Asianet Suvarna News Asianet Suvarna News

ಹೊಸ ವರ್ಷದ ದಿನ ಸಿಂಗಲ್ ಆಗಿರ್ತೀರಾ, ಡೋಂಟ್‌ ವರಿ ಹೀಗೆ ಸೆಲಬ್ರೇಟ್ ಮಾಡಿ..

ಪ್ರತಿಯೊಬ್ಬರೂ ಹೊಸ ವರ್ಷವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಹೊಸ ವರ್ಷದಲ್ಲಿ ನಾವೆಲ್ಲರೂ ಇವರೆಲ್ಲರ ಜೊತೆ ಇರಬೇಕೆಂದಿಲ್ಲ. ರೂಮಿನಲ್ಲಿ ಒಬ್ಬರೇ ಇರಬಹುದು. ಹಾಗಂತ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ರೂಮ್‌ನಲ್ಲಿ ಒಬ್ಬರೇ ಇದ್ದರೂ ನೀವು ಖುಷಿಯಿಂದ ನ್ಯೂ ಇಯರ್ ಸೆಲಬ್ರೇಟ್ ಮಾಡಬಹುದು. ಅದ್ಹೇಗೆ?

Dont worry if you are single on New Year 2024 Day, celebrate it like this Vin
Author
First Published Dec 29, 2023, 3:10 PM IST

ಇನ್ನೆರಡು ದಿನಗಳಲ್ಲಿ ನಾವೆಲ್ಲಾ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಪ್ರತಿಯೊಬ್ಬರೂ ಈ ಹೊಸ ವರ್ಷವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಹೊಸ ವರ್ಷದಲ್ಲಿ ನಾವೆಲ್ಲರೂ ಇವರೆಲ್ಲರ ಜೊತೆ ಇರಬೇಕೆಂದಿಲ್ಲ. ರೂಮಿನಲ್ಲಿ ಒಬ್ಬರೇ ಇರಬಹುದು. ಹಾಗಂತ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ರೂಮ್‌ನಲ್ಲಿ ಒಬ್ಬರೇ ಇದ್ದರೂ ನೀವು ಖುಷಿಯಿಂದ ನ್ಯೂ ಇಯರ್ ಸೆಲಬ್ರೇಟ್ ಮಾಡಬಹುದು. ಅದ್ಹೇಗೆ?

ಸ್ವ-ಆರೈಕೆಯಲ್ಲಿ ತೊಡಗಿಸಿಕೊಳ್ಳಿ
ಬಿಡುವಿಲ್ಲದ ದಿನಚರಿಯಲ್ಲಿ, ಸ್ವಯಂ-ಆರೈಕೆಯಲ್ಲಿ ತೊಡಗಿಸಿಕೊಳ್ಳಲು ನಮಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಆದರೆ ಹೊಸ ವರ್ಷದ ಮೊದಲಿನ ದಿನದಂದು, ನೀವು ಸೆಲ್ಫ್‌ ಕೇರ್ ಮಾಡಿಕೊಂಡು ಖುಷಿ ಪಡಬಹುದು. ಬಿಸಿನೀರಿನ ಸ್ನಾನ, ಫೇವರಿಟ್‌ ಬುಕ್ ಓದುವುದು, ಅಥವಾ ಇಷ್ಟದ ಸಿನಿಮಾ ನೋಡುವುದು ಅಥವಾ ಇತರ ಯಾವುದೇ ನಿಮ್ಮಿಷ್ಟದ ಕೆಲಸವನ್ನು ಮಾಡಬಹುದು.

2024ರ ಮೊದಲ ದಿನವೇ ಸೋಮವಾರ… ಆ ದಿನ ತಪ್ಪದೇ ಈ ಕೆಲಸ ಮಾಡಿ
 
ಹೊಸ ಹವ್ಯಾಸವನ್ನು ಪ್ರಯತ್ನಿಸಿ
ಹೊಸ ಹವ್ಯಾಸವನ್ನು ಪ್ರಯತ್ನಿಸಲು ನ್ಯೂ ಇಯರ್ ಸೂಕ್ತ ಸಮಯವಾಗಿದೆ. ಅಡುಗೆ ಕಲಿಯಲು, ಚಿತ್ರಕಲೆ ಮಾಡಲು, ವಾದ್ಯಗಳನ್ನು ನುಡಿಸಲು ಅಥವಾ ಹಾಡಲು ನೀವು ಹೊಸ ವರ್ಷದಂದು ನಿರ್ಧರಿಸಬಹುದು. ಈ ಹೊಸ ವರ್ಷದಲ್ಲಿ, ನಿಮ್ಮ ಗುಪ್ತ ಪ್ರತಿಭೆಯನ್ನು ಕಂಡುಹಿಡಿಯಲು ಪ್ರಯತ್ನಿಸಿ. ಹೊಸ ಕೌಶಲ್ಯಗಳನ್ನು ಕಲಿಯಲು ಪರಿಶೀಲಿಸಬಹುದಾದ ಅನೇಕ ಆನ್‌ಲೈನ್ ಕೌಶಲ್ಯ ವೀಡಿಯೊಗಳು ಲಭ್ಯವಿವೆ.

ವರ್ಚುವಲ್ ಆಚರಣೆ
ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹೊಸ ವರ್ಷವನ್ನು ವರ್ಚುಚಲ್ ರೀತಿಯಲ್ಲಿ ಆಚರಿಸಬಹುದು. ಅವರೊಂದಿಗೆ ವೀಡಿಯೊ ಕರೆ ಮಾಡಿ ಮಾತನಾಡಬಹುದು. ಒಟ್ಟಿಗೆ ಆಟಗಳನ್ನು ಆಡಬಹುದು. ಹೊಸ ವರ್ಷದ ಮುನ್ನಾದಿನದಂದು ವರ್ಚುವಲ್ ಡಿನ್ನರ್ ಅಥವಾ ಊಟದಲ್ಲಿ ಪಾಲ್ಗೊಳ್ಳಬಹುದು.

ಜನ ಜಂಗುಳಿಯಿಂದ ದೂರವಿದ್ದು ಹೊಸ ವರ್ಷ ಸ್ವಾಗತಿಸಲು ಈ ಪ್ಲೇಸಸ್ ಬೆಸ್ಟ್!
 
ಮಧ್ಯರಾತ್ರಿಯ ಧ್ಯಾನ ಮತ್ತು ಯೋಗ
ಹೊಸ ವರ್ಷವನ್ನು ಸ್ಪಷ್ಟ ಮನಸ್ಸು ಮತ್ತು ಶಾಂತ ದೇಹದಿಂದ ಸ್ವಾಗತಿಸಲು ಧ್ಯಾನ ಮತ್ತು ಯೋಗ ಸಹಾಯ ಮಾಡುತ್ತದೆ. ಮಧ್ಯರಾತ್ರಿಯ ಧ್ಯಾನ ಅಥವಾ ವರ್ಚುವಲ್ ಯೋಗ ಮನಸ್ಸಿಗೆ ಶಾಂತಿ ನೀಡುವುದು ಖಂಡಿತ. ಅಂತರ್ಜಾಲದಲ್ಲಿ ಅನೇಕ ಮಾರ್ಗದರ್ಶಿ ಧ್ಯಾನ ಮತ್ತು ಯೋಗ ಸೆಷನ್‌ಗಳು ಲಭ್ಯವಿದೆ. ಈ ಅಭ್ಯಾಸ ನಿಮಗೆ ಹೊಸ ವರ್ಷಕ್ಕೆ ಪಾಸಿಟಿವ್ ವೈಬ್ಸ್ ನೀಡುತ್ತದೆ.

ರುಚಿಕರ ಅಡುಗೆ ಮಾಡಿ, ಊಟ ಮಾಡಿ
ಹೊಸ ವರ್ಷಕ್ಕೆ ರುಚಿಕರವಾದ ಅಡುಗೆ ಮಾಡಿ, ಸವಿಯಿರಿ. ಭೋಜನ ಯಾವಾಗಲೂ ಮನಸ್ಸಿಗೆ ಸಂತೃಪ್ತಿ ನೀಡುತ್ತದೆ. ಹಾಗೆಯೇ ಹೊಸ ವರ್ಷ ಸಹ ಉತ್ತಮ ಆಹಾರ ಮನಸ್ಸಿಗೆ ಖುಷಿ ನೀಡುವುದರ ಜೊತೆಗೆ ಗುಡ್ ಮೂಡ್ ಕ್ರಿಯೇಟ್ ಮಾಡುತ್ತದೆ. ಇದು ಹೊಸ ವರ್ಷದ ಆರಂಭಕ್ಕೆ ಹೆಚ್ಚು ಸೂಕ್ತವಾಗಿದೆ.

Latest Videos
Follow Us:
Download App:
  • android
  • ios