Asianet Suvarna News Asianet Suvarna News

ಇಷ್ಟವಿಲ್ಲದ ಕೂದಲನ್ನು ತೆಗೆಯೋಕೆ ಇಷ್ಟೆಲ್ಲ ವಿಧಾನಗಳಿವೆ..!

ಬಹುತೇಕ ಮಹಿಳೆಯರು ದೇಹದಲ್ಲಿ ಅನಗತ್ಯವಾಗಿ ತೋರುವ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ವ್ಯಾಕ್ಸಿಂಗ್  ಹಾಗೂ ಶೇವಿಂಗ್ ಯುವತಿಯರ ಫೇವರೇಟ್ ವಿಧಾನಗಳು. ಆದರೆ, ಹೇರ್ ರಿಮೂವ್ ಮಾಡಲು ಇನ್ನೂ ಹತ್ತು ಹಲವು ದಾರಿಗಳಿವೆ. ಅವುಗಳ ಪ್ಲಸ್, ಮೈನಸ್‌ಗಳೇನು?

different methods to remove unwanted body hair
Author
Bengaluru, First Published May 22, 2019, 2:26 PM IST

ದೇಹದ ರೋಮರಾಶಿಗೆ ವಿರಾಮ ನೀಡಿ ಆರಾಮರಾಗೋಕೆ ಹತ್ತಾರು ವಿಧಾನಗಳಿವೆ. ಒಂದೊಂದು ವಿಧಾನದಲ್ಲೂ ಒಂದಿಷ್ಟು ಪ್ಲಸ್ ಮತ್ತೊಂದಿಷ್ಟು ಮೈನಸ್ ಸಂಗತಿಗಳಿವೆ. ಯಾವ ವಿಧಾನ ಹೆಚ್ಚು ಪರಿಣಾಮಕಾರಿ, ಯಾವುದು ಚೀಪ್, ಯಾವುದು ನಿಮಗೆ ಸುಲಭ ಇತ್ಯಾದಿ ವಿವರಗಳನ್ನಿಲ್ಲಿ ನೀಡಲಾಗಿದೆ.

different methods to remove unwanted body hair
ಶೇವಿಂಗ್‌ನಲ್ಲಿ ಸ್ಕಿನ್ ಲೆವೆಲ್ ಕೂದಲು ಕಟ್ ಆಗುತ್ತವೆ. ಎಲೆಕ್ಟ್ರಿಕ್ ಶೇವರ್ಸ್ ಅಥವಾ ಡಿಸ್ಪೋಸೇಬಲ್ ರೇಜರ್ಸ್ ಬಳಸಬಹುದು. ಸೋಪನ್ನು ಅಥವಾ ರೇಜರ್ ಕ್ರೀಮನ್ನು ಹಚ್ಚಿ ನೊರೆ ಬರಿಸಿಕೊಂಡು ಶೇವ್ ಮಾಡಬೇಕು. 
ಪ್ಲಸ್: ಇದು ನೋವುರಹಿತ. ಜೊತೆಗೆ ಉಳಿದೆಲ್ಲ ವಿಧಾನಗಳಿಗಿಂತ ಅಗ್ಗವಾಗಿ, ವೇಗವಾಗಿ ಮಾಡಿಕೊಳ್ಳಬಹುದು. ಕೈಕಾಲು, ಕಂಕುಳು ಹಾಗೂ ಪ್ಯೂಬಿಕ್ ಹೇರ್ ತೆಗೆಯಲು ಬಳಸಬಹುದು.
ಮೈನಸ್: ಕೂದಲು ಅಷ್ಟೇ ವೇಗವಾಗಿ 3-4 ದಿನಗಳಲ್ಲಿ ಬೆಳೆಯುತ್ತದೆ. ಅಲ್ಲದೆ, ಮೊದಲಿಗಿಂತಲೂ ದಪ್ಪವಾಗಿ ಕೂದಲು ಹುಟ್ಟುವ ಹಾಗೂ ಕಂಕುಳು ಕಪ್ಪಾಗುವ ಸಾಧ್ಯತೆಗಳಿವೆ.

ಹೇರ್ ರಿಮೂವಲ್ ಕ್ರೀಮ್ಸ್
ಡಿಪಿಲೇಟರೀಸ್ ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ಕೂದಲನ್ನು ತೆಗೆಯಲು ಕೆಮಿಕಲ್‌ಯುಕ್ತ ಕ್ರೀಮ್‌ಗಳನ್ನು ಬಳಸಲಾಗುತ್ತದೆ. ಕೈ, ಕಾಲು ಹಾಗೂ ತುಟಿ ಮೇಲೆ ಮೀಸೆ ಜಾಗದಲ್ಲಿ ಬಳಸಬಹುದು. ಕ್ರೀಮನ್ನು ಹಚ್ಚಿ 10 ನಿಮಿಷಗಳ ಬಳಿಕ ತೆಗೆದರಾಯಿತು. 
ಪ್ಲಸ್: ಇದು ಬಹಳ ಸುಲಭದ ನೋವುರಹಿತ ವಿಧಾನ. ಸಮಯದ ಉಳಿತಾಯವೂ ಆಗುತ್ತದೆ. ಅಲ್ಲದೆ, ರೇಜರ್‌ ಹೇರ್ ರಿಮೂವ್‌ಗಿಂತ ಹೆಚ್ಚು ಸಮಯ, ಅಂದರೆ ವಾರದವರೆಗೆ ನಯವಾದ ಕೂದಲುರಹಿತ ಚರ್ಮವನ್ನು ಆನಂದಿಸಬಹುದು. 
ಮೈನಸ್: ಕೆಲವರಿಗೆ ಇದರಲ್ಲಿ ಬಳಸುವ ಕೆಮಿಕಲ್ ಅಲರ್ಜಿಯಾಗಿ ರೆಡ್‌ನೆಸ್, ಊತ, ತುರಿಕೆ ಉಂಟಾಗಬಹುದು.

ವ್ಯಾಕ್ಸಿಂಗ್
ಈ ವಿಧಾನದಲ್ಲಿ ವ್ಯಾಕ್ಸ್ ಅಥವಾ ಅಂಟನ್ನು ಚರ್ಮಕ್ಕೆ ಹಚ್ಚಿ, ಬಟ್ಟೆ ಅಥವಾ ಪೇಪರ್‌ನಲ್ಲಿ ಹಿಡಿದೆತ್ತಲಾಗುತ್ತದೆ. ಅಂಟಿನೊಂದಿಗೆ ಕೂದಲು ಆಳದಿಂದ ಕಿತ್ತು ಬರುತ್ತದೆ. 
ಪ್ಲಸ್: ಸುಮಾರು 2ರಿಂದ 4 ವಾರಗಳ ಕಾಲ ಮತ್ತೆ ಹೇರ್ ರಿಮೂವ್ ಮಾಡುವ ಚಿಂತೆಯಿಲ್ಲದೆ ಆರಾಮಾಗಿರಬಹುದು. ತ್ವಚೆ ಹೆಚ್ಚು ನಯವಾಗುತ್ತದೆ. ಪದೇ ಪದೆ ವ್ಯಾಕ್ಸ್ ಮಾಡಿಸುತ್ತಿದ್ದರೆ, ಕೂದಲು ಬೆಳೆಯುವ ವೇಗ ತಗ್ಗುತ್ತದೆ.
ಮೈನಸ್: ವ್ಯಾಕ್ಸ್ ಮಾಡಿಕೊಳ್ಳುವುದು ಹೆಚ್ಚು ಸಮಯ ಬೇಡುತ್ತದೆ. ವ್ಯಾಕ್ಸ್ ಮಾಡಲು ಅನುಕೂಲವಾಗುವಂತೆ ಕೂದಲು ಸ್ವಲ್ಪ ಉದ್ದ ಬರುವವರೆಗೆ ಕಾಯಬೇಕು. ವ್ಯಾಕ್ಸಿಂಗ್ ಸಮಯದಲ್ಲಿ ಸ್ವಲ್ಪ ನೋವಾಗುತ್ತದೆ.

ಎಲೆಕ್ಟ್ರೋಲೈಸಿಸ್
ಪ್ರೊಫೆಶನಲ್ ಸ್ಕಿನ್ ಡಾಕ್ಟರ್ಸ್ ಸೂಜಿ ಬಳಸಿ ಕೂದಲಿನ ಬುಡಕ್ಕೆ ಎಲೆಕ್ಟ್ರಿಕ್ ಕರಂಟ್ ಹರಿಸಿ, ಕೂದಲನ್ನು ತೆಗೆಯುತ್ತಾರೆ. ಮುಖ, ಕತ್ತು, ಕಂಕುಳ ಭಾಗದ ಹೇರ್ ರಿಮೂವ್ ಮಾಡಲು ಸೂಕ್ತ ವಿಧಾನ. 
ಪ್ಲಸ್: ಶಾಶ್ವತವಾಗಿ ಬೇಡದ ಕೂದಲುಗಳಿಂದ ಮುಕ್ತಿ ಪಡೆಯಬಹುದು. ಯಾವುದೇ ವಿಧದ ಚರ್ಮ ಹಾಗೂ ಕೂದಲಿನವರಿಗೆ ಸೂಕ್ತ ವಿಧಾನ. ಲೇಸರ್‌ಗಿಂತ ಕಡಿಮೆ ವೆಚ್ಚದ ವಿಧಾನ. 
ಮೈನಸ್: ಹಲವು ಸೆಶನ್‌ಗಳಿಗಾಗಿ ಕ್ಲಿನಿಕ್‌ಗೆ ಅಲೆಯಬೇಕು. ನೀವು ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದೊಂದೇ ಕೂದಲುಗಳನ್ನು ತೆಗೆಯುವುದಾದ್ದರಿಂದ ಬಹಳ ಸಮಯ ಬೇಡುತ್ತದೆ ಹಾಗೂ ಸ್ವಲ್ಪ ನೋವಾಗುತ್ತದೆ. 

ಲೇಸರ್ ಹೇರ್ ರಿಡಕ್ಷನ್
ಈ ವಿಧಾನದಲ್ಲಿ ಲೇಸರ್ ಲೈಟ್ ಬಳಸಿ ಹೇರ್ ಫೋಲಿಕಲ್‌ಗಳನ್ನು ಸುಡಲಾಗುತ್ತದೆ. ದೇಹದ ಯಾವುದೇ ಭಾಗದ ಕೂದಲನ್ನು ತೆಗೆಸಲು ಸೂಕ್ತ ವಿಧಾನವಿದು. ಆದರೆ, ಚರ್ಮ ರೋಗ ತಜ್ಞರು ನಿಮ್ಮ ದೇಹದ ಕೂದಲನ್ನು ಪರೀಕ್ಷಿಸಿದ ನಂತರವಷ್ಟೇ ಚಿಕಿತ್ಸೆ ನೀಡಲಾಗುತ್ತದೆ. 
ಪ್ಲಸ್: ನೋವುರಹಿತ ಹಾಗೂ ಶಾಶ್ವತವಾಗಿ ಬೇಡದ ಕೂದಲಿಂದ ಮುಕ್ತಿ. ಕೂದಲು ದಪ್ಪ ಹಾಗೂ ಕಪ್ಪಿದ್ದಷ್ಟೂ ಇದರ ಪರಿಣಾಮ ಹೆಚ್ಚು. ಹಾಗಾಗಿ ಕೈ, ಕಾಲಿನ ಕೂದಲಿಗೆ ಶಾಶ್ವತವಾಗಿ ಬೈಬೈ ಹೇಳಬಹುದು.
ಮೈನಸ್: ಇದು ಬಹಳ ದುಬಾರಿಯಾದ ವಿಧಾನವಾಗಿದ್ದು, ಹಲವಾರು ತಿಂಗಳು ಹತ್ತಾರು ಸೆಶನ್‌ಗಾಗಿ ಕ್ಲಿನಿಕ್‌ಗೆ ಅಲೆಯಬೇಕು. ನೀವು ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವಿಲ್ಲ. 

ಟ್ವೀಜಿಂಗ್
ಹುಬ್ಬಿನ ಎಕ್ಸ್ಟ್ರಾ ಕೂದಲು ಹಾಗೂ ಗಲ್ಲದ ಕೂದಲನ್ನು ತೆಗೆಯಲು ಟ್ವೀಜಿಂಗ್ ಸುಲಭ ವಿಧಾನ. ಟ್ವೀಜರ್ ಬಳಸಿ ಮನೆಯಲ್ಲೇ ಎಕ್ಸ್ಟ್ರಾ ಕೂದಲನ್ನು ಒಂದೊಂದೇ ತೆಗೆದುಕೊಂಡು ಎರಡು ವಾರಗಳ ಕಾಲ ಐಬ್ರೋಸ್ ತಂಟೆಗೆ ಹೋಗದೆ ಆರಾಮಾಗಿರಬಹುದು.
ಪ್ಲಸ್: ಕೂದಲನ್ನು ಬೇರಿನಿಂದ ಕೀಳುವುದರಿಂದ ಮತ್ತೆ ಹುಟ್ಟಲು ಹೆಚ್ಚು ಸಮಯ ಬೇಕಾಗುತ್ತದೆ. ಸಮಯ ಸಿಕ್ಕಾಗ ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು.
ಮೈನಸ್: ದೇಹದ ಇತರೆ ಭಾಗಗಳಿಂದ ಕೂದಲು ತೆಗೆದು ಪೂರೈಸಲು ವರ್ಷವಾದರೂ ಮುಗಿಯುವುದಿಲ್ಲ!

ಥ್ರೆಡಿಂಗ್
ಈ ವಿಧಾನದಲ್ಲಿ ದಾರವನ್ನು ಬಳಸಿ ಐಬ್ರೋಸ್, ಕೆನ್ನೆ, ಗಲ್ಲ, ಕುತ್ತಿಗೆಯ ಕೂದಲನ್ನು ತೆಗೆಯಲಾಗುತ್ತದೆ. ವಾರದಿಂದ 10 ದಿನಗಳ ಕಾಲ ಫಲಿತಾಂಶ ನಿಂತಿರುತ್ತದೆ.
ಪ್ಲಸ್: ಚರ್ಮಕ್ಕೆ ಯಾವುದೇ ಹಾನಿಯಿಲ್ಲ. ಒಂದು ಸಾಲಿನ ಕೂದಲನ್ನು ಒಮ್ಮೆಯೇ ತೆಗೆಯಬಹುದು.
ಮೈನಸ್: ಸ್ವಲ್ಪ ನೋವು ಸಹಿಸಿಕೊಳ್ಳಬೇಕು. ದೇಹದ ಇತರೆ ಭಾಗಗಳಿಗೆ ಬಳಸಲು ಸಾಧ್ಯವಿಲ್ಲ. ಹೆಚ್ಚಿನ ಸಮಯ ಬೇಡುತ್ತದೆ. 

different methods to remove unwanted body hair

ಎಪಿಲೇಶನ್
ಎಪಿಲೇಟರ್ ಎಂಬ ಬ್ಯಾಟರಿ ಚಾಲಿತ ಡಿವೈಸ್ ಬಳಸಿ ಕೂದಲನ್ನು ತೆಗೆಯುವ ವಿಧಾನ ಇದಾಗಿದೆ. ಎಪಿಲೇಟರನ್ನು ಕೂದಲು ತೆಗೆಯಬೇಕಾದ ಜಾಗದಲ್ಲಿಟ್ಟು ಮುಂದೆ ಚಲಿಸುತ್ತಾ ಹೋದರೆ ಕೂದಲನ್ನು ತೆಗೆಯುತ್ತಾ ಬರುತ್ತದೆ. ಕೈಕಾಲಿನ ಕೂದಲನ್ನು ತೆಗೆಯಲು ಇದು ಉತ್ತಮ ವಿಧಾನ.
ಪ್ಲಸ್: ಕೂದಲನ್ನು ಬುಡದಿಂದ ತೆಗೆಯುತ್ತಾದ್ದರಿಂದ ಕೆಲ ವಾರಗಳ ಕಾಲ ಹೇರ್ ರಿಮೂವ್ ಗೊಡವೆಗೆ ಹೋಗುವುದು ಬೇಡ. ಚರ್ಮವನ್ನು ನಯವಾಗಿಸುತ್ತದೆ. ಪದೇ ಪದೆ ಬಳಸಿದಲ್ಲಿ ಕೂದಲ ಬೆಳವಣಿಗೆ ತಗ್ಗುತ್ತದೆ. ಮನೆಯಲ್ಲೇ ಹೇರ್ ರಿಮೂವ್ ಮಾಡಿಕೊಳ್ಳಬಹುದಾದ ವಿಧಾನಗಳಲ್ಲಿ ಇದು ಬೆಸ್ಟ್. 
ಮೈನಸ್: ಎಪಿಲೇಟಿಂಗ್ ಸಮಯದಲ್ಲಿ ಕೂದಲೆಳೆದಂತೆ ನೋವಾಗುತ್ತದೆ. 

ಬ್ಲೀಚಿಂಗ್
ಇದು ಹೇರ್ ರಿಮೂವಿಂಗ್ ವಿಧಾನವಲ್ಲದಿದ್ದರೂ, ಕೂದಲ ಬಣ್ಣವನ್ನು ಚರ್ಮದ ಬಣ್ಣಕ್ಕೆ ಬದಲಾಯಿಸಿ, ಮುಖದಲ್ಲಿ ಬೇಡದ ಕೂದಲು ಎದ್ದು ಕಾಣದಂತೆ ಮಾಡಬಹುದು. ಇದರಲ್ಲಿ ಬ್ಲೀಚ್ ಕ್ರೀಮನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದರಾಯಿತು. ಎಲ್ಲಿ ಬೇಕಾದರೂ ಬ್ಲೀಚಿಂಗ್ ಮಾಡಬಹುದಾದರೂ ಹಲವರು ಮುಖ ಹಾಗೂ ಕುತ್ತಿಗೆಗೆ ಬಳಸುತ್ತಾರೆ. 
ಪ್ಲಸ್: ನೋವುರಹಿತ ಹಾಗೂ ಹೆಚ್ಚಿನ ಸಮಯ ಬಾಳಿಕೆ ಬರುತ್ತದೆ. ಚರ್ಮದ ಟೋನ್ ಈವನ್ ಆಗಿ ಕಾಣುವಂತೆ ಮಾಡುತ್ತದೆ. 
ಮೈನಸ್: ಕೆಮಿಕಲ್ಸ್ ಕಾರಣದಿಂದಾಗಿ ಸ್ಕಿನ್ ಇರಿಟೇಶನ್ ಆಗಬಹುದು. ಅಲರ್ಜಿ ಇರುವವರು ಬಳಸಲಾಗದು. 

 

Follow Us:
Download App:
  • android
  • ios