2024ರ ಮೊದಲ ದಿನವೇ ಸೋಮವಾರ… ಆ ದಿನ ತಪ್ಪದೇ ಈ ಕೆಲಸ ಮಾಡಿ
ಹೊಸ ವರ್ಷದ ಮೊದಲ ದಿನ ಸೋಮವಾರ ಬರುತ್ತದೆ. ಸೋಮವಾರವನ್ನು ಶಿವನಿಗೆ ಅರ್ಪಿಸಲಾಗಿದೆ. ಹಾಗಾಗಿ, 2024 ರ ಮೊದಲ ದಿನ ಅಂದರೆ ಸೋಮವಾರ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ನೀವು ಅನುಸರಿಸೋದ್ರಿಂದ ನಿಮಗೆ ಒಳ್ಳೆಯದಾಗುತ್ತೆ ಎನ್ನಲಾಗುವುದು.
2024ನೇ ಇಸವಿಯು ಇನ್ನೇನು ಹತ್ತಿರದಲ್ಲಿದೆ. ವಿಶೇಷವೆಂದರೆ ಹೊಸ ವರ್ಷದ (New Year) ಮೊದಲ ದಿನ ಸೋಮವಾರ. ಸೋಮವಾರವನ್ನು ಶಿವನಿಗೆ ಪ್ರಿಯವಾದ ದಿನ. ಹಾಗಾಗಿ 2024ರ ಮೊದಲ ದಿನ ಅಂದರೆ ಸೋಮವಾರದಂದು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬೇಕು. ಹೀಗೆ ಮಾಡೋದ್ರಿಂದ ನೀವು ವರ್ಷಪೂರ್ತಿ ಶಿವನ ಆಶೀರ್ವಾದವನ್ನು ಪಡೆಯಬಹುದು.
2024 ರ ಜ್ಯೋತಿಷ್ಯ ಪರಿಹಾರಗಳು
ವರ್ಷದ ಮೊದಲ ದಿನ ಅಂದರೆ ಸೋಮವಾರದಂದು (Monday) ಶಿವನಿಗೆ ಜಲಾಭಿಷೇಕ ಮಾಡಿ. ಶಿವನನ್ನು ಭೋಲೆನಾಥ ಎಂದೂ ಕರೆಯುತ್ತಾರೆ. ಹಾಗಾಗಿ ಶಿವನಿಗೆ ಶ್ರದ್ಧೆ ಭಕ್ತಿಯಿಂದ ಜಲಾಭಿಷೇಕ ಮಾಡಿದರೆ, ಶಿವನು ಸಂತೋಷಗೊಳ್ಳುವನು ಮತ್ತು ಶಿವನ ಆಶೀರ್ವಾದ ನಿಮ್ಮ ಮೇಲಿರಲಿದೆ ಎನ್ನಲಾಗಿದೆ.
ಜನವರಿ 1, 2024 ರಂದು, ಜಲಾಭಿಷೇಕದ ಸಮಯವು ಬೆಳಿಗ್ಗೆ 6:33 ರಿಂದ 7:56 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ, ನೀವು ಶಿವನಿಗೆ ಜಲಾಭಿಷೇಕ ಮಾಡಬಹುದು. ವರ್ಷದ ಮೊದಲ ದಿನದಂದು ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಿ.
ಬಿಲ್ವಪತ್ರೆ ಶಿವನಿಗೆ (Lord Shiva) ಪ್ರಿಯ. ಬೆಲ್ವ ಪತ್ರವನ್ನು ಅರ್ಪಿಸುವುದರಿಂದ ಶಿವನು ಸಂತೋಷಗೊಂಡು, ನಿಮಗೆ ಆಶೀರ್ವಾದ ನೀಡುತ್ತಾನೆ ಎಂದು ನಂಬಲಾಗಿದೆ. ಎಲ್ಲಾ ಆಸೆಗಳು ಈಡೇರುತ್ತವೆ. ಅಷ್ಟೇ ಅಲ್ಲ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.
ಶಿವನಿಗೆ ಬಿಳಿ ಬಣ್ಣ ತುಂಬಾ ಇಷ್ಟ.ಹಾಗಾಗಿ ಬಿಳಿ ವಸ್ತುಗಳನ್ನು ಶಿವನಿಗೆ ಅರ್ಪಿಸೋದನ್ನು ಮರೆಯಬೇಡಿ. ಶಿವನಿಗೆ ಬಿಳಿ ಹೂವುಗಳು, ಬಿಳಿ ಭೋಗ ಇತ್ಯಾದಿಗಳನ್ನು ಅರ್ಪಿಸಿ. ಅಲ್ಲದೆ, ಶಿವನಿಗೆ ಶ್ರೀಗಂಧವನ್ನು ಹಚ್ಚೋದು ಉತ್ತಮವಂತೆ.
ಇನ್ನು ವರ್ಷದ ಮೊದಲ ದಿನದಂದು ದಾನ (donate poor) ಮಾಡಲು ಮರೆಯಬೇಡಿ. ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ದಾನ ಮಾಡೋದರಿಂದ, ನಿಮ್ಮ ಮನೆ ಯಾವಾಗಲೂ ಹಣದಿಂದ ತುಂಬಿರುತ್ತದೆ. ವರ್ಷದ ಮೊದಲ ದಿನದಂದು, ಮೊಸರು, ಬಿಳಿ ಬಟ್ಟೆಗಳು, ಹಾಲು ಮತ್ತು ಸಕ್ಕರೆ ಇತ್ಯಾದಿಗಳನ್ನು ದಾನವಾಗಿ ವಿತರಿಸಿ. ಇದು ಚಳಿಗಾಲದ ಸಮಯವಾಗಿದ್ದರೆ, ನೀವು ಬೆಚ್ಚಗಿನ ಬಟ್ಟೆಗಳನ್ನು ಸಹ ದಾನ ಮಾಡಬಹುದು.
ಶಿವನ ಮಂತ್ರಗಳನ್ನು ಪಠಿಸಿ ಮತ್ತು ಶಿವ ಚಾಲೀಸಾವನ್ನು ನಿರಂತರವಾಗಿ 108 ಬಾರಿ ಪಠಿಸಿ. ವರ್ಷದ ಮೊದಲ ದಿನದಂದು, ಶಿವನನ್ನು ನೋಡಲು ದೇವಾಲಯಕ್ಕೆ ಭೇಟಿ ನೀಡಿ. ಮನೆಯಲ್ಲಿಯೇ ಶಿವಲಿಂಗ ಇದ್ದರೆ, ಪೂಜ್ಯಭಾವದಿಂದ ಪೂಜಿಸಿ ಮತ್ತು ನಿಮ್ಮ ಇಚ್ಛೆಗಳನ್ನು ದೇವರ ಮುಂದೆ ಇರಿಸಿ. ಅವನು ಖಂಡಿತವಾಗಿಯೂ ನಿಮ್ಮ ದುಃಖಗಳನ್ನು ನಿವಾರಿಸುತ್ತಾನೆ..