ಸೋನಂ ಫಿಟ್‌ನೆಸ್ ಮಂತ್ರ

First Published 23, Mar 2018, 4:16 PM IST
Fitness secret of Sonam Kapoor
Highlights

ಬಾಲಿವುಡ್‌ನ ಹೀರೋಯಿನ್ ಗಳಲ್ಲಿ ಹೆಚ್ಚಿನವರು ಮೊದಲು  ಇಂಡಸ್ಟ್ರಿಗೆ ಬರುವ ಮೊದಲು ಗುಂಡು ಗುಂಡಗೆ ಇದ್ದವರು. ಹೀರೋಯಿನ್ ಆಗ್ಬೇಕು ಅನ್ನುವ ಕಾರಣಕ್ಕೆ ಸಣ್ಣಗಾದವರು.

ಬಾಲಿವುಡ್‌ನ ಹೀರೋಯಿನ್ ಗಳಲ್ಲಿ ಹೆಚ್ಚಿನವರು ಮೊದಲು  ಇಂಡಸ್ಟ್ರಿಗೆ ಬರುವ ಮೊದಲು ಗುಂಡು ಗುಂಡಗೆ ಇದ್ದವರು. ಹೀರೋಯಿನ್ ಆಗ್ಬೇಕು ಅನ್ನುವ ಕಾರಣಕ್ಕೆ ಸಣ್ಣಗಾದವರು.  ಸೋನಂ ಕಪೂರ್ ಮೊದಲಿನ ತೂಕ 85 ಕೆಜಿ. ಈಗ 57 ಕೆ.ಜಿ. ಕೊಕ್ಕರೆಯಂಥಾ ಉದ್ದಕಾಲಿನ ಸುಂದರಿ ಈ ಪರಿ ತೂಕ ಇಳಿಸಿಕೊಂಡದ್ದು ಹೇಗೆ? ಹೇಗಿರುತ್ತೆ ಅವರ ವರ್ಕೌಟ್, ಡಯೆಟ್?

ಸೋನಂ ಡಯೆಟ್ ಲಿಸ್ಟ್
- ಮುಂಜಾನೆ ಲಿಂಬೆ, ಜೇನು ಬೆರೆಸಿದ ಬಿಸಿನೀರು.
- ಬೆಳಗಿನ ಉಪಹಾರಕ್ಕೆ ಓಟ್ ಮೀಲ್ ಜೊತೆಗೆ ಹಣ್ಣುಗಳು. ಬ್ರಂಚ್‌ಗೆ ಶೇಂಗಾ, ತಾಜಾ ಹಣ್ಣಿನ ರಸ ಮತ್ತು ಎಳನೀರು ಸೇವನೆ.
- ಮಧ್ಯಾಹ್ನ ಚಪಾತಿ, ಮಿಲೆಟ್, ಚಿಕನ್, ಫಿಶ್, ದಾಲ್, ತರಕಾರಿ ಇತ್ಯಾದಿ ತಿನ್ನುತ್ತಾರೆ. 

ವರ್ಕೌಟ್ ಏನ್ಮಾಡ್ತಾರೆ?
- ಸ್ಟಾರ್ ಇನ್‌ಸ್ಟ್ರಕ್ಟರ್ ಯಾಸ್ಮಿನ್ ಕರಾಚಿವಾಲ ಮಾರ್ಗದರ್ಶನದಲ್ಲಿ 40 ನಿಮಿಷ ಪಿಲಾಟೆಸ್ ಮಾಡ್ತಾರೆ.
-60  ನಿಮಿಷದ ಪವರ್ ಯೋಗ ಫಿಟ್‌ನೆಸ್ ಮತ್ತು ಮಾನಸಿಕ ಸ್ಥಿರತೆ ವೃದ್ಧಿಗೆ ಸಹಕಾರಿಯಾಗಿದೆ.
- ಅರ್ಧ ಗಂಟೆ ಧ್ಯಾನ ಮಾಡೋದು ಸೋನಂ ದಿನಚರಿಯ ಭಾಗ.
- 1 ಗಂಟೆ ಕಥಕ್ ಡಾನ್ಸ್ ಮಾಡ್ತಾರೆ. ಜೊತೆಗೆ ಸ್ವಿಮ್ಮಿಂಗ್, ಬಾಸ್ಕೆಟ್ ಬಾಲ್, ರಗ್ಬಿ, ಸ್ಕ್ವಾಶ್ ನಂಥ ಆಟಗಳನ್ನು ಆಡ್ತಾರೆ.
- ಇದರ ಜೊತೆ ಟೈಂ ಇದ್ರೆ ಜಿಮ್ ಮಾಡೋದೂ ಇದೆ.

loader