ವೃಷಭ ರಾಶಿಯವರೇ ಸಾಲದಿಂದ ಜಗಳ ಸಾಧ್ಯತೆ : ಉಳಿದ ರಾಶಿ ಹೇಗಿದೆ..?

First Published 8, Feb 2018, 7:05 AM IST
Dina bhavishya in kannada 08 Feb 2018
Highlights

ವೃಷಭ ರಾಶಿಯವರೇ ಸಾಲದಿಂದ ಜಗಳ ಸಾಧ್ಯತೆ : ಉಳಿದ ರಾಶಿ ಹೇಗಿದೆ..?

ಮೇಷ

ಗೆಳೆಯನ ಭೇಟಿಯು ಹೆಚ್ಚು ಖುಷಿ ಆಗಲಿದೆ.

ಹಳೆಯ ಗೆಳೆಯರೂ ಸಿಗಲಿದ್ದಾರೆ. ಹಣದ

ಚಿಂತೆಯು ಸ್ವಲ್ಪ ಕಾಲ ದೂರಾಗಲಿದೆ.

 

ವೃಷಭ

ಸಾಲ ಕೇಳುವಾಗ ಅದರ ಅವಶ್ಯಕತೆ ಎಷ್ಟೆಂದು

ತಿಳಿಯಿರಿ. ಅದರಿಂದ ಜಗಳ-ಕದನಗಳು

ಸಂಭವಿಸುವ ಲಕ್ಷಣಗಳಿವೆ. ಹುಷಾರಾಗಿರಿ.

 

ಮಿಥುನ

ಕಂಡ ಕಂಡಲೆಲ್ಲಾ ತಿನ್ನುವುದು ಅಷ್ಟೇನು

ಒಳಿತಲ್ಲ. ಹೊಟ್ಟೆ ಕೆಟ್ಟರೆ ನಿಮ್ಮ ಸಹಾಯಕ್ಕೆ

ಯಾರೂ ಬರೊಲ್ಲ. ಪೂರಕ ಪರಿಸ್ಥಿತಿ ಇಲ್ಲ.

 

ಕಟಕ

ವರಮಾನ ಸ್ವಲ್ಪ ಕಡಿಮೆಯಾಗಿದೆ. ದಿಢೀರ್

ಬದಲಾವಣೆಯನ್ನು ಕಾಣಲಿದ್ದೀರಿ. ಹಣವು

ಬಂದು ಸೇರುವ ದಿನಗಳು ಮುಂದಿವೆ.

 

ನಿಮ್ಮನ್ನು ದ್ವೇಷಿಸುವರೂ ಸ್ನೇಹಿತರಾಗುತ್ತಾರೆ.

ಹಿರಿಯರ ಸ್ಮರಣೆ ಒಳಿತು. ನೆಮ್ಮದಿಗಾಗಿ

ಹುಡುಕಾಟ ನಡೆಸದಿರಿ. ಮೌನ ಒಳ್ಳೆಯದು.

 

 

ಕನ್ಯಾ

ವರ್ತಕರಿಗೀಗ ಹಣದ ಮುಗ್ಗಟ್ಟು ಬಾಧಿಸು

ವುದು. ಚಿಂತಿಸುವ ಅಗತ್ಯವೇನಿಲ್ಲ. ಕಂತು

ಗಳಲ್ಲಿ ನೆಮ್ಮದಿ ಸಿಗಲಿದೆ. ತಾಳ್ಮೆಯಿಂದ ಇರಿ.

 

ತುಲಾ

 

ಆತ್ಮೀಯರ ಆಗಮನದಿಂದ ಹೊಸ ಹುರುಪು

ಸಿಗಲಿದೆ. ನೆಮ್ಮದಿಯ ದಿನವಾಗಲಿದೆ. ಶುಭ

ತುಲಾ ಸುದ್ದಿಗಳ ಮಹಾಪೂರವೇ ಹರಿಯಲಿವೆ.

 

ಧನುಸ್ಸು

ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ಸ್ನೇಹಿತರು

ಕೈ ಜೋಡಿಸುವರು. ನಿಮ್ಮ ಮೇಲಿರುವ

ನಂಬಿಕೆಯೇ ಹೀಗಾಗಲು ಕಾರಣವಾಗಿದೆ.

 

ವೃಶ್ಚಿಕ

ರಂಪ-ರಗಳೆ, ಹಟಗಳನ್ನು ಮಕ್ಕಳಲ್ಲದೇ

ನಾವು ನೀವು ಮಾಡಲು ಸಾಧ್ಯವೇ?

ಎಲ್ಲವನ್ನೂ ತಾಳ್ಮೆಯಿಂದಲೇ ನಿಭಾಯಿಸಿರಿ.

 

ಮಕರ

ವಾಹನದ ಮೇಲಿನ ನಿಮ್ಮ ಹೂಡಿಕೆಯನ್ನು

ಸದ್ಯಕ್ಕೆ ಮುಂದೂಡುವುದು ಉತ್ತಮ. ಇಂತಹ

ಹೂಡಿಕೆಗೆ ಇದು ಸಕಾಲವಲ್ಲ. ಜೋಪಾನ.

 

ಕುಂಭ

ಹೆಚ್ಚಿನ ಒತ್ತಡಗಳ ಕೆಲಸವು ನಿಮ್ಮಲ್ಲಿ ಹೆದರಿಕೆ

ಮೂಡಿಸಬಹುದು. ನಿಂದೆ ಎದುರಿಸಬೇಕಾಗ

ಬಹುದು. ಧೈರ್ಯಗೆಡದೇ ಮುಂದಡಿ ಇಡಿ.

 

ಮೀನ

ಔಷಧಿ ವ್ಯಾಪಾರ ಹಾಗೂ ಸಂಗೀತ ಕ್ಷೇತ್ರಗಳಲ್ಲಿ

ಇರುವವರಿಗೆ ಇಂದು ನೆಮ್ಮದಿಯ ದಿನವಿದು.

ಮೀನ ಗೃಹಿಣಿಯರಿಗೆ ಪ್ರಶಂಸೆ ಖಚಿತವಾಗಿದೆ.

loader