ವೃಶ್ಚಿಕ ರಾಶಿಯವರ ಭವಿಷ್ಯದ ಯೋಜನೆಗಳಿಗೆ ಚಾಲನೆ : ಉಳಿದ ರಾಶಿ ಹೇಗಿದೆ..?

First Published 13, Feb 2018, 7:09 AM IST
Dina bhavishya in kannada 13 Feb 2018
Highlights

ವೃಶ್ಚಿಕ ರಾಶಿಯವರ ಭವಿಷ್ಯದ ಯೋಜನೆಗಳಿಗೆ ಚಾಲನೆ : ಉಳಿದ ರಾಶಿ ಹೇಗಿದೆ..?

ಮೇಷ

ಇಲ್ಲಿವರೆಗೂ ಬಾಕಿಯಿರುವ ಕೆಲಸಗಳನ್ನು

ಪೂರ್ಣಗೊಳಿಸಲು ಇದು ಸಕಾಲ. ಮಂಗಳ

ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯೋಗವಿದೆ.

 

ವೃಷಭ

ನಿಮ್ಮ ವಾಟ್ಸ್ಯಾಪ್‌ಗೆ ಬಂದು ಸುದ್ದಿಯು

ಇಂದು ನಿಮ್ಮ ಮನವನ್ನು ಕಲುಕಲಿದೆ. ಕೆಲಸಕ್ಕೆ

ಬಾರದ ವಿಷಯವನ್ನು ನಿರ್ಲಕ್ಷಿಸುವುದೇ ಸರಿ.

 

ಮಿಥುನ

ಕೋರ್ಟ್, ವ್ಯಾಜ್ಯ, ತಕರಾರುಗಳೆಂದು

ಹೋಗದಿರಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ

ತರುತ್ತದೆ. ಕ್ಷಮಾಗುಣ ರೂಢಿಸಿಕೊಳ್ಳಿರಿ.

 

ಕಟಕ

ವದಂತಿಗಳು ಹರಡಲು ಅವಕಾಶ

ಕೊಡದಿರಿ. ದೂರ ಪ್ರಯಾಣ ಯೋಗ.

ನೆಮ್ಮದಿಯನ್ನು ನೀಡುವ ದಿ

 

ಸಿಂಹ

ನಿಮ್ಮ ಗುರಿ ಸಾಧನೆಯತ್ತ ಮಾತ್ರ ಆಸಕ್ತಿ

ತೋರುವ ದಿನ. ಹಿರಿಯರೂ, ಬುದ್ಧಿಜೀವಿ

ಗಳೊಂದಿಗೆ ಸಮಾಲೋಚನೆ ನಡೆಸುವಿರಿ.

 

ಕನ್ಯಾ

ವಿಪರೀತ ಖರ್ಚುಗಳ ಸಾಧ್ಯತೆಯಿದೆ. ಷೇರು

ವ್ಯವಹಾರವು ಅಷ್ಟು ಉಚಿತವಲ್ಲ. ಆತ್ಮವಿಶ್ವಾಸ

ಕಳೆದುಕೊಳ್ಳದೇ ಧೈರ್ಯದಿಂದ ವ್ಯವಹರಿಸಿ.

 

ತುಲಾ

ತೃಪ್ತಿಕರ ಫಲಿತಾಂಶಗಳನ್ನು ಪಡೆಯಲು

ಸರಿಯಾಗಿ ಯೋಜನೆ ಹಾಕಿ. ಜಾಗೃತೆಯ

ತುಲಾ ನಡವಳಿಕೆಗಳಿರಬಹುದಾದ ದಿನ ಇದಾಗಿದೆ.

 

ವೃಶ್ಚಿಕ

ಭವಿಷ್ಯದ ಯೋಜನೆಗಳಿಗೆ ಚಾಲನೆ ಸಿಗಲಿದೆ.

ಮೋಟಾರ್ ಮತ್ತು ಅವುಗಳ ಉಪಕರಣಗಳ

ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಸಿಗಲಿದೆ.

 

ಧನುಸ್ಸು

ವಿಮಾ ಏಜಂಟರಿಗೆ ಆಶಾದಾಯಕ ದಿನ.

ನೆರೆಹೊರೆಯವರೊಂದಿಗೆ ಉತ್ತಮವಾದ

ಬಾಂಧವ್ಯ ಹೊಂದುವುದು ಈಗ ಉಚಿತ.

 

ಮಕರ

ವಿದೇಶದಲ್ಲಿನ ವಿದ್ಯಾಭ್ಯಾಸಕ್ಕೆ ಹೋಗುವ

ಅವಕಾಶವಿದ್ದರೂ ಶ್ರಮವೇ ಮುಖ್ಯ. ನಿಮ್ಮ

ಶ್ರಮಕ್ಕೆ ತಕ್ಕ ಸಾಮಾಜಿಕ ಗೌರವ ಸಿಗಲಿದೆ.

 

ಕುಂಭ

ಇಂದಿನ ದಿನವನ್ನು ಚೆನ್ನಾಗಿ ಬಳಸಿಕೊಳ್ಳಿ.

ದುಂದುಗಾರಿಕೆಗೆ ಕಡಿವಾಣ ಹಾಕಿ. ಯಾರ

ಜೊತೆಗೂ ವಿವಾದಕ್ಕೆ ತೊಡಗಬೇಡಿ. ಜೋಕೆ.

 

ಮೀನ

ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಮೂಡಿ

ಪ್ರಗತಿ ಕಾಣುವಿರಿ. ಸೋದರರ ಕೆಲಸ-

ಮೀನ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.

loader