ದಿಢೀರ್ ಮಾಡ್ಬಹುದು ಮೆಂತ್ಯೆ ಹಿಟ್ಟಿನ ಗೊಜ್ಜು, ನೀವೇ ಮಾಡಿ ರುಚಿ ನೋಡಿ

ಅಡುಗೆ ಕೋಣೆಯಲ್ಲಿ ಸುಲಭವಾಗಿ ಕೈಗೆ ಸಿಗುವ ಮೆಂತೆ ಕಾಳುಗಳು ನಮ್ಮ ಶರೀರಕ್ಕೆ ಬಲು ಉಪಕಾರಿ. ಸಕ್ಕರೆ ಖಾಯಿಲೆಯಿಂದ ಹಿಡಿದು ತಾಯಿಯ ಎದೆ ಹಾಲಿನ ಸಮಸ್ಯೆಯವರೆಗೂ ಅನೇಕ ದೈಹಿಕ ತೊಂದರೆಗಳನ್ನು ನಿವಾರಿಸುವ ಶಕ್ತಿ ಈ ಮೆಂತ್ಯೆ ಕಾಳುಗಳಿಗಿವೆ. ಮಲೆನಾಡಿನ ರುಚಿಕರವಾದ ಮೆಂತ್ಯೆ ಗೊಜ್ಜನ್ನು, ಮೆಂತ್ಯೆಯ ಕಹಿ ಗುಣವನ್ನು ನಾಲಿಗೆಗೆ ಗೊತ್ತಾಗದಂತೆ ತಯಾರಿಸಬಹುದು.  

Famous Malenadu Menthya gojju recipe

ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು: 

Famous Malenadu Menthya gojju recipe

- ನೆನಸಿ ನುಣ್ಣಗೆ ಅರೆದ ಮೆಂತ್ಯೆ ಹಿಟ್ಟು - 2 ಚಮಚ (1 ಚಮಚ ಹುರಿದು ಪುಡಿ ಮಾಡಿದ ಮೆಂತ್ಯೆ ಪುಡಿಯನ್ನು ಬಳಸಬಹುದು)

- ಸಣ್ಣಗೆ ಹೆಚ್ಚಿದ ಈರುಳ್ಳಿ - 2 ಚಮಚ

- ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ

- ಮೊಸರು- 1 ರಿಂದ ಒಂದೂವೆರೆ ಬಟ್ಟಲು

- ನೀರು - 1 / 2 ಬಟ್ಟಲು

- ರುಚಿಗೆ ತಕ್ಕಷ್ಟು ಉಪ್ಪು 

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: 

Famous Malenadu Menthya gojju recipe

1 ದೊಡ್ಡ ಚಮಚ ಎಣ್ಣೆ

- 1 ಚಮಚ ಸಾಸಿವೆ

- 1 ಚಮಚ ಉದ್ದಿನಬೇಳೆ

- 2 ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ

- 1 / 2 ಚಮಚ ಸಣ್ಣಗೆ ಹೆಚ್ಚಿದ ಶುಂಠಿ

- 6 ರಿಂದ 7 ಕರಿಬೇವಿನ ಎಲೆಗಳು

- 1  ಚಿಟಿಕೆ ಇಂಗು(ಬೇಕಾದರೆ ರುಚಿಗೆ ತಕ್ಕಷ್ಟು ಬೆಳ್ಳುಳ್ಳಿ ಮತ್ತು ಒಣಮೆಣಸಿನ ಕಾಯಿಯನ್ನು ಬಳಸಬಹುದು. )

ತಯಾರಿಸಲು ಬೇಕಾಗುವ ಸಮಯ -10 ರಿಂದ 15 ನಿಮಿಷ

ತಯಾರಿಸುವ ವಿಧಾನ 

Famous Malenadu Menthya gojju recipe

ನುಣ್ಣಗೆ ಅರೆದಿಟ್ಟುಕೊಂಡ ಮೆಂತ್ಯೆ ಹಿಟ್ಟನ್ನು ಗೊಜ್ಜಿನ ಪಾತ್ರೆಗೆ  ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ನಂತರ  ಕೊತ್ತಂಬರಿ ಸೊಪ್ಪು, ಹಸಿ ಈರುಳ್ಳಿ, ಗಟ್ಟಿ ಮೊಸರು ಮತ್ತು ನೀರನ್ನು ಸೇರಿಸಿ ಚಮಚದಿಂದ ಚೆನ್ನಾಗಿ ಕಲಸಿ. ಗಮನಿಸಿ ಈ ಮಿಶ್ರಣವನ್ನು ಒಲೆಯ ಮೇಲೆ ಬೇಯಿಸಬಾರದು.  ಈಗ ಮೇಲೆ ತಿಳಿಸಿದ ಸಾಮಗ್ರಿಗಳಿಂದ ಒಗ್ಗರಣೆ ಹಾಕಿ. ರುಚಿರುಚಿಯಾದ ಮೆಂತ್ಯೆ ಹಿಟ್ಟಿನ ಗೊಜ್ಜನ್ನು ಬಿಸಿಬಿಸಿ ಅನ್ನದ ಜೊತೆಗೆ ಸವಿದು ನೋಡಿ.  

 ಆಗುಂಬೆ ವಿದ್ಯಾ 

Latest Videos
Follow Us:
Download App:
  • android
  • ios