ಮನೆಯಲ್ಲಿ ನಾಯಿ ಸಾಕಿದ್ರೆ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಣಿಸೋದು ಹೆಚ್ಚು ಅನ್ನೋದು ಬಹಳ ಕಾಲದಿಂದ ಇರುವ ನಂಬಿಕೆ

ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಅದು ಸತ್ಯಕ್ಕೆ ದೂರವಾದದ್ದು. ಸಾಕುಪ್ರಾಣಿಗಳಿದ್ದರೆ ಮಕ್ಕಳು ಅಲರ್ಜಿಯಿಂದ ದೂರವಿರಬಹುದಂತೆ. ಮಕ್ಕಳ ಪ್ರತಿರೋಧ ಶಕ್ತಿಯೂ ಹೆಚ್ಚಾಗುತ್ತಂತೆ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನ ಮಕ್ಕಳು ಟಿವಿ, ಕಂಪ್ಯೂಟರ್, ಮೊಬೈಲ್ ಹಿಡ್ಕೊಂಡು ಕೂತಲ್ಲೇ ಕೂರೋದು ಹೆಚ್ಚು.

ಅವರಿಗೆ ಹೊರಗೆ ಆಡೋ ಆಟ ಇಷ್ಟ ಆಗಲ್ಲ. ಆದರೆ ಮನೆಗೊಂದು ನಾಯಿ ಬಂದರೆ ಅದುವೇ ಮಕ್ಕಳನ್ನು ಆಟ ಆಡಿಸುತ್ತೆ. ಮಕ್ಕಳೂ ಚಟುವಟಿಕೆಯಿಂದ ಇರುತ್ತವೆ. ಚಿಕ್ಕ ವಯಸ್ಸಿನಲ್ಲೇ ಬರುವ ಬೊಜ್ಜಿನ ಸಮಸ್ಯೆಯಿಂದ ಮಕ್ಕಳು ದೂರವಿರಬಹುದು.