ಹೇಗಿದೆ ನಿಮ್ಮ ಇಂದಿನ ದಿನ : ರಾಶಿ ಫಲದಿಂದ ತಿಳಿಯಿರಿ

Dina Bhavishya May 2
Highlights

ಹೇಗಿದೆ ನಿಮ್ಮ ಇಂದಿನ ದಿನ ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ : ಸಪ್ತಮದ ಗುರುವಿನಿಂದಾಗಿ ದಾಂಪತ್ಯದಲ್ಲಿ ಸಾಮ್ಯತೆ, ಹೊಂದಾಣಿಕೆ ಸಾಧ್ಯತೆ, ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯಲಿದೆ, ಐಕ್ಯಮತ್ಯ ಮಂತ್ರಗಳ ಪಾರಾಯಣ ಮಾಡಿಸಿ.

ವೃಷಭ : ಕುಜನ ನೇರದೃಷ್ಟಿ ರಾಶಿಯಮೇಲಿರುವುದರಿಂದ ದೇಹ ಬಾಧೆ, ಸಂಸಾರದಲ್ಲಿ ವಿರಸ, ಸಾಮಾನ್ಯದಿನ, ಸುಬ್ರಹ್ಮಣ್ಯ ಜಪ/ಹೋಮಾದಿಗಳನ್ನು ಮಾಡಿಸಿ

ಮಿಥುನ  : ರಾಶಿಯ ಅಧಿಪತಿ ನೀಚನಾಗಿರುವುದರಿಂದ ಕಾರ್ಯ ವಿಘ್ನ, ಆದರೆ ಗುರುವಿನ ಅನುಗ್ರಹವೂ ಇರುವುದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, 

ಕಟಕ  : ರಾಶ್ಯಾಧಿಪತಿ ನೀಚನಾಗಿದ್ದಾನೆ, ಮಾನಸಿಕ ನೋವು, ಅಶಾಂತಿ ಆದರೆ ದಿನದ ಅಂತ್ಯದಲ್ಲಿ ಎಲ್ಲವೂ ಸರಿಹೋಗಲಿದೆ.

ಸಿಂಹ  : ಮಕ್ಕಳ ಪ್ರತಿಭಾ ಪ್ರದರ್ಶನ, ಸಹೋದರರಲ್ಲಿ ಸಾಮರಸ್ಯ, ಲಿಂಗಾಷ್ಟಕವನ್ನು ಹೇಳಿಕೊಳ್ಳಿ

ಕನ್ಯಾ  : ಸಪ್ತಮಾಧಿಪತಿ ಧನಸ್ಥಾನಗತನಾಗಿರುವುದರಿಂದ ಹೆಂಡತಿಯಿಂದ ಧನಲಾಭ, ಇದಲ್ಲದೆ, ಬಂಧುಗಳಲ್ಲಿ ಕಲಹ,  ಸೌಖ್ಯ ಹಾನಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ  : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ

ವೃಶ್ಚಿಕ : ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ,  ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿಬನ್ನಿ

ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರ ದರ್ಶನ ಮಾಡಿ

ಮಕರ  : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

ಮೀನ : ರೋಗ ನಿವಾರಣೆ, ಧನ ಸ್ಥಾನಕ್ಕೆ ಗುರು ದೃಷ್ಟಿ ಇದೆ ಧನಾಗಮನ, ಶುಭ ದಿನ

loader