ಬಾಲಿವುಡ್ ಬೆಡಗಿಯರ first ಪೀರಿಯಡ್ಸ್ ಕಥೆ

First Published 18, Jun 2018, 3:48 PM IST
First periods tale by bollywood heroins
Highlights

‘ನಂಗೀವತ್ತು ಪೀರಿಯೆಡ್ಸ್ ..’ ಅಂತ ಮುಖ ಸೊಟ್ಟ ಮಾಡ್ಕೊಂಡು ಹೇಳೋ ಹೆಣ್ಮಕ್ಕಳನ್ನು ನೋಡಿದ್ದೀವಿ. ಅದರಲ್ಲೂ ಹಳ್ಳಿ ಕಡೆ ಪೀರಿಯೆಡ್ಸ್ ಅಂದರೆ ಅಸ್ಪ್ರಶ್ಯರಾದ ಹಾಗೆ, ಸಿಟಿ ಕಡೆ ಬೇರೆಯದೇ ಸಮಸ್ಯೆ. ಇಷ್ಟೆಲ್ಲ ಆದ್ರೂ ಪೀರಿಯೆಡ್ಸ್ಅನ್ನು ಸಂಭ್ರಮಿಸುವವರಿದ್ದಾರೆ. ತಮ್ಮ ಮೊದಲ ಪೀರಿಯೆಡ್ಸ್ ಮತ್ತು ಪೀರಿಯೆಡ್ಸ್ ಬಗ್ಗೆ ಅವರ ಮನಸ್ಥಿತಿಯನ್ನು ಸೆಲೆಬ್ರಿಟಿಗಳು ಹೀಗೆ ಹಂಚಿಕೊಂಡಿದ್ದಾರೆ.

 

ತಾಪ್ಸಿ ಪನ್ನು

ನನ್ನ ಪ್ರಕಾರ ಪೀರಿಯೆಡ್ಸ್ ಆಗೋದರ ಮೂಲಕ ನಾವು ಗಂಡಸರಿಗಿಂತ ಸ್ಟ್ರಾಂಗ್ ಆಗ್ತೀವಿ. ನೋವು ತಿನ್ನೋದು ನಮಗೆ ಅಭ್ಯಾಸ ಆಗುತ್ತೆ. ಕೆಲವೊಬ್ಬರಿಗೆ ಹಾರ್ಟ್ ಅಟ್ಯಾಕ್ ನಲ್ಲಿ ಆಗೋ ಥರದ ನೋವು ಪೀರಿಯೆಡ್ಸ್ ವೇಳೆ ಬರುತ್ತೆ. ಗಂಡಸರುನೋವಿಗೆ ಹೆದರ್ತಾರೆ. ನಾವು ಹೆದರಲ್ಲ, ಎದುರಿಸುತ್ತೀವಿ. ಪಿರಿಯಡ್ಸ್‌ಅನ್ನು ಹುಡುಗಿಯರು ಪಾಸಿಟಿವ್ ಆಗಿ ತಗೊಳ್ಬೇಕು.

ಸೋನಂ ಕಪೂರ್

ನನಗೆ ಪೀರಿಯಡ್ಸ್ ಆದಾಗ ೧೫ ವರ್ಷ. ನನ್ನ ಕ್ಲಾಸ್‌ಮೇಟ್ ಗಳಿಗೆಲ್ಲ ಅದಾಗಲೇ ಪೀರಿಯೆಡ್ಸ್ ಆಗಿತ್ತು. ನನಗೆ ಆತಂಕ ಇತ್ತು, ನನ್ನೊಳಗೇನೋ ಸಮಸ್ಯೆ ಇದೆ ಅಂತ. ಅದನ್ನು ಅಮ್ಮನ ಬಳಿಯೂ ಹೇಳ್ಕೊಂಡಿದ್ದೆ. ಅವರು ಧೈರ್ಯ ತುಂಬಿದ್ದರು. ಎಲ್ಲರೂ ಪೀರಿಯೆಡ್ಸ್ ಆದಾಗ ಬೇಜಾರು ಪಟ್ಕೊಂಡಿದ್ರೆ ನಾನು ಖುಷಿಪಟ್ಟಿದ್ದೆ. ಇದಕ್ಕೆ ಕಾರಣ ನಾನೋ ದಿದ ಶಾಲೆ ಮತ್ತು ಮನೆಯ ವಾತಾವರಣ. ಸಮಾನ ಶಿಕ್ಷಣವಿತ್ತು. ಲೈಂಗಿಕತೆ, ಪೀರಿಯೆಡ್ಸ್ ಬಗೆಗೆಲ್ಲ ತಿಳಿಸಿದ್ದರು. ಹಾಗಾಗಿ ಹುಡುಗರು, ಹುಡುಗಿಯರಿಗೆ ಎಲ್ಲ ವಿಚಾರಗಳೂ ಗೊತ್ತಿತ್ತು. ಮುಕ್ತವಾಗಿ ಮಾತನಾಡುವಷ್ಟು ಸ್ವಾತಂತ್ರ್ಯವಿತ್ತು. ಹಾಗಾಗಿ ಶಾಲೆಯಲ್ಲೇ ಪೀರಿಯೆಡ್ಸ್ ಆದರೂ ಮುಜುಗರ ಪಡುವ ಹಾಗಿರಲಿಲ್ಲ. ನನಗೊತ್ತು, ಎಲ್ಲ ಹೆಣ್ಮಕ್ಕಳಿಗೂ ಈ ಸೌಲಭ್ಯ ಸಿಕ್ಕರಲ್ಲ ಅಂತ. ಗ್ರಾಮೀಣ ಭಾಗದ ಹುಡುಗಿಯರು ಇವತ್ತಿಗೂ ಪೀಡಿಯೆಡ್ಸ್ ಶಾಪ ಅಂತ ತಿಳ್ಕೊಳ್ತಾರೆ. ಅದು ನಿಜಕ್ಕೂ ವರ ಅಂತ ಅವರಿಗೆ ಅರಿವಾಗಬೇಕು.

ಪರಿಣಿತಿ ಚೋಪ್ರಾ

ಪೀರಿಯೆಡ್ಸ್ ಬಗ್ಗೆ ಅಮ್ಮ ಮೊದಲೇ ನನಗೆ ಹೇಳಿದ್ರು. ಇದು ಹೀಗೇ ಆಗುತ್ತೆ ಅಂತ ಕರೆಕ್ಟಾಗಿ ತಿಳಿದಿತ್ತು. ೧೧ ವರ್ಷಕ್ಕೆಲ್ಲ ನನಗೆ ಮೊದಲ ಪೀರಿಯೆಡ್ಸ್ ಆಯ್ತು. ಭಯ, ನೋವು ಏನೂ ಇರಲಿಲ್ಲ. ಅಮ್ಮನ ಬಳಿ ಹೋಗಿ ಹೇಳಿದೆ,‘ನಂಗೆ ಪೀರಿಯೆಡ್ಸ್ ಶುರುವಾಯ್ತು ಅನ್ಸುತ್ತೆ’ ಅಂತ. ಅಮ್ಮ ನಸುನಕ್ಕರು. ಆದರೆ ಅಪ್ಪಂಗೆ ಹೇಳೋದೆ ಕಷ್ಟ ಆಯ್ತು. ಅವರು ಮುಖ ಸಪ್ಪಗೆ ಮಾಡಿ,‘ನನ್ನ ಪುಟ್ ಮಗಳು ದೊಡ್ಡವಳಾದ್ಲು’ ಅಂದ್ರು. ಮತ್ತೇನೂ ಸಮಸ್ಯೆ ಆಗಿಲ್ಲ. ಆದರೆ ಇದರ ಬಗ್ಗೆ ಕೆಲವು ಗಂಡಸರ ಮನೋಭಾವ ನನಗೆ ಸಿಟ್ಟು ತರಿಸುತ್ತದೆ. ಮೊದಲನೆಯದಾಗಿ ಅವರಿಗೆ ಪೀರಿಯಡ್ಸ್ ಬಗೆಗೆ ಸ್ವಲ್ಪವೂ ಜ್ಞಾನವೇ ಇರೋದಿಲ್ಲ. ಅವರು ಅದನ್ನೊಂದು ಸಮಸ್ಯೆ ಅನ್ನೋ ಹಾಗೆ ನೋಡ್ತಾರೆ. ಅದರ ಬಗ್ಗೆ ಮಾತನಾಡಲು ನಾಚಿಕೆ ಪಡ್ತಾರೆ. ಇದರಿಂದ ಆಗಷ್ಟೇ ಮೊದಲ ಪೀರಿಯೆಡ್ಸ್ śಶುರುವಾದ ಪುಟ್ಟ ಹುಡುಗಿಗೆ ಗೊಂದಲ, ನೋವು, ಕಸಿವಿಸಿಯಾಗುತ್ತೆ. 

loader