ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

ಶುಭೋದಯ : ಹೇಗಿದೆ ಇಂದಿನ ನಿಮ್ಮ ದಿನ..?

ಮೇಷ : ಆರೋಗ್ಯದ ದಿನ, ವೈದ್ಯರಿಗೆ ಉತ್ತಮ ದಿನ, ಮಂಗಳಕಾರ್ಯಗಳಿಗೆ ಭೇಟಿ. ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ

ವೃಷಭ : ಕೆಲವೇ ದಿನಗಳಲ್ಲಿ ನಿಮ್ಮ ಕಷ್ಟಗಳು ಪರಿಹಾರವಾಗಲಿವೆ, ಸ್ವಲ್ಪ ತಾಳ್ಮೆ ಇರಲಿ, ದೇವಿ ದರ್ಶನ ಮಾಡಿ

ಮಿಥುನ : ಭ್ರಾತೃಗಳಿಂದ ಸಹಕಾರ, ನಿಮ್ಮ ಪರಾಕ್ರಮದಿಂದ ಕಾರ್ಯ ಸಾಧನೆ, ದೈವಾನುಕೂಲ ಇದೆ, ಹರಿನಾಮಸ್ಮರಣೆ ಮಾಡಿ

ಕಟಕ : ಅನುಕೂಲವಾತಾವರಣ ಇರಲಿದೆ, ಕಷ್ಟಪಡುತ್ತಿರುವವರು ನಿಮ್ಮ ತೂಕದ ಅಕ್ಕಿಯನ್ನು ಅನ್ನಪೂರ್ಣೇಶ್ವರಿ ಸನ್ನಿಧಿಗೆ ಕೊಟ್ಟುಬನ್ನಿ.

ಸಿಂಹ : ಸಮಸ್ಯೆ ನಿವಾರಣೆ, ಸ್ವತಂತ್ರ ಸಾಧನೆಯಿಂದ ಗೆಲುವು, ಸ್ತ್ರೀ ವೈದ್ಯರಿಗೆ ಸ್ವಲ್ಪ ಕಿರಿಕಿರಿ. ರುದ್ರಾಕ್ಷಿ ಮಾಲೆ ಧರಿಸಿ

ಕನ್ಯಾ : ಧನಲಾಭ, ಪ್ರಯಾಣದಿಂದಾಗಿ ಆರೋಗ್ಯಹಾನಿ, ಬಿಸಿಲಲ್ಲಿ ತಿರುಗಾಡಬೇಡಿ,

ತುಲಾ : ಗಣ್ಯ ವ್ಯಕ್ತಿಗಳ ಪರಿಚಯ, ಬೆಳ್ಳಿ - ಬಂಗಾರ ವ್ಯಾಪಾರಿಗಳಿಗೆ ಶುಭದಿನ, ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ :ಉದ್ಯೋಗ ದೊರೆಯುವ ಸಾಧ್ಯತೆ, ದಶಮಾಧಿಪತಿ ಉಚ್ಚನಾಗಿದ್ದಾನೆ. ಸ್ವಲ್ಪ ಧನವ್ಯಯವಾಗುತ್ತದೆ.

ಧನಸ್ಸು : ಗುರುದರ್ಶನ ಮಾಡಿ, ಹತ್ತಿರದ ಗುರುಪೀಠಕ್ಕೆ ಹೋಗಿಬನ್ನಿ, ಅನುಕೂಕಲದಿನ

ಮಕರ : ಆರೋಗ್ಯ ವೃದ್ಧಿ, ಚಿಂತೆ ದೂರವಾಗಲಿದೆ, ಕಬ್ಬಿಣ ವ್ಯಾಪಾರದಲ್ಲಿ ಜಗಳ, ಹಿನ್ನಡೆ. ಹನುಂತನ ದರ್ಶನ ಮಾಡಿ

ಕುಂಭ : ಮಕ್ಕಳ ವಿದ್ಯಾಭ್ಯಾಸ ಕುಂಠಿತ, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಸಹಕಾರ ಸ್ವಭಾವದಿಂದ ಶ್ರಮ, ಆರ್ಥಿಕ ಲಾಭ, ತಾಯಂದಿರಿಗೆ ಸಂತಸದ ದಿನ, ಭಗವತ್ಪಾದರ ದರ್ಶನ ಮಾಡಿ