Asianet Suvarna News Asianet Suvarna News

ಶುಗರ್ ಇರೋರಿಗೆ ಸಿಹಿ ಸುದ್ದಿ: ಮನಸ್ಪೂರ್ತಿಯಾಗಿ ತಿನ್ನಿ ಲಾಡೂ, ಬೂಂದಿ!

ಸಕ್ಕರೆ ಕಾಯಿಲೆ ರೋಗಿಗಳಿಗೆ ಸಿಹಿ ಸುದ್ದಿ! ಸಕ್ಕರೆ ಕಾಯಿಲೆಗೂ ಸಿಹಿಗೂ ಇಲ್ಲ ಸಂಬಂಧ! ಶುಗರ್ ಇದ್ದೋರೂ ತಿನ್ನಬಹುದು ಸಕ್ಕರೆ! ಟೈಪ್-1 ಮತ್ತು ಟೈಪ್-2 ಶುಗರ್ ಇದ್ದೋರು ತಿನ್ನಬಹುದು ಸಿಹಿ!  ದಿನಕ್ಕೆ ಎಷ್ಟು ಸ್ಪೂನ್ ಸಕ್ಕರೆ ತಿನ್ನಬಹುದು?
 

Diabetes is NOT caused by eating sweets
Author
Bengaluru, First Published Oct 10, 2018, 8:09 PM IST

ಬೆಂಗಳೂರು(ಅ.10): ‘ಅದೆಷ್ಟು ಸ್ವೀಟ್ ತಿಂತಿಯಾ?. ಹಿಂಗೆ ಸ್ವೀಟ್ ತಿಂತಾ ಇದ್ರೆ ಶುಗರ್ ಬರತ್ತೆ ನೋಡು..’ ಇದು ಸಿಹಿ ಪ್ರೀಯರಿಗೆ ಬಹುತೇಕರು ಹೆದರಿಸೋ ಪರಿ. ಆದರೆ ಇನ್ಮೇಲೆ ಇಂತಹ ಬೆದರಿಕೆಗಳಿಗೆ ನೀವು ಹೆದರುವ ಅವಶ್ಯಕತೆ ಇಲ್ಲ. ಕಾರಣ ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಎಂಬ ಆಲೋಚನೆಗೆ ಎಳ್ಳು ನೀರು ಬೀಡುವ ಸಂದರ್ಭ ಬಂದೊದಗಿದೆ.

ಹೌದು, ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಅಲ್ಲ ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸಿಹಿ ತಿನ್ನುವುದಕ್ಕೂ ಸಕ್ಕರೆ ಕಾಯಿಲೆಗೂ ಸಂಬಂಧವೇ ಇಲ್ಲ ಎನ್ನುತ್ತದೆ ಈ ಸಂಶೋಧನೆ.

Diabetes is NOT caused by eating sweets

ಏನು ಶುಗರ್ ಅಂದ್ರೆ?:

ಸಕ್ಕರೆ ಎಂಬುದು ಎಲ್ಲಾ ಹಣ್ಣು, ತರಕಾರಿ ಮತ್ತು ಹಾಲಿನ ಉತ್ಪನ್ನಗಳಲ್ಲಿ ಇರುವ ಸಾಮಾನ್ಯ ಅಂಶ.  ಇವುಗಳನ್ನು ಸೇವಿಸಿದಾಗ ಸಕ್ಕರೆ ಅಂಶ ನಮ್ಮ ದೇಹಕ್ಕೆ ಹೋಗುತ್ತದೆ. ಸಕ್ಕರೆ ಅಥವಾ ಸಿಹಿಯನ್ನು ನಾವು ಬಾಹ್ಯವಾಗಿಯೂ ಅಡುಗೆಗಳಲ್ಲಿ ಬಳಸುವುದುಂಟು.

Diabetes is NOT caused by eating sweets

ಡಯಾಬಿಟಿಸ್ ಅಂದ್ರೆ ಏನು?:

ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆಯಲ್ಲಿ ಟೈಪ್-1 ಮತ್ತು ಟೈಪ್-2 ಎಂಬ ಎರಡು ವಿಧ. ಟೈಪ್ ಒಂದರಲ್ಲಿ ಮನುಷ್ಯನ ದೇಹದ ನಿರೋಧಕ ವ್ಯವಸ್ಥೆ ಇನ್ಸೂಲಿನ್ ಉತ್ಪಾದನೆಯನ್ನು ತಡೆ ಹಿಡಿಯುತ್ತದೆ. ಟೈಪ್ ಎರಡರಲ್ಲಿ ಮನುಷ್ಯನ ದೇಹ ಉತ್ಪಾದನೆಯಾದ ಇನ್ಸೂಲಿನ್ ನ್ನು ಸ್ವೀಕರಿಸಲು ವಿಫಲವಾಗುತ್ತದೆ.

ಇನ್ನು ಈ ಎರಡೂ ವಿಧದ ಡಯಾಬಿಟಿಸ್ ಗೆ ಸಿಹಿ ಕಾರಣವಲ್ಲ ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ.

Diabetes is NOT caused by eating sweets

ಶುಗರ್ ಇದ್ದೋರು ಸಿಹಿ ತಿನ್ನಬಹುದಾ?:

ಖಂಡಿತ ಎನ್ನುತ್ತದೆ ಸಂಶೋಧನೆ. ಶುಗರ್ ಇದೆ ಎಂಬ ಮಾತ್ರಕ್ಕೆ ಸಕ್ಕರೆ ಅಥವಾ ಸಿಹಿ ತಿನ್ನಬಾರದು ಅಂತೆನಿಲ್ಲ. ದೈನಂದಿನ ಜೀವನದಲ್ಲಿ ಬಳಸುವ ಸಿಹಿ ಪ್ರಮಾಣವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಂಶೋಧನೆ ಹೇಳಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವ್ಯಕ್ತಿಯೋರ್ವ ದಿನಕ್ಕೆ 6 ಚಮಚ ಅಥವಾ 25 ಗ್ರಾಂ ಸಕ್ಕರೆ ಸೇವಿಸುವುದು ಉತ್ತಮ.

Diabetes is NOT caused by eating sweetsDiabetes is NOT caused by eating sweets

Follow Us:
Download App:
  • android
  • ios