ಕುಂಭ ರಾಶಿಯವರಿಗಿಂದು ಯಶಸ್ಸು ಸಿಗಲಿದೆ : ಉಳಿದ ರಾಶಿ ಹೇಗಿದೆ..?

First Published 12, Mar 2018, 6:57 AM IST
Dina Bhavishya  12 March 2018
Highlights

ಕುಂಭ ರಾಶಿಯವರಿಗಿಂದು ಯಶಸ್ಸು ಸಿಗಲಿದೆ : ಉಳಿದ ರಾಶಿ ಹೇಗಿದೆ..?

ಮೇಷ

ನಿಮ್ಮ ನೆರೆಯವರು ನಿಮ್ಮ ಹಣಕಾಸಿನ

ವಿಷಯದಲ್ಲಿ ನೆರವಾಗಲಿದ್ದಾರೆ. ಅವರೇ

ಬಂದು ನಿಮಗೆ ಸಹಕಾರ ನೀಡಲಿದ್ದಾರೆ.

 

ವೃಷಭ

ಹೊಟ್ಟೆ ಕೆಡುವ ಸಂಭವವಿದೆ. ನಿಮ್ಮದಲ್ಲದ

ತಪ್ಪಿಗೆ ನೀವು ಗುರಿಯಾಗಲಿದ್ದೀರಿ. ಅದು

ಆರೋಪವಷ್ಟೆ. ನಿಜ ಸ್ಥಿತಿ ನಂತರ ತಿಳಿಯಲಿದೆ.

 

ಮಿಥುನ

ಹಳೆಯ ಗೆಳೆಯನ ಭೇಟಿಯಾಗಲಿದೆ. ಆಗಿನ

ನೆನಪುಗಳು ಒತ್ತರಿಸಿ ಬರಲಿದೆ. ನಿಮ್ಮದೇ

ಹೊಣೆಯ ಕೆಲಸಗಳ ಕಡೆಗೆ ಗಮನವಿರಲಿ.

 

ಕಟಕ

ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜನರಿಗೆ

ಇಂದು ಉತ್ತಮ ದಿನವಾಗಿದೆ. ಪರೀಕ್ಷಾ

ಸಮಯವಾದ್ದರಿಂದ ಕೆಲಸವೂ ಹೆಚ್ಚಾಗಲಿದೆ.

 

ಸಿಂಹ

ಸ್ವಂತ ವ್ಯಾಪಾರಿಗಳಿಗೆ ಉತ್ತಮ ಆದಾಯ.

ಶುಭ ಕಾರ್ಯದಲ್ಲಿ ಪಾಲ್ಗೊಂಡು ಖುಷಿ

ಪಡುವಿರಿ. ದೂರ ಪ್ರಯಾಣ ಕೈಗೊಳ್ಳುವಿರಿ

 

ಕನ್ಯಾ

ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಉತ್ತಮ

ಆದಾಯವಾಗಲಿದೆ. ಭಡ್ತಿ ದೊರೆಯುವ

ಸಂಭವವಿದೆ. ಸಾಕಷ್ಟು ಶ್ರಮ ಹಾಕಬೇಕಿದೆ.

 

ತುಲಾ

ಪುರಾತನ ಆಸ್ತಿಯ ಕ್ರಯ-ವಿಕ್ರಯಗಳ ಬಗ್ಗೆ

ಮಾತುಕತೆ ನಡೆಯಲಿದೆ. ಆಯವ್ಯಯದಲ್ಲಿ

ತುಲಾ ಏರುಪೇರೂ ಆಗಬಹುದು. ಜಾಗ್ರತೆಯಾಗಿರಿ.

 

ವೃಶ್ಚಿಕ

ನಿಮಗೊಂದು ಶುಭ ಸುದ್ದಿ ಬರಲಿದೆ. ಅದು

ನಿಮ್ಮನ್ನು ಎಚ್ಚರಗೊಳಿಸಲಿದೆ. ನಿಮ್ಮ ಮನಸ್ಸಿಗೆ

ಖುಷಿ ತರಲಿದೆ. ಖರ್ಚು ಹೆಚ್ಚಾಗಲಿದೆ.

 

ಧನುಸ್ಸು

ಆರೋಗ್ಯದಲ್ಲಿ ಏರುಪೇರಾಗಲಿದೆ. ಸಾಧ್ಯ

ವಾದಷ್ಟು ಮನೆಯಲ್ಲಿದ್ದರೆ ಕ್ಷೇಮ. ಹಿರಿಯರ

ಕಡೆಗೆ ಲಕ್ಷ್ಯವಿರಲಿ. ಅವರು ಮಕ್ಕಳಿದ್ದಂತೆ!

 

ಮಕರ

ವ್ಯಾಪಾರಸ್ಥರಿಗೆ ಒಳ್ಳೆಯ ಸಮಯ. ಆದಷ್ಟು

ಬಡವರಿಗೆ ದಾನ ಮಾಡುವ ಕಾರ್ಯಗಳಲ್ಲಿ

ಮುಂದಾಗಿರಿ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ.

 

ಕುಂಭ

ಧನಾತ್ಮಕವಾದ ಆಲೋಚನೆಗಳಿಂದ ನಿಮ್ಮ

ಕೆಲಸಗಳಲ್ಲಿ ಈಗ ಯಶಸ್ಸು ದೊರೆಯಲಿದೆ.

ಹೆಚ್ಚಿನ ನೆಮ್ಮದಿಯನ್ನು ಕಾಣಲಿದ್ದೀರಿ.

 

ಮೀನ

ಕುಟುಂಬದವರೊಂದಿಗೆ ಹೆಚ್ಚು ಕಾಲವನ್ನು

ಕಳೆಯುವಿರಿ. ಕಚೇರಿಯ ಕೆಲಸಗಳಲ್ಲಿ ಪ್ರಗತಿ

ಕಾಣುವಿರಿ. ಪ್ರಶಂಸೆಗೂ ಪಾತ್ರರಾಗುವಿರಿ.

loader