Asianet Suvarna News Asianet Suvarna News

Inventions: ತಪ್ಪಾಗಿ ಆವಿಷ್ಕಾರವಾಯ್ತು ಕೆಲ ವಸ್ತು

ಅಗತ್ಯವಿದ್ದಾಗ ಅದಕ್ಕೆ ತಕ್ಕ ವಸ್ತುಗಳ ಪತ್ತೆ ಮಾಡ್ತೇವೆ. ವಿಜ್ಞಾನಿಗಳು ಪ್ರತಿ ದಿನ ಒಂದೊಂದು ಪ್ರಯೋಗ ಮಾಡ್ತಿರುತ್ತಾರೆ. ಆದ್ರೆ ಕೆಲವೊಂದು ವಸ್ತುಗಳು ತಪ್ಪಾಗಿ ಪತ್ತೆಯಾಗಿದ್ದಿದೆ. ಆಕಸ್ಮಿಕವಾಗಿ ಪತ್ತೆಯಾದ್ರೂ ಅದು ದೊಡ್ಡ ಮಟ್ಟದಲ್ಲಿ ಬಳಕೆಯಾಗ್ತಿದೆ.
 

Famous Invention Made By Mistakes
Author
First Published Mar 23, 2023, 3:18 PM IST

ವಿಜ್ಞಾನಿಗಳು ನಮಗೆ ಉಪಯುಕ್ತವಿರುವ ಅನೇಕ ವಸ್ತುಗಳನ್ನು ಆವಿಷ್ಕಾರ ಮಾಡ್ತಿರುತ್ತಾರೆ. ಪ್ರತಿ ದಿನ ನಾವು ಬಳಕೆ ಮಾಡುವ ಅನೇಕಾನೇಕ ವಸ್ತುಗಳ ಆವಿಷ್ಕಾರ ಅವರಿಂದ ಆಗಿದೆ. ಅವಶ್ಯಕತೆಯು ಆವಿಷ್ಕಾರದ ತಾಯಿ ಎಂಬ ಮಾತಿದೆ. ಯಾವುದೋ ವಸ್ತುವಿನ ಅವಶ್ಯಕತೆ ಇದೆ ಎನಿಸಿದಾಗಾ ಅದಕ್ಕೆ ತಕ್ಕಂತೆ ವಸ್ತುವನ್ನು ಆವಿಷ್ಕಾರ ಮಾಡಲಾಗುತ್ತದೆ. ಆದ್ರೆ ಕೆಲವೊಮ್ಮೆ ಆವಿಷ್ಕಾರ ಮಾಡಲು ಹೊರಟ ವಸ್ತುವೇ ಒಂದು, ಆವಿಷ್ಕಾರವಾದ ವಸ್ತುವೇ ಒಂದಾಗುತ್ತದೆ. ಈ ಆವಿಷ್ಕಾರವಾದ ವಸ್ತು ನಿರುಪಯೋಗವಾಗೋದಿಲ್ಲ. ಅನೇಕ ವಸ್ತುಗಳು ಪತ್ತಾಗಿ ಆವಿಷ್ಕಾರವಾಗಿದ್ರೂ ಅದನ್ನು ಬಳಕೆ ಮಾಡಲಾಗ್ತಿದೆ. ಅದು ಈಗ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ನಾವಿಂದು ತಪ್ಪಾಗಿ ಪತ್ತೆಯಾದ ವಸ್ತು ಯಾವುದು ಎಂಬುದನ್ನು ಹೇಳ್ತೇವೆ.

ತಪ್ಪಾಗಿ ಆವಿಷ್ಕಾರ (Invention) ವಾದ ವಸ್ತು : 

ವೆಲ್ಕ್ರೋ (Velcro) : ಇಂದಿನ ಕಾಲದಲ್ಲಿ ವೆಲ್ಕ್ರೋವನ್ನು ಬಟ್ಟೆಯಿಂದ ಶೂಗಳವರೆಗೆ ಅನೇಕ ವಸ್ತುಗಳಿಗೆ ಬಳಸಲಾಗುತ್ತದೆ. ಇದು ಬಳಸಲು ತುಂಬಾ ಸುಲಭ. ಆದರೆ ಇದನ್ನು ತಪ್ಪಾಗಿ ಕಂಡುಹಿಡಿಯಲಾಗಿದೆ. ಸ್ವಿಸ್ ಇಂಜಿನಿಯರ್, ಜಾರ್ಜ್ ಡಿ ಮೆಸ್ಟ್ರಲ್ ಒಮ್ಮೆ ತನ್ನ ನಾಯಿಯೊಂದಿಗೆ ಹೊರಗೆ ಬಂದಿದ್ದರು. ಅಲ್ಲಿ ನಡೆಯುವಾಗ ಅವರ ಬಟ್ಟೆ ಗಿಡವೊಂದಕ್ಕೆ ಸಿಕ್ಕಿಬಿತ್ತು. ಆ ಗಿಡದಲ್ಲಿದ್ದ ಮುಳ್ಳು, ಬಟ್ಟೆಗೆ ಅಂಟಿಕೊಂಡಿತು. ಆಗ ಈ ಸಮಸ್ಯೆ ಬಗೆಹರಿಸಲು ವೆಲ್ಕ್ರೋವನ್ನು ತಯಾರಿಸುವ ಬಗ್ಗೆ ಆಲೋಚನೆ ಮಾಡಿದ್ರು.  

Fast Food: ಹೆಚ್ಚಿನ ಭಾರತೀಯರು ಖುಷಿಯಾದ್ರೆ ತಿನ್ನೋದೇನು?

ಕ್ಷ-ಕಿರಣ (X-ray) : ದೇಹದೊಳಗೆ ಏನೇ ಸಮಸ್ಯೆಯಾದ್ರೂ ಅದನ್ನು ಪತ್ತೆ ಹಚ್ಚುವ ಕೆಲಸವನ್ನು ಎಕ್ಸ್ ರೇ ಮಾಡುತ್ತದೆ. ಮೂಳೆ ಮುರಿದ್ರೆ ಅದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇದನ್ನು 1895 ರಲ್ಲಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಎಂಬ ಭೌತಶಾಸ್ತ್ರದ ಪ್ರಾಧ್ಯಾಪಕರು ತಪ್ಪಾಗಿ ಕಂಡುಹಿಡಿದರು. ವಾಸ್ತವವಾಗಿ ಅವರು ಅದರ ಮೇಲೆ ಕ್ಯಾಥೋಡ್ ರೇ ಟ್ಯೂಬ್ ಮಾಡುವ ಕೆಲಸ ಮಾಡುತ್ತಿದ್ದರು. ಆ ವೇಳೆ ಟ್ಯೂಬ್‌ಗೆ ಕಪ್ಪು ರಟ್ಟಿನ ಪೆಟ್ಟಿಗೆಯನ್ನು ಹೊದಿಸಿ, ಕರ್ಟನ್‌ಗಳನ್ನು ಎಳೆದು ಕತ್ತಲಲ್ಲಿಟ್ಟಿದ್ದರು. ಆದರೆ ಕೊಳವೆಯ ಬಳಿ ಇಟ್ಟಿರುವ ಬೇರಿಯಂ ಪ್ಲೇಟ್‌ಗಳು ಮತ್ತು ಸೈನೈಡ್‌ನ ತುಂಡುಗಳಿಂದ ಸ್ವಲ್ಪ ಬೆಳಕು ಹೊರಹೊಮ್ಮುವುದನ್ನು ಅವರು ಗಮನಿಸಿದರು. ಕೆಳಗೆ ಇಟ್ಟಿರುವ ಕಾಗದವು ಹೊದಿಕೆಯ ಹೊರತಾಗಿಯೂ ಗೋಚರಿಸಿತು. ಇದನ್ನು ನೋಡಿ ಅವರಿಗೆ ಬಹಳ ಆಶ್ಚರ್ಯವಾಯಿತು. ಆದರೆ ಅವರ ಈ ಪ್ರಯೋಗ ಎಕ್ಸ್ ಕಿರಣಗಳ ಆವಿಷ್ಕಾರಕ್ಕೆ ಕಾರಣವಾಯಿತು.

ಪಾಪ್ಸಿಕಲ್ : ಬೇಸಿಗೆ ಬಂತೆಂದ್ರೆ ಎಲ್ಲರೂ ಇಷ್ಟಪಟ್ಟು ತಿನ್ನೋದ್ರಲ್ಲಿ ಪಾಪ್ಸಿಕಲ್ ಕೂಡ ಒಂದು. ಇದು ಕೂಡ ಮಗುವಿನಿಂದ ಆಕಸ್ಮಿಕವಾಗಿ ಆವಿಷ್ಕಾರವಾಗಿದ್ದು. 1905 ರಲ್ಲಿ, ಫ್ರಾಂಕ್ ಎಪ್ಪರ್ಸನ್ ಸೋಡಾ ತಯಾರಿಸಿದ್ದ. ಒಂದು ಲೋಟಕ್ಕೆ ಸೋಡಾ ಪುಡಿ ಮತ್ತು ನೀರನ್ನು ಹಾಕಿ, ಒಂದು ಚಮಚವನ್ನು ಹಾಕಿ ಇಟ್ಟಿದ್ದ. ಚಳಿಯಿಂದಾಗಿ ಆ ಸೋಡಾ ಹೆಪ್ಪುಗಟ್ಟಿತು. ಅದು ಮೊದಲ ಪಾಪ್ಸಿಕಲ್ ಆಯ್ತು. ಸುಮಾರು ಇಪ್ಪತ್ತು ವರ್ಷಗಳ ನಂತರ ಅಪ್ಪರ್ಸನ್ ಪಾಪ್ಸಿಕಲ್ ಪೇಟೆಂಟ್ ಪಡೆದ. ಮೊದಲು ಪಾಪ್ಸಿಕಲ್ ಅನ್ನು ಎಪ್ಸಿಕಲ್ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಮಕ್ಕಳು ಇದನ್ನು ಪಾಪ್ಸ್ ಸಿಕಲ್ ಎಂದು ಕರೆಯಲು ಪ್ರಾರಂಭಿಸಿದರು. ಅದರ ನಂತರ ಅದರ ಹೆಸರು ಪಾಪ್ಸಿಕಲ್ ಆಯಿತು.

Longest Beard ಬಿಟ್ಟು ದಾಖಲೆ ಬರೆದ ವ್ಯಕ್ತಿ. ಮೆಂಟೈನ್ ಸೀಕ್ರೆಟ್ ಇದು

ಕೋಕಾ ಕೋಲಾ : ಕೋಕಾಕೋಲಾ ಕೂಡ ಈಗ ಜನರು ಇಷ್ಟಪಟ್ಟು ಕುಡಿಯುವ ಕೋಲ್ಡ್ ಡ್ರಿಂಕ್ಸ್ ನಲ್ಲಿ ಒಂದು. ಇದನ್ನು ಮೊದಲು ಕೋಲ್ಡ್ ಡ್ರಿಂಕ್ಸ್ ಆಗಿ ಪತ್ತೆ ಮಾಡಿರಲಿಲ್ಲ. ತಲೆನೋವು ಮತ್ತು ಆತಂಕ ಇತ್ಯಾದಿಗಳನ್ನು ನಿವಾರಿಸಲು ಔಷಧಿಯಾಗಿ ಕಂಡುಹಿಡಿಯಲಾಗಿತ್ತು.  ಜಾನ್ ಪೆಂಬರ್ಟನ್ ಈ ಸಿರಪ್ ತಯಾರಿಸುವಾಗ, ಕಾರ್ಬೊನೇಟೆಡ್ ನೀರು ಆಕಸ್ಮಿಕವಾಗಿ ಅದರಲ್ಲಿ ಅದ್ದಿ ಹೋಗಿತ್ತು. ಇದನ್ನು ಜಾನ್ ಪರೀಕ್ಷೆ ಮಾಡಿದ್ರು. ಅದ್ರ ರುಚಿ ಅವರಿಗೆ ಇಷ್ಟವಾಯ್ತು. 

Follow Us:
Download App:
  • android
  • ios