ಯಾವುದನ್ನೇ ಆಗಲಿ, ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಅವು ಆರೋಗ್ಯ­ಕಾರಿ. ಆದರೆ ಅದೇ ಪ್ರಮಾಣ ಅತಿಯಾದರೆ ಅವು ಅಹಿತಕಾರಿಯಾ­ಗುತ್ತವೆ.
ನನಗೆ 26 ವರ್ಷ . ದಿನದಲ್ಲಿ ಮೂರು ಸಲ ಗ್ರೀನ್ ಟೀ ಕುಡಿಯುತ್ತೇನೆ . ಇದರಿಂದ ಮುಖದಲ್ಲಿ ಮೊಡವೆಗಳು ಜಾಸ್ತಿ ಆಗಿವೆ . ಇದು ಉಷ್ಣ ಪೇಯವೇ ? ಗ್ರೀನ್ ಟೀ ಸೇವನೆಯಿಂದ ವೀರ್ಯೋತ್ಪತ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ . ಇದು ನಿಜವೇ ? ಶಿವರಾಜ್ ಎನ್ ಕೆ ಬೆಂಗಳೂರು
-ಕೆಮೆಲೀಯ ಜಾತಿಯ ಈ ಸಸ್ಯದಲ್ಲಿ ಪಾಲಿಫಿನೊಲ್ಸ್ ಮತ್ತು ಫ್ಲೇವ್ನಾಡ್ಸ್ ಅಧಿಕ ಪ್ರಮಾಣದಲ್ಲಿವೆ . ಕಾರಣ ಇದರ ನಿಯಮಿತ ಹಾಗೂ ಸರಿಯಾದ ಸೇವನೆಯಿಂದ ಕೆಟ್ಟಕೊಲೆಸ್ಟೆರಾಲ್ ಕಡಿಮೆಮಾಡಿ ಹೃದಯದ ಸಂರಕ್ಷಣೆ ಮಾಡುತ್ತದೆ . ಅಲ್ಲದೆ ಅಂಡಾಶಯದ ಕ್ಯಾನ್ಸರ್ , ಗರ್ಭಾಶಯದ ಕ್ಯಾನ್ಸರ್ ನಂಥ ಹಲವಾರು ಕ್ಯಾನ್ಸರ್ ಗಳನ್ನು ತಡೆಗಟ್ಟುವಲ್ಲಿಯೂ ಇದು ಸಹಾಯಕಾರಿ ಇಂದು ಸಂಶೋಧನೆಗಳು ಹೇಳುತ್ತವೆ . ನಿಮ್ಮ ಮೊಡವೆಗಳ ಕಾರಣ ಗ್ರೀನ್ ಟೀ ಆಗಲಾರದು . ಕಾರಣ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ದೇಹದ ಕಲ್ಮಶ ತೆಗೆದುಹಾಕಿ ಮೊಡವೆ ಯನ್ನು ಗುಣಪಡಿಸುತ್ತವೆ . ನೀವು ಬೇರೆ ಯಾವುದಾ ದರೂ ಔಷಧಿಗಳನ್ನು ಸೇವಿಸುತ್ತಿದ್ದರೆ , ಅದರೊಟ್ಟಿಗೆ ಗ್ರೀನ್ ಟೀ ಬೆರೆತು ಹೀಗಾಗುವ ಸಾಧ್ಯತೆಯಿದೆ . ನೆನಪಿಟ್ಟು ಕೊಳ್ಳಿ ; ಯಾವುದನ್ನೇ ಆಗಲಿ , ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಅವು ಆರೋಗ್ಯ ಕಾರಿ . ಆದರೆ ಅದೇ ಪ್ರಮಾಣ ಅತಿಯಾದರೆ ಅವು ಅಹಿತಕಾರಿಯಾ ಗುತ್ತವೆ . ಹಾಗೆಯೇ ಗ್ರೀನ್ ಟೀಯನ್ನೂ ದಿನಕ್ಕೆ 2- 3 ಕಪ್ ಗಿಂತ ಹೆಚ್ಚು ಸೇವಿಸಿದರೆ ಇದು ವ್ಯತರಿಕ್ತ ಪರಿಣಾಮ ಬೀರುತ್ತದೆ . ಇದು ಒಗರು ( ಕಷಾಯ ) ರಸಾತ್ಮಕ ದ್ರವ್ಯ , ಒಗರು ರಸದ ಅತಿಸೇವನೆ ವೀರ್ಯ ಉತ್ಪತ್ತಿ ಯಲ್ಲಿ ವ್ಯತ್ಯಯವಾಗುವುದೆಂದು ಆಯುರ್ವೇದ ಹೇಳಿದೆ . ಹಾಗೆಯೇ ಕಷಾಯ ಶೀತ , ಹಾಗಾಗಿ ಗ್ರೀನ್ ಟೀ ಉಷ್ಣ ಅಲ್ಲ . ಆದರೂ ಗ್ರೀನ್ ಟೀ ಸೇವನೆ ಯನ್ನು 2 ಕಪ್ ಗೆ ಇಳಿಸಿ . ಅದರ ಬದಲು ಜೀರಿಗೆ , ಕೊತ್ತಂಬರಿ ಬೀಜ , ಯಷ್ಟಮದು , ಲವಂಗ , ಅರಿಶಿನ ಸೇರಿಸಿ ಕಷಾಯ ಮಾಡಿ ಸೇವಿಸದರೆ ಇದು ಗ್ರೀನ್ ಟೀಗಿಂತ ಹೆಚ್ಚು ಆರೋಗ್ಯ ಲಾಭ ನೀಡುತ್ತದೆ .
(ಡಾ. ಪೂರ್ಣಿಮ ರವಿ, ಆಯುರ್ವೇದ ತಜ್ಞೆ, (ಕನ್ನಡ ಪ್ರಭ)
Read Full Article