ಕೆಲವರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ, ಆ ಬಳಿಕ ಭಯಪಟ್ಟು ಅದರಿಂದ ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ. ಈ ಕಾರಣದಿಂದಲೇ ತಮಗೆ ಏನೋ ಸಮಸ್ಯೆ ಆಗಿಹೋಗಿದೆ ಎಂದೇ ಭಾವಿಸಿ, ಕೆಲವರು ಅದರಿಂದ ನೊಂದುಕೊಂಡು ಡಿಪ್ರೆಶನ್‌ಗೂ.. ಡಾಕ್ಟರ್ ಸಲಹೆ ನೋಡಿ..

ಪ್ರತಿಯೊಬ್ಬ ಪುರುಷರೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಹಸ್ತ ಮೈಥುನವನ್ನು (Masturbation) ಮಾಡಿಕೊಂಡಿರುತ್ತಾರೆ. ಶೇ. 95 ರಿಂದ 100 ರಷ್ಟು ಪುರುಷರು ಹಲವಾರು ಬಾರಿ ಹಸ್ತಮೈಥುನ ಮಾಡಿಕೊಂಡೇ ಇರುತ್ತಾರೆ. ಈ ಹಸ್ತ ಮೈಥುನ ಮಾಡಿಕೊಂಡಾಗ ಶಿಶ್ನವು ನಿಮಿರುವುದು, ವೀರ್ಯ ಸ್ಖಲನ ಆಗುವುದು, ಇವುಗಳನ್ನು ನೋಡಿದಾಗ, ಪುರುಷರಿಗೆ ಲೈಂಗಿಕತೆಯ ಬಗ್ಗೆ ಅರಿವು ಮೂಡುತ್ತದೆ. ಜೊತೆಗೆ, ತನ್ನ ದೇಹ ಸರಿಯಾಗಿ ಕೆಲಸ ಮಾಡುತ್ತದೆ ಎಂಬ ಅರಿವು ಕೂಡ ಮೂಡುತ್ತದೆ. 

ಪುರುಷರು ಹದಿಹರೆಯಕ್ಕೆ ಕಾಲಿಟ್ಟಾಗ ಲೈಂಗಿಕ ಭಾವನೆಗಳು, ಉದ್ರೇಕಗಳು ಸಾಮಾನ್ಯ. ಈ ಸಮಯದಲ್ಲಿ ಹಸ್ತ ಮೈಥುನ ಮಾಡಿಕೊಂಡು, ಬಳಿಕ ಅದನ್ನು ಮರೆತು, ಎಂದಿನ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಪದೇ ಪದೇ ಹಸ್ತ ಮೈಥುನ ಮಾಡಿಕೊಂಡು, ಊಟ-ತಿಂಡಿ, ನಿದ್ದೆ ಎಲ್ಲವನ್ನೂ ಮರೆತು, ಅದನ್ನೇ ಒಂದು ಗೀಳಾಗಿಸಿಕೊಂಡರೆ ಅದರಿಂದ ಸಮಸ್ಯೆ ಸಾಧ್ಯ. ಏಕೆಂದರೆ, ಅದು ಪರುಷರ ದಿನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಿ ಉಂಟುಮಾಡುವುದು ಗ್ಯಾರಂಟಿ. 

ಮನೆಯಲ್ಲಿ ಹೋಟೆಲ್ ನಂತೆ ಗಟ್ಟಿ ಮೊಸರು ಮಾಡುವ ಸುಲಭ ವಿಧಾನ

ಕೆಲವರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ, ಆ ಬಳಿಕ ಭಯಪಟ್ಟು ಅದರಿಂದ ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ. ಈ ಕಾರಣದಿಂದಲೇ ತಮಗೆ ಏನೋ ಸಮಸ್ಯೆ ಆಗಿಹೋಗಿದೆ ಎಂದೇ ಭಾವಿಸಿ, ಅದರಿಂದ ನೊಂದುಕೊಂಡು ಡಿಪ್ರೆಶನ್‌ಗೂ ಕೆಲವರು ಹೋಗುತ್ತಾರೆ. ಅಂತವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಕೂಡ ಈ ಸಂಗತಿಯನ್ನು ಹಂಚಿಕೊಳ್ಳುವುದಿಲ್ಲ. ಇದರಿಂದ ಪರಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. 

ಹಸ್ತ ಮೈಥುನ ಚಟದಿಂದ ಹೊರಬರಲಾಗದೇ ಒದ್ದಾಡಿ ಡಿಪ್ರೆಶನ್‌ಗೆ ಹೋಗಿರುವ ಅವರು, ಡಿಪ್ರೆಶನ್‌ನಿಂದಲೂ ಹೊರಬರಲಾಗದೇ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿ ನರಳುತ್ತಾರೆ. ಅಂತಹ ಪರುಷರಿಗೆ ಆಪ್ತ ಸಮಾಲೋಚನೆ, ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅದು ಸೂಕ್ತ ಸಮಯದಲ್ಲಿ ದೊರಕಿದರೆ ಅವರು ಈ ಎರಡೂ ಸಮಸ್ಯೆಗಳಿಂದ ಆದಷ್ಟು ಬೇಗ ಹೊರಗೆ ಬರಲು ಸಾಧ್ಯ. ಹಸ್ತ ಮೈಥುನದಿಂದ ಯಾವುದೇ ಸಮಸ್ಯೆ ಆಗೋದಿಲ್ಲ. ಆದರೆ, ಅದನ್ನು ಚಟವಾಗಿ ಮಾಡಿಕೊಂಡು ಬೇರೆಯದನ್ನು ಅಸಡ್ಡೆ ಮಾಡಿದಾಗ ಸಮಸ್ಯೆ ಶುರುವಾಗುತ್ತದೆ ಅಷ್ಟೇ. 

ಅಡುಗೆಮನೆ ಕ್ಲೀನ್‌ ಮಾಡೋ ಐಡಿಯಾ: ನಿಮ್ಮ ಕಿಚನ್ ಯಾವಾಗ್ಲೂ ಕ್ಲೀನ್ ಆಗಿ ಇರೋದು ಖಂಡಿತ!

ಇನ್ನು, ಯಾವಾಗಲೋ ಒಮ್ಮೆ ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದರಿಂದ ವೀರ್ಯ ನಾಶವಾಗಿಹೋಯ್ತು, ಕೂದಲು ಅದೇ ಕಾರಣಕ್ಕೆ ಉದುರುತ್ತಿದೆ, ನನಗೆ ಅದಕ್ಕೇ ನಿಶ್ಯಕ್ತಿ ಆಗುತ್ತಿದೆ, ನನಗೆ ಹಸ್ತ ಮೈಥುನದಿಂದಲೆ ಬೆನ್ನು ನೋವು, ತಲೆನೋವು ಅಂತ ಎಲ್ಲ ಸಮಸ್ಯೆಗೂ ಅದೇ ಕಾರಣ ಎಂದುಕೊಂಡರೆ ಅದು ಮೂರ್ಖತನದ ಪರಮಾವಧಿ. 

ಹೊಸ ವೀರ್ಯ ದಿನನಿತ್ಯ ಉತ್ಪತ್ತಿ ಆಗುತ್ತಲೇ ಇರುತ್ತದೆ, ಹಳೆಯದು ಯಾವುದೋ ಒಂದು ರೀತಿಯಲ್ಲಿ ಖಾಲಿ ಆಗುತ್ತಲೆ ಇರುತ್ತದೆ. ಅದು ನಮ್ಮ ದೇಹದಲ್ಲಿ ದಿನನಿತ್ಯ ನಡೆಯುವ ಸಹಜ ಪ್ರಕ್ರಿಯೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಾಗಲೀ ಅಥವಾ ಅದನ್ನೇ ಮಾಡುತ್ತಾ ಇರುವುದಾಗಲೀ ಎರಡೂ ಅಗತ್ಯವಿಲ್ಲ. ಯಾವತ್ತೋ ಒಮ್ಮೆ ಹಸ್ತ ಮೈಥುನ ಮಾಡಿಕೊಂಡರೆ ಸಮಸ್ಯೆ ಇಲ್ಲ. ದಿನಾಲೂ ಊಟತಿಂಡಿಯಂತೆ ಅದನ್ನೇ ಮಾಡುವ ಅಗತ್ಯವೂ ಇಲ್ಲ' ಎಂದಿದ್ದಾರೆ ಸಂದರ್ಶನವೊಂದರಲ್ಲಿ ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್. 

ಈ ಕಾರಣಕ್ಕಾಗಿ ಅಣ್ಣಾವ್ರಿಗೆ ಅಪ್ಪು ಮೇಲೆ ವಿಶೇಷ ಅಕ್ಕರೆ ಇತ್ತು..; ಸೀಕ್ರೆಟ್ ಹೊರಬಿತ್ತು!

ಹಸ್ತ ಮೈಥುನ ಪ್ರತಿಯೊಬ್ಬ ಗಂಡಸರು ಮಾಡುತ್ತಾರೆ ಇದೇ ಚಟವಾದರೆ ನಿಮಗೆ ತುಂಬಾ ನಷ್ಟವಾಗುತ್ತದೆ | Padmini Prasad Tips