ಮಕ್ಕಳು ಹಠ ಹಿಡಿದರೆ ನೆಲದಲ್ಲಿ ಬಿದ್ದು ಹೊರಳಾಡಿ ಗಲಾಟೆ ಮಾಡಿದರೆ ಏನು ಮಾಡಬಹುದು ಎಂಬುದನ್ನು ತಮಾಷೆಯಾಗಿ ವೀಡಿಯೋ ಮೂಲಕ ತೋರಿಸಲಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯವಾಗಿ ಬಹುತೇಕ ಪುಟಾಣಿ ಮಕ್ಕಳು ಹಠದ ಸ್ವಭಾವವನ್ನು ಹೊಂದಿರುತ್ತಾರೆ. ಕೇಳಿದ್ದೆಲ್ಲಾ ನೋಡಿದೆಲ್ಲಾ ಮಕ್ಕಳಿಗೆ ಬೇಕು ಅನಿಸಲು ಶುರುವಾಗುತ್ತದೆ. ಇಂತಹ ಮಕ್ಕಳನ್ನು ಹೊರಗೆ ಅದರಲ್ಲೂ ಆಟಿಕೆಗಳು ಇರುವಂತಹ ಶಾಪಿಂಗ್ ಮಾಲ್‌ಗಳು, ಜಾತ್ರೆಗಳು ಮುಂತಾದೆಡೆ ಕರೆದೊಯ್ಯುವುದು ಎಂದರೆ ಪೋಷಕರಿಗೆ ಸಂಕಟ ಶುರುವಾಗುತ್ತದೆ. ಎಲ್ಲಿ ಮಕ್ಕಳು ದುಬಾರಿ ವಸ್ತುಗಳಿಗೆ ಕೈ ಹಾಕಿ ರಚ್ಚೆ ಬೇಕೆಂದು ರಚ್ಚೆ ಹಿಡಿಯಲು ಶುರು ಮಾಡುತ್ತಾರೆ ಎಂಬ ಆತಂಕ ಒಂದು ಕಡೆಯಾದರೆ ಮಕ್ಕಳ ಗಲಾಟೆ ಎಲ್ಲಿ ಮುಜುಗರ ಎದುರಿಸಬೇಕೋ ಎಂಬ ಭಯ ಇನ್ನೊಂದು ಕಡೆ ಇರುತ್ತದೆ. ಒಂದು ಕಡೆ ಆರ್ಥಿಕ ಹಾನಿ ಇನ್ನೊಂದೆಡೆ ಮಾನಸಿಕ ಕಿರಿಕಿರಿ ಇದೆಲ್ಲದರಿಂದ ಪೋಷಕರು ಹಠ ಹಿಡಿಯುವ ಮಕ್ಕಳನ್ನು ದೊಡ್ಡವರು ಮಾಡುವಷ್ಟರಲ್ಲಿ ಹೈರಾಣಾಗಿ ಹೋಗಿರುತ್ತಾರೆ. ಹೀಗಿರುವಾಗ ಮಕ್ಕಳು ಹಠ ಹಿಡಿದರೆ ನೆಲದಲ್ಲಿ ಬಿದ್ದು ಹೊರಳಾಡಿ ಗಲಾಟೆ ಮಾಡಿದರೆ ಏನು ಮಾಡಬಹುದು ಎಂಬುದನ್ನು ತಮಾಷೆಯಾಗಿ ವೀಡಿಯೋ ಮೂಲಕ ತೋರಿಸಲಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ಸದಾ ವಿಭಿನ್ನ ವೈರಲ್ ವೀಡಿಯೋಗಳನ್ನು ಪೋಸ್ಟ್ ಮಾಡುವ @TheFigen ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ. 13 ಸೆಕೆಂಡ್‌ನ ವೀಡಿಯೋದಲ್ಲಿ ಕಾಣಿಸುವಂತೆ ಶಾಪಿಂಗ್ ಮಾಲ್‌ಗೆ ಪೋಷಕರೊಂದಿಗೆ ಬಂದ ಮಗೊವೊಂದು ಅಲ್ಲಿ ತನಗೇನೂ ಬೇಕು ಎಂದು ಕೇಳಿದ್ದು, ಪೋಷಕರು ಒಪ್ಪದಿದ್ದಾಗ ನೆಲದಲ್ಲಿ ಮಲಗಿ ಧರಣಿ ಮಾಡಲು ಶುರು ಮಾಡಿದೆ. ಈ ವೇಳೆ ಕೆಲ ಸೆಕೆಂಡ್‌ ಮಗುವನ್ನು ಗಮನಿಸಿದ ಪೋಷಕರು ಮಗು ಮೇಲೆ ಎದ್ದು ಬಾರಲು ಸಿದ್ಧವಿಲ್ಲದಿರುವುದನ್ನು ಗಮನಿಸಿದ್ದಾರೆ. ನಂತರ ಒಂದು ಉಪಾಯ ಮಾಡಿದ್ದು, ಮಗುವಿನಂತೆ ತಂದೆಯೂ ಮಾಲ್‌ನ ನೆಲದಲ್ಲಿ ಕೈಕಾಲು ಬಿಡಿಸಿ ಮಗುವಿನಂತೆ ಬಿದ್ದುಕೊಂಡಿದ್ದಾರೆ. ಈ ವೇಳೆ ಅಮ್ಮ ಅಪ್ಪನ ಕೆನ್ನೆಗೆ ಒಂದು ಬಾರಿಸಿದ್ದಾಳೆ. ಈ ವೇಳೆ ಮಗು ಟಪಕ್ಕನೇ ಎದ್ದು ಅಮ್ಮನ ಕೈ ಹಿಡಿದು ಮುಂದೆ ಸಾಗಿದೆ. ಮಗುವಿನ ರಚ್ಚೆ ಹಿಡಿಯುವ ಹಠ ಅಲ್ಲಿಗೆ ನಿಂತಿದೆ.

ನದಿ ಸ್ವಚ್ಛಗೊಳಿಸುವ ಈ ಯಂತ್ರ ರೆಡಿ ಮಾಡೋರಿದ್ದೀರಾ: ಇನ್‌ವೆಸ್ಟ್‌ ಮಾಡ್ತಾರಂತೆ ಆನಂದ್ ಮಹೀಂದ್ರಾ

ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. 19 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದು, ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದೊಂದು ಒಳ್ಳೆ ಟ್ರಿಕ್ ಎಂದು ಕಾಮೆಂಟ್ ಮಾಡಿದ್ರೆ ಮತ್ತೆ ಕೆಲವರು ಮುಳ್ಳನ್ನು ಮುಳ್ಳಿಂದಲೇ ತೆಗಿಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. ತಮಾಷೆಯಾದ ಈ ವೀಡಿಯೋವನ್ನು ನೀವು ನೋಡಿ.

Scroll to load tweet…