ಚೀನಿಕಾಯಿ ಸೇವನೆಯಿಂದ ಕೂದಲಿಗೆ ಕುತ್ತು

First Published 26, May 2018, 6:06 PM IST
bitter pumpkin may cause for hair loss
Highlights

ಕುಂಬಳಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕಹಿ ಕುಂಬಳಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ ಹೇಳಿ. ಆದರೆ ಕಹಿ ಕುಂಬಳಕಾಯಿಂದ ಮಾಡುವ ವಿವಿಧ ಪ್ರಕಾರದ ಖಾದ್ಯಗಳಿಂದ ದೂರ ಇರುವಂತೆ ನೂತನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.

ಬೆಂಗಳೂರು(ಮೇ.26): ಕುಂಬಳಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕಹಿ ಕುಂಬಳಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ ಹೇಳಿ. ಆದರೆ ಕಹಿ ಕುಂಬಳಕಾಯಿಂದ ಮಾಡುವ ವಿವಿಧ ಪ್ರಕಾರದ ಖಾದ್ಯಗಳಿಂದ ದೂರ ಇರುವಂತೆ ನೂತನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.

ಹೌದು ಕಹಿ ಕುಂಬಳಕಾಯಿ ಖಾದ್ಯ ಸೇವಿಸಿ ಇಬ್ಬರು ಮಹಿಳೆಯರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಫ್ರಾನ್ಸ್ ನಲ್ಲಿ ಓರ್ವ ಮಹಿಳೆ ಕಹಿ ಕುಂಬಳಕಾಯಿಯ ಜ್ಯೂಸ್ ಸೇವಿಸಿದ್ದರ ಪರಿಣಾಮ ಕೆಲವೇ ದಿನಗಳಲ್ಲಿ ತಮ್ಮ ಕೂದಲ್ನ್ನು ಕಳೆದುಕೊಂಡಿದ್ದಾರಂತೆ.
ಕುಂಬಳಕಾಯಿಯಲ್ಲಿ ಕುಕುರ್ ಬಿಟಾಸಿನ್ ಎಂಬ ಟಾಕ್ಸಿನ್ ನಿಂದ ಕಹಿ ಉತ್ಪಾದನೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಕೂದಲು ಊದುರುವಿಕೆ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

loader