ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಪೂರೈಸಿ, ರಕ್ತವನ್ನು ಸಮೃದ್ಧಿಯಾಗಿಸಿ, ನಿಶ್ಯಕ್ತಿಯನ್ನು ಕಡಿಮೆ ಮಾಡೋ ಖರ್ಜೂರ ಸಕಲ ರೀತಿಯಲ್ಲಿ ದೇಹಕ್ಕೆ ಬೇಕು. ಅಲ್ಲದೇ ಕ್ಯಾಲ್ಸಿಯಂ, ಪೊಟ್ಯಾಷಿಯಂ, ತಾಮ್ರ ಸಹ ಅಧಿಕವಾಗಿರುವ ಖರ್ಜೂರವನ್ನು ದಿನಕ್ಕೊಂದು ತಿಂದರೂ ಸಾಕು. ಪೋಷಕಾಂಶಗಳು ಪೂರೈಕೆಯಾಗುವುದರಲ್ಲದೇ, ತೂಕವನ್ನು ಕಡಿಮೆ ಮಾಡುತ್ತದೆ. ಏನೀ ಖರ್ಜೂರದ ಕರಾಮತ್ತು?

  • ಎಷ್ಟೇ ಯತ್ನಿಸಿದರೂ ತೂಕ ಕಡಿಮೆ ಮಾಡಲು ಸಾಧ್ಯವಾಗದಿದವರಿಗೆ ಖರ್ಜೂರ ಬೆಸ್ಟ್ ಫುಡ್. ಎಣ್ಣೆಯಲ್ಲಿ ಕರಿದ ಪದಾರ್ಥ ಅಥವಾ ಜಂಕ್ ಫುಡ್ ತಿನ್ನುವ ಬದಲು 4-5 ಖರ್ಜೂರ ತಿಂದರೆ ಹೊಟ್ಟೆಯೂ ತುಂಬುತ್ತೆ. ಸುಖಾಸುಮ್ಮನೆ ಬೇಡದ್ದು ತಿಂದು ಆರೋಗ್ಯ ಹದಗೆಡುವುದೂ ತಪ್ಪುತ್ತೆ.
  • ತಿಂದ ಯಾವುದೇ ಆಹಾರ ಸುಲಭವಾಗಿ ಜೀರ್ಣವಾಗದಿದ್ದರೆ, ಖರ್ಜೂರ ಸುಲಭ ಪಚನ ಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಹೊಟ್ಟೆ ಕೆಟ್ಟಿದ್ರೆ ಸರಿ ಹೋಗುತ್ತದೆ.
  • ಕ್ಯಾಲ್ಸಿಯಂ ಅಂಶ ಹೆಚ್ಚಿಸಿ, ಮೂಳೆ ಸವೆತವನ್ನು ತಡೆಯುತ್ತದೆ. 
  • ನರವನ್ನು ಶಕ್ತಿಯುತಗೊಳಿಸುತ್ತದೆ.
  • ಹ್ಯಾಂಗ್‌ ಓವರ್‌ಗೂ ಖರ್ಜೂರ ಬೆಸ್ಟ್ ಮದ್ದು. 
  • ಮಲಬದ್ಧತೆ ತಡೆಯಲು, ರಾತ್ರಿ ನೀರಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.