ಹಿಂದೆಲ್ಲಾ ಮಣ್ಣಿನ ಪಾತ್ರೆಗಳನ್ನೇ ಹೆಚ್ಚಾಗಿ ಅಡುಗೆ (Cooking) ಮಾಡಲು ಬಳಸುತ್ತಿದ್ದರು. ಆದರೆ ಈಗಂತೂ  ಪ್ಲಾಸ್ಟಿಕ್‌, (Plastic) ಪಿಂಗಾಣಿ ಪಾತ್ರೆಗಳು ಹೆಚ್ಚು ಬಳಕೆಯಲ್ಲಿವೆ. ಸ್ಟೈಲಾಗಿ ಇರುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಇದನ್ನೇ ಉಪಯೋಗಿಸುತ್ತಾರೆ. ಆದರೆ ಅಡುಗೆಗೆ ಸ್ಟೀಲ್ (Steel) ಪಾತ್ರೆಗಳನ್ನು ಬಳಸೋದ್ರಿಂದ ಆರೋಗ್ಯ (Health)ಕ್ಕೆಷ್ಟು ಪ್ರಯೋಜನವಿದೆ ಗೊತ್ತಾ ?

ಕಾಲ ಬದಲಾದಂತೆ ನಂಬಿಕೆಗಳು, ಆಚರಣೆಗಳು ಬದಲಾಗುತ್ತಾ ಹೋಗುತ್ತವೆ. ನಂಬಿಕೆಯೆಂದು ಮೂಢನಂಬಿಕೆಯಾಗುತ್ತದೆ. ಆಚರಣೆಯೆಂಬುದು ಮೌಢ್ಯಾಚರಣೆಯಾಗುತ್ತದೆ. ಅರ್ಥಪೂರ್ಣ ವಿಷಯಗಳೆಲ್ಲವೂ ಅರ್ಥಹೀನ ಎಂದೆನಿಸಿ ಬಿಡುತ್ತದೆ. ಅಂಥಾ ವಿಷಯಗಳಲ್ಲೊಂದು ಸ್ಟೀಲ್ ಪಾತ್ರೆ (Steel Vessels)ಗಳನ್ನು ಬಳಸುವ ವಿಚಾರ. ಪುರಾತನ ಕಾಲದಲ್ಲಿ ಮನುಷ್ಯರು ಎಲೆ, ಹಾಳೆಗಳನ್ನೇ ಪಾತ್ರೆಗಳನ್ನಾಗಿ ಮಾಡಿಕೊಂಡಿದ್ದರು. ಬಳಿಕ ಮಣ್ಣಿನ ಪಾತ್ರೆಗಳು ಬಳಕೆಗೆ ಬಂದವು. ನಂತರದ ದಿನಗಳಲ್ಲಿ ಅಲ್ಯುಮಿನಿಯಂ, ತಾಮ್ರದ ಪಾತ್ರೆಗಳು ಬಳಕೆಗೆ ಬಂದವು. ನಂತರದ ದಿನಗಳಲ್ಲಿ ಸ್ಟೀಲ್ ಪಾತ್ರೆಗಳ ಬಳಕೆ ಶುರುವಾಯ್ತು. 

ಆದರೆ ಈಗಂತೂ ಪ್ಲಾಸ್ಟಿಕ್‌, ಪಿಂಗಾಣಿ ಪಾತ್ರೆಗಳು ಹೆಚ್ಚು ಬಳಕೆಯಲ್ಲಿವೆ. ಸ್ಟೈಲಾಗಿ ಇರುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಇದನ್ನೇ ಉಪಯೋಗಿಸುತ್ತಾರೆ. ಆದರೆ ಅಡುಗೆಗೆ ಸ್ಟೀಲ್ ಪಾತ್ರೆಗಳನ್ನು ಬಳಸೋದ್ರಿಂದ ಆರೋಗ್ಯ (Health)ಕ್ಕೆಷ್ಟು ಪ್ರಯೋಜನವಿದೆ ಗೊತ್ತಾ ?

ಸ್ಟೀಲ್ ಪಾತ್ರೆಗಳಲ್ಲಿ ಆಹಾರ (Food)ವನ್ನು ಬೇಯಿಸುವುದರಿಂ ಇದು ಉತ್ತಮ ಪರಿಮಳವನ್ನು ಪಡೆದುಕೊಳ್ಳುತ್ತದೆ. ಮಾತ್ರವಲ್ಲ ಸ್ಟೀಲ್ ಪಾತ್ರೆಗಳಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯೂ ಸರಾಗವಾಗುತ್ತದೆ. ಉದರ ಸಮಸ್ಯೆ, ಹೊಟ್ಟೆ ತೊಳೆಸುವಿಕೆ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಮಾತ್ರವಲ್ಲ ದೀರ್ಘಕಾಲ ಆರೋಗ್ಯವಾಗಿರಲು ಸ್ಟೀಲ್ ಬಟ್ಟಲಿನಲ್ಲಿ ಊಟ ಮಾಡುವ ಅಭ್ಯಾಸ ಸಹಾಯ ಮಾಡುತ್ತದೆ.

ನೆಮ್ಮದಿಯೇ ಇಲ್ಲದಂತಾಗಿದ್ಯಾ ? ಮನೆಯಲ್ಲೇ ಅಡುಗೆ ಮಾಡಿ ತಿಂದು ನೋಡಿ

ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಅಥವಾ ಅಲಂಕಾರಿಕ ಪಿಂಗಾಣಿಗಳಲ್ಲಿ ಆಹಾರವು ಉತ್ತಮವಾಗಿ ಕಾಣುತ್ತದೆ. ಆದರೆ ಇದು ರುಚಿಯಾಗಿದೆಯೇ ಮತ್ತು ಆರೋಗ್ಯಕ್ಕೆ ಒಳ್ಳೆಯದಾ. ಹೀಗೊಂದು ಚರ್ಚೆ ಟ್ವಿಟರ್‌ (Twitter)ನಲ್ಲಿ ನಡೆದಿದೆ. ಬಳಕೆದಾರರೊಬ್ಬರು ನಾನು ಇವತ್ತಿಗೂ ಸ್ಟೀಲ್ ಪಾತ್ರೆಗಳನ್ನೇ ಬಳಸುತ್ತೇನೆ. ಊಟ ಮಾಡಲು ಸ್ಟೀಲ್ ಬಟ್ಟಲುಗಳನ್ನೇ ಬಳಸುತ್ತೇನೆ. ಇದರಿಂದೇನಾದರೂ ತೊಂದರೆಯಿದೆಯೇ ಎಂದು ಕೇಳಿದರು. ಇದಕ್ಕೆ ಹಲವಾರು ರೀತಿಯಲ್ಲಿ ಕಾಮೆಂಟ್‌ಗಳು ಬಂದಿವೆ. ಒಬ್ಬರು ನಾನು ಸ್ಟೀಲ್ ಪ್ಲೇಟ್‌ಗಳಿಂದ ಎಲ್ಲವನ್ನೂ ತಿನ್ನುತ್ತೇನೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ನನಗೆ ತಿಳಿದಿದೆ. ಮತ್ತು ನಾನು ಅದರ ಬಗ್ಗೆ ಎರಡು ಬಾರಿ ಯೋಚಿಸಿಲ್ಲ ಎಂದು ಹೇಳಿದ್ದಾರೆ. 

ಇನ್ನೊಬ್ಬ ಬಳಕೆದಾರರು ಸ್ಟೀಲ್ ಪ್ಲೇಟ್‌ಗಳಲ್ಲಿ ತಿನ್ನುವ ಉತ್ತಮ ಪ್ರಯೋಜನವೆಂದರೆ ಸೆರಾಮಿಕ್ ಪ್ಲೇಟ್‌ಗಳು ಬೇಗನೆ ಒಡೆದುಹೋಗುತ್ತವೆ. ಆದರೆ ಸ್ಟೀಲ್ ಪಾತ್ರೆಗಳನ್ನು ಒಳಸುವುದರಿಂದ ಒಡೆದು ಹೋಗುತ್ತದೆ ಎಂಬ ಭಯವಿಲ್ಲ ಎಂದಿದ್ದಾರೆ. ಕೆಲ ಬಳಕೆದಾರರು ಸ್ಟೀಲ್ ಪ್ಲೇಟ್‌ಗಳ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. ವಿದೇಶದಲ್ಲಿರುವ ವ್ಯಕ್ತಿಯೊಬ್ಬರು ತಾವು ಅದೆಷ್ಟೋ ವರ್ಷಗಳಿಂದ ಸ್ಟೀಲ್ ಪಾತ್ರೆ ಬಳಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ವಯಸ್ಸು 40 ಮತ್ತು ನಾನು ನನ್ನ ಜೀವನದುದ್ದಕ್ಕೂ ಅದನ್ನೇ ಬಳಸಿದ್ದೇನೆ .. ಕಳೆದ 15 ವರ್ಷಗಳಲ್ಲಿ ನಾನು 50% ರಷ್ಟು ಭಾರತದ ಹೊರಗೆ ಇದ್ದೇನೆ ಮತ್ತು ಅದೇ ಮುಂದುವರಿಯುತ್ತದೆ ಎಂದಿದ್ದಾರೆ.

ಹೊಟ್ಟೆ ಬರ್ಬಾರ್ದು ಅಂದ್ರೆ ಕುಳಿತು cook ಮಾಡಿ!

ಭಾರತೀಯ ಮನೆಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪ್ಲೇಟ್‌ಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅವು ತುಕ್ಕು ನಿರೋಧಕ, ಬಾಳಿಕೆ ಬರುವವು ಮತ್ತು ಪ್ರತಿ ಬಾರಿ ಸ್ಕ್ರಬ್ ಮಾಡಿದಾಗ ಮೇಲ್ಮೈಯನ್ನು ನವೀಕರಿಸಲಾಗುತ್ತದೆ. ಈ ಫಲಕಗಳು ಕಬ್ಬಿಣ, ಕ್ರೋಮಿಯಂ ಮತ್ತು ನಿಕಲ್ ಅನ್ನು ಹೊಂದಿರುತ್ತವೆ. ನಾವು ಸ್ಟೀಲ್ ಪ್ಲೇಟ್‌ಗಳಿಂದ ತಿನ್ನುವಾಗ, ಈ ಲೋಹಗಳು ಆಹಾರದ ಮೂಲಕ ನಮ್ಮ ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ. ಕಬ್ಬಿಣ ಮತ್ತು ಕ್ರೋಮಿಯಂ ನಮಗೆ ದೈನಂದಿನ ಅಗತ್ಯವಿರುವ ಪೋಷಕಾಂಶಗಳಾಗಿವೆ ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿರುವ ನಿಕಲ್ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಬರದಂತೆ ತಡೆಯುತ್ತದೆ.

ಸ್ಟೀಲ್ ಪ್ಲೇಟ್‌ಗಳಲ್ಲಿ ಆಹಾರದ ರುಚಿ ಹೆಚ್ಚು ಎಂದು ಟ್ವೀಪಲ್‌ನ ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರರು ಸ್ಟೀಲ್ ಪ್ಲೇಟ್‌ಗಳು ಚೆನ್ನಾಗಿವೆ, ಅನ್ನ ಮತ್ತು ಮಸಾಲೆಯುಕ್ತ ಮೇಲೋಗರಗಳು ಉತ್ತಮ ರುಚಿಯನ್ನು ನೀಡುತ್ತವೆ ಎಂದಿದ್ದಾರೆ.