ಕಾಲ ಯಾವುದೇ ಇರಬಹುದು, ಆದರೆ ಎಲ್ಲಾ ಸಮಯಕ್ಕೂ ತುಟಿ ಒಡೆಯುತ್ತದೆ. ಎಲ್ಲ ಸಮಯದಲ್ಲೂ ತುಟಿಯ ತಾಜಾತನ ಕಾಪಾಡಲು ಲಿಪ್ ಬಾಮ್ ಬೇಕೇ ಬೇಕು. ಹಾಗಂತ ಪ್ರತಿ ಬಾರಿಯೂ ಕೆಮಿಕಲ್ ಇರೋ ಲಿಪ್ ಬಾಮ್ ಬಳಸಿದರೆ ಸೈಡ್ ಎಫೆಕ್ಟ್ ಬರಬಹುದು. ಅದಕ್ಕೆ ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸೋದು ಬೆಸ್ಟ್. 

 

ಚಾಕಲೇಟ್ ಲಿಪ್ ಬಾಮ್: ಒಂದು ಚಮಚ ಚಾಕಲೇಟ್, ಅರ್ಧ ಚಮಚ ನ್ಯೂಟೇಲಾ ಮತ್ತು ಒಂದು ಚಮಚ ವ್ಯಾಕ್ಸ್ 

ತಯಾರಿಸುವ ವಿಧಾನ: ಮೊದಲಿಗೆ ಚಾಕಲೇಟ್ ಮತ್ತು ವ್ಯಾಕ್ಸ್ ಅನ್ನು ಪ್ರತ್ಯೇಕವಾಗಿ ಕರಗಿಸಿಕೊಳ್ಳಿ. ಈಗ ಎರಡನ್ನೂ ಜೊತೆಯಾಗಿ ಮಿಕ್ಸ್ ಮಾಡಿ. ಇದರಲ್ಲಿ ನ್ಯೂಟೇಲಾ ಹಾಕಿ. ಈ ಮಿಶ್ರಣವನ್ನು ಹತ್ತು ನಿಮಿಷ ತಂಪಾಗಿಸಿ, ನಂತರ 4 ಗಂಟೆ ಫ್ರೀಜ್ ಮಾಡಿ. ಈಗ ಚಾಕಲೇಟ್ ಲಿಪ್ ಬಾಮ್ ರೆಡಿ. 

ಲೆಮನ್ ಲಿಪ್ ಬಾಮ್ : ಒಂದು ಚಮಚ ವ್ಯಾಸೆಲಿನ್, ಒಂದು ಚಮಚ ನಿಂಬೆ ರಸ, ಒಂದು ಚಮಚ ಜೇನು. 

ತಯಾರಿಸುವ ವಿಧಾನ: ಗ್ಲಾಸ್ ಬೌಲ್‌ನಲ್ಲಿ ವ್ಯಾಸಲಿನ್ ಹಾಕಿ ಅದನ್ನು ಮೈಕ್ರೋವೇವ್ ನಲ್ಲಿ 30 ನಿಮಿಷದವರೆಗೆ ಇರಿಸಿ. ಈಗ ಇದರಲ್ಲಿ ನಿಂಬೆ ರಸ ಮತ್ತು ಜೇನು ಹಾಕಿ ಮಿಕ್ಸ್ ಮಾಡಿ. ಇದನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡಿ. ಹತ್ತು ನಿಮಿಷದ ನಂತರ ಇದನ್ನು ಫ್ರೀಜರ್‌ನಲ್ಲಿ ಹಾಕಿಡಿ.

ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!