ಇಂದು ಈ ರಾಶಿಗೆ ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

Dina Bhavishya June 5
Highlights

ಇಂದು ಈ ರಾಶಿಗೆ ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

ಇಂದು ಈ ರಾಶಿಗೆ ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಇತ್ತೀಚೆಗೆ ನಿಮ್ಮ ಜೀವನದಲ್ಲಿ ಏರುಪೇರಾಗು
ತ್ತಿದೆ ಎಂಬ ಭಾವನೆ ನಿಮ್ಮದು. ಎಲ್ಲರ ಜೀವನ
ದಲ್ಲೂ ಇಂತಹ ಘಟನೆಗಳು ಇದ್ದೇ ಇರುತ್ತದೆ.

ವೃಷಭ
ಹಲವು ದಿನಗಳಿಂದ ಬಾಕಿ ಇದ್ದ ಕೆಲವು ಕೆಲಸ
ಗಳು ಇಂದು ಕೈಗೂಡಲಿವೆ. ಮಹಿಳೆಯರು
ಧ್ಯಾನ, ಯೋಗಗಳ ಮೊರೆ ಹೋಗಲಿ.

ಮಿಥುನ
ಹಣದ ಬೆಲೆಯು ನಿಮಗೆ ಚೆನ್ನಾಗಿ ಗೊತ್ತು.
ಹಾಗಾಗಿಯೇ ಹೆಚ್ಚು ಜೋಪಾನ ಮಾಡುವಿರಿ.
ಮಕ್ಕಳಿಗಾಗಿ ಹೊಸ ಯೋಜನೆ ರೂಪಿಸುವಿರಿ.

ಕಟಕ
ಗುತ್ತಿಗೆಗಳಲ್ಲಿ ಅನುಕೂಲವಾಗಲಿವೆ. ಆದರೆ
ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸು
ವುದು ಕಲಿಯಿರಿ. ತುಂಬಾ ಎಚ್ಚರಿಕೆಯಿಂದಿರಿ.

ಸಿಂಹ
ದೀರ್ಘಕಾಲದ ಸಾಲಗಳು ವಾಪಸ್ಸಾಗಲಿವೆ.
ಬಹುಕಾಲದ ಗೆಳೆಯರು ಒಟ್ಟಿಗೆ ಸೇರುತ್ತೀರಿ.
ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಗುವ ದಿನವಿದು.

ಕನ್ಯಾ
ಶಾಂತವಾಗಿರಿ. ಹಳೆಯ ಸಂಬಂಧಗಳು ಹತ್ತಿರ
ವಾಗಲಿದೆ. ನಿಮ್ಮ ಮನೆಯಲ್ಲಿ ಶುಭಕಾರ್ಯ
ನಡೆಯಲಿವೆ. ಕಾರ್ಯಗಳು ಕೈಗೂಡುತ್ತವೆ.

ತುಲಾ 
ನೀವಿಂದು ಹೆಚ್ಚು ಮೃದುಧೋರಣೆ ತೋರು
ವಿರಿ. ಇದರಿಂದಾಗಿ ಸ್ವಲ್ಪ ನಷ್ಟವೂ ಆಗಲಿದೆ.
ತಾಯಿಯಿಂದ ಹಣಕಾಸಿನ ಸಹಾಯ ಆಗುತ್ತೆ.

ವೃಶ್ಚಿಕ
ರಾಜಕಾರಣಿಗಳಿಗೆ ಒಳ್ಳೆಯ ಕಾಲವಿದು.
ಜನರು ನಿಮ್ಮನ್ನು ಪ್ರೀತಿಸುತ್ತಾರೆ. ಅದಕ್ಕಾಗಿ
ನೀವು ನಿರಂತರ ಸೇವೆ ಮಾಡಿದರೆ ಸಾಕು. 

ಧನುಸ್ಸು
ಖರ್ಚಿನ ಮೇಲೆ ಹಿಡಿತವಿರಲಿ. ರೈತರಿಗೆ
ಒಳ್ಳೆಯ ಸಮಯ. ದೂರದಲ್ಲಿರುವ ಮಕ್ಕಳು
ಹತ್ತಿರಾಗುತ್ತಾರೆ. ಮೊಮ್ಮಕ್ಕಳಿಂದ ಸಂತಸವಿದೆ.

ಮಕರ
ಉದ್ಯೋಗದ ಹಲವು ದಾರಿಗಳು ನಿಮ್ಮ
ಮುಂದಿದೆ. ಯೋಚಿಸಿ ಕ್ರಮ ಕೈಗೊಳ್ಳಿರಿ.
ನಿಮ್ಮ ಪ್ರತಿಭೆ ಬೆಳೆಸಿಕೊಳ್ಳುವತ್ತ ಗಮನವಿರಲಿ.

ಕುಂಭ
ಹೊಸ ವಸ್ತುಗಳು ಮನೆ ಸೇರಲಿವೆ. ಮಾಡುವ
ಕೆಲಸದಲ್ಲಿ ಚುರುಕುತನವಿರಲಿ. ಆಲಸ್ಯವನ್ನು
ಹೊರ ದೂಡಿ ಕಾರ್ಯಪ್ರವೃತ್ತರಾಗಿರಿ.

ಮೀನ
ಅನಿರೀಕ್ಷಿತ ವ್ಯಕ್ತಿಗಳಿಂದ ಲಾಭ. ಕೆಲಸದಲ್ಲಿ
ಜಾಗೃತಿ ವಹಿಸಿ. ತಂದೆ ತಾಯಿಯೊಂದಿಗೆ
ನಯವಾಗಿ ವರ್ತಿಸಿ. ಸುಖ ನಿದ್ರಾ ಯೋಗ.

loader