ಮೊಡವೆ ಇಣುಕದಂತೆ ಮಾಡಲು ಬ್ಯೂಟಿ ಪಾರ್ಲರ್‌ನಲ್ಲಿ ಸಾಕಷ್ಟು ಸಮಯ ಕಳೆಯೋ ನಾವು, ಮನೆಯಲ್ಲಿ ಸಿಗೋ ಸಿಂಪಲ್ ಮದ್ದಿನೆಡೆಗೆ ಗಮನವನ್ನೇ ಕೊಡೋಲ್ಲ. ಅದರಲ್ಲಿಯೂ ಎದೆ ಮೇಲೆ ಮೊಡವೆ ಮೂಡಿದಾಗಲಂತೂ ಕಿರಿ ಕಿರಿ ಹೇಳ ತೀರದು. ವಿಶೇಷವಾಗಿ ಹಾಲುಣಿಸುವ ತಾಯಿಯ ಸ್ತನದಲ್ಲಿ ಮೂಡುವ ಮೊಡವೆ, ಹೇಳಿಕೊಳ್ಳಲಾಗದಷ್ಟು ಸಮಸ್ಯೆ ತರಿಸುತ್ತದೆ.

ಎದೆ ಭಾಗದಲ್ಲಿ ಹುಟ್ಟೋ ಕೆಂಪು ಮತ್ತು ಕಂದು ಬಣ್ಣದ ಮೊಡವೆಗೆ ಒಟಿಸಿ ಎಂಬ ಮದ್ದಿದೆ. ಇದನ್ನು ವೈದ್ಯರ ಚೀಟಿಯಿಲ್ಲದೇ ಮೆಡಿಕಲ್ ಶಾಪ್‌ನಲ್ಲಿ ಖರೀದಿಸಬಹುದು. 

ಅಷ್ಟಕ್ಕೂ ಇದು ಕಾಣಿಸೋದೇಕೆ?

 • ವಂಶ ಪಾರಂಪರ್ಯವಾಗಿ.
 • ಸೇವಿಸುವ ಆಹಾರದಲ್ಲಿ ವ್ಯತ್ಯಾಸವಾದರೆ ಮತ್ತು ಹಾಲಿನ ಪದಾರ್ಥ ಹೆಚ್ಚು ಬಳಸುವುದರಿಂದ.
 • ಅನಾರೋಗ್ಯವಾಗಿದ್ದು, ಔಷಧಿ ಸೇವಿಸುವುದು ಹೆಚ್ಚಾದರೆ. 
 • ಹಾರ್ಮೋನ್ ವ್ಯತ್ಯಾಸ/ಏರುಪೇರಾರದರೆ. 
 • ಒತ್ತಡ ಹೆಚ್ಚಾದಾಗ.

ಮನೆ ಮದ್ದು: 

 • ಎದೆ ಮತ್ತು ಸ್ತನದ ಭಾಗವನ್ನು ದಿನಕ್ಕೆರಡು ಸಾರಿ ಶುದ್ಧ ನೀರು ಮತ್ತು ಪಿಎಚ್ ಲೆವೆಲ್ ಕಡಿಮೆ ಇರೋ ಸೋಪಿನಿಂದ ತೊಳೆದುಕೊಳ್ಳಬೇಕು. 
 • ತಲೆ ಕೊದಲು ಎದೆ ಭಾಗಕ್ಕೆ ತಾಗುತ್ತಿದ್ದರೆ, ಕೂದಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೂ ಮುಖ್ಯ. ಕೂದಲಲ್ಲಿ ಜಿಡ್ಡಿನಾಂಶ ಇಲ್ಲದಂತೆ, ವಾರಕ್ಕೆರಡು ಬಾರಿ ತೊಳೆದುಕೊಳ್ಳಬೇಕು.
 • ಬೆವರುಂಟಾದರೆ ಅದರ ಕಡೆ ಹೆಚ್ಚು ಗಮನಹರಿಸಿ ಸ್ವಚ್ಛಗೊಳಿಸಿಕೊಳ್ಳಬೇಕು.
 • ಬಿಸಿಲಿಗೆ ಎದೆ ಮತ್ತು ಸ್ತನದ ಚರ್ಮ ತೆರೆದಿಡಬಾರದು. 
 • ಜಿಡ್ಡಿನಾಂಶ ಕಡಿಮೆಯಿರುವ ಸನ್‌ಕ್ರೀಮ್ ಬಳಸಬೇಕು. ಇಲ್ಲವಾದರೆ ಚರ್ಮ ಉಸಿರಾಡಲು ತೊಂದರೆಯಾಗುತ್ತದೆ. 
 • ಟೀ ಟ್ರೀ ಎಣ್ಣೆ ಅಥವಾ ಜೆಲ್ ಬಳಸುವುದರಿದ ಮೊಡವೆ ಕಡಿಮೆಯಾಗುತ್ತದೆ, ಟೀ ಟ್ರೀ ಎಣ್ಣೆ ಕೈ ಎಟಕುವ ದರದಲ್ಲಿದ್ದು, ಎಲ್ಲ ಅಂಗಡಿಗಳಲ್ಲಿಯೂ ಲಭ್ಯವಿರುತ್ತದೆ.
 • ಹಾರ್ಮೋನ್‌ಗಳ ಏರುಪೇರಿನಿಂದಲೂ ಮಹಿಳೆಯರಿಗೆ ಸ್ತನದ ಮೇಲೆ ಮೊಡವೆ ಮೂಡುವ ಸಾಧ್ಯತೆ ಇದ್ದು, ಇದು ಸರಿಯಾದಲ್ಲಿ, ಎಲ್ಲವೂ ಸರಿ ಹೋಗುತ್ತದೆ.

ಏನೇನು ಮಾಡಬೇಕು?

 • ಹೆಚ್ಚು ಕೆಮಿಕಲ್ಸ್ ಇರುವ ಸೋಪ್ ಬಳಸಬಾರದು. ಇದು ಚರ್ಮವನ್ನು ಒಣಗಿಸುತ್ತದೆ.
 • ಹೆಚ್ಚು ಒತ್ತಡ ಹಾಕಿ ಚರ್ಮವನ್ನು ಉಜ್ಜಬಾರದು.
 • ಮೊಡವೆ ಅಥವಾ ಗುಳ್ಳೆಯನ್ನು ಒಡೆಯುವುದು ಮತ್ತು ಹಿಸುಕುವುದು ಮಾಡಿದರೆ ಕಲೆಯಾಗುತ್ತದೆ.
 • ಬೆವರಿದ ಬಟ್ಟೆಯಲ್ಲಿ ಹೆಚ್ಚು ಹೊತ್ತಿರಬಾರದು.