ಮದುವೆ ಮುರಿದು ಬೀಳುವ ವಿಚಾರ ನಾವು ಕೇಳುತ್ತಿರುತ್ತೇವೆ, ಇದು ಹೊಸತೇನೂ ಅಲ್ಲ. ಆದರೆ ಮದುವೆ ಮುರಿದು ಬಿತ್ತೆಂದು ಯುವತಿಯೊಬ್ಬಳು ತನ್ನ ನಾಯಿಯೊಂದಿಗೆ ಮದುವೆಯಾದ ಪ್ರಸಂಗ ಬಹುಶಃ ಯಾರೂ ಕೇಳಿರಲಿಕ್ಕಿಲ್ಲ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,  ಮದುವೆಯ ದಿನವೇ ಪ್ರಿಯಕರ ಮದುಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮದುಮಗಳು ತನ್ನ ನಾಯಿಯೊಂದಿಗೆ ಮದುವೆಯಾಗಿದ್ದಾಳೆ.

ಅರ್ಜೆಂಟಿನಾ(ಜ.15): ಮದುವೆ ಮುರಿದು ಬೀಳುವ ವಿಚಾರ ನಾವು ಕೇಳುತ್ತಿರುತ್ತೇವೆ, ಇದು ಹೊಸತೇನೂ ಅಲ್ಲ. ಆದರೆ ಮದುವೆ ಮುರಿದು ಬಿತ್ತೆಂದು ಯುವತಿಯೊಬ್ಬಳು ತನ್ನ ನಾಯಿಯೊಂದಿಗೆ ಮದುವೆಯಾದ ಪ್ರಸಂಗ ಬಹುಶಃ ಯಾರೂ ಕೇಳಿರಲಿಕ್ಕಿಲ್ಲ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ ದಿನವೇ ಪ್ರಿಯಕರ ಮದುಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮದುಮಗಳು ತನ್ನ ನಾಯಿಯೊಂದಿಗೆ ಮದುವೆಯಾಗಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರ್ಜೆಂಟಿನಾದ ರೊಬಿನಾ ಪೀಟೋಂ ಹೆಸರಿನ ಯುವತಿಗೆ ಆಕೆಯ ಪ್ರಯಕರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ಹಿಂದಿನ ದಿನ ಈ ಸಂಬಂಧ ಮುರಿದು ಬಿದ್ದಿದೆ. ಇಷ್ಟಾದರೂ ಧೈರ್ಯಗೆಡದ ಯುವತಿ, ಪ್ರಿಯಕರನಿಗೆ ಬುದ್ಧಿ ಕಲಿಸಲು ನಾಯಿಯೊಡನೆ ಮದುವೆಯಾಗಿದ್ದಾಳೆ.

ಇಲ್ಲಿನ ಹೋಟೆಲ್ ಬಿಗಂಸ್'ನಲ್ಲಿ ನಾಯಿ ಹಾಗೂ ಯುವತಿಯ ಮದುವೆ ನಡೆದಿದೆ. ಯುವಕ ನಿರಾಕರಿಸಿದರೇನಂತೆ ಮದುವೆ ಮಾತ್ರ ನಿಗದಿಪಡಿಸಿದ ದಿನದಂದೇ ಆಗಬೇಕು ಎಂದು ಪಟ್ಟು ಹಿಡಿದ ಯುವತಿ ಹೀಗೆ ಮಾಡಿದ್ದಾಳೆ. ವಾಸ್ತವವಾಗಿ ಆಕೆಯ ಮನೆಯವರೂ ಆಕೆ ತನ್ನ ಮುದ್ದಿನ ನಾಯಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿ ಮದುವೆ ಮಾಡಿಕೊಳ್ಳುತ್ತಾಳೆ ಎಂದು ಕಲ್ಪಿಸಿರಲಿಲ್ಲ.