಮಕ್ಕಳು: ಮದುವೆಗೂ ಮುನ್ನ ಫ್ಯಾಮಿಲಿ ಪ್ಲಾನ್ನಿಂಗ್ ಬಗ್ಗೆ ಮಾತನಾಡಲೇಬೇಕು. ಮದುವೆಯಾದ ಕೂಡಲೇ ಮಗು ಬೇಕೇ? ಅದಕ್ಕೆ ಇಬ್ಬರೂ ಆರ್ಥಿಕವಾಗಿ, ಮಾನಸಿಕವಾಗಿ ತಯಾರಿದ್ದಾರೆಯೇ? ಎಂಬುದನ್ನು ಮೊದಲು ಮಾತನಾಡಬೇಕು. 

ಆರ್ಥಿಕ ಪರಿಸ್ಥಿತಿ: ಮದುವೆಯಾದ ಮೇಲೆ ಹಣಕಾಸಿನ ಬಗ್ಗೆ ಹೆಚ್ಚಿನ ಜೋಡಿಗಳಲ್ಲಿ ಭಿನ್ನಾಭಿಪ್ರಾಯವಿರುತ್ತದೆ. ಆದುದರಿಂದ ಆ ಬಗ್ಗೆ ಮೊದಲೇ ಇಬ್ಬರಿಗೂ ಸ್ಪಷ್ಟ ಚಿತ್ರಣವಿದ್ದರೆ ಬೆಸ್ಟ್. ಜಾಯಿಂಟ್ ಅಕೌಂಟ್ ಬೇಕೆ ? ಅಥವಾ ಬೇರೆ ಬೇರೆ ಅಕೌಂಟ್ ಒಳ್ಳೆಯದಾ? ಸೇವಿಂಗ್ಸ್ ಹೇಗಿದ್ದರೆ ಉತ್ತಮ?  ಹೀಗೆ ಎಲ್ಲಾ ವಿಷಯಗಳ ಬಗ್ಗೆ ಡಿಸ್ಕಸ್ ಮಾಡಬೇಕು

ಫ್ಯಾಮಿಲಿ: ನಿಮ್ಮಮ್ಮ ಫ್ಯಾಮಿಲಿ ಬಗ್ಗೆ ಒಬ್ಬರಿಗೊಬ್ಬರು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರಬೇಕು. ಮದುವೆಯಾದ ಮೇಲೆ ಪೋಷಕರ ಜೊತೆ ಇರುವ ಬಗ್ಗೆ, ಕುಟುಂಬದ ಇತರ ಸದಸ್ಯರ ಬಗ್ಗೆ ಮಾತುಕತೆ ನಡೆಸುವುದು ಮುಖ್ಯ. 

ಕೆಲಸ ಬಗ್ಗೆ: ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವುದೆಂದರೆ ಸಾಕಷ್ಟು ಕಾಂಪ್ರೋಮೈಸ್‌ಗಳು ಅತ್ಯಗತ್ಯ. ಒಬ್ಬರ ಕೆಲಸದ ಬಗ್ಗೆ ಮತ್ತೊಬ್ಬರಿಗೆ ಸ್ಪಷ್ಟ ಅರಿವು ಇರಬೇಕು. ಒಬ್ಬರಿಗೊಬ್ಬರು ಸಹಕರಿಸದೇ ಹೋದರೆ, ಸಂಸಾರದ ಬಂಡಿ ಎಳೆಯುವುದು ಕಷ್ಟ.

ಎಕ್ಸ್ ಲವ್: ತುಂಬಾ ಜನ ತಮ್ಮ ಈಗಿನ ಪ್ರೀತಿ ಚೆನ್ನಾಗಿರಬೇಕೆಂದು ಹಳೆ ಪ್ರೀತಿಯ ವಿಷಯ ಮುಚ್ಚಿಡುತ್ತಾರೆ. ಆದರೆ ಹೀಗೆ ಮಾಡಿದರೆ ಮುಂದೊಂದು ದಿನ ಅವರಿಗೆ ತಿಳಿದರೆ ಕಷ್ಟವಾಗುತ್ತದೆ.  ಆದುದರಿಂದ ಮದುವೆಗೆ ಮೊದಲು ಈ ಬಗ್ಗೆ, ಮತ್ತೊಬ್ಬರ ಭಾವನೆಗೆ ಧಕ್ಕೆಯಾಗದಂತೆ ಎಕ್ಸ್‌ಪ್ರೆಸ್ ಮಾಡಿಕೊಳ್ಳಬೇಕು.
 

Follow Us:
Download App:
  • android
  • ios