ಸುಖಕ್ಕಾಗಿ ಹಾತೊರೆಯುವ ಮುನ್ನ ಇರಲಿ ಅರಿವು...

ಜೀವನದ ಅಗತ್ಯಗಳಲ್ಲಿ ಒಂದಾದ ಸೆಕ್ಸ್ ಬಗ್ಗೆ ಮನುಷ್ಯನಿಗೆ ಮಡಿವಂತಿಕೆಯೂ ಜಾಸ್ತಿ. ಈ ಬಗ್ಗೆ ಮಾತನಾಡುವುದು, ಓದುವುದು ಹಾಗೂ ಬರೆಯುವುದೇ ಅಪರಾಧ ಎಂದು ನಂಬಿರುವವರೇ ಹೆಚ್ಚು. ಅದಕ್ಕೆ ತೀರದ ಕುತೂಹಲ. ಇಂಥ ವಿಷಯದ ಬಗ್ಗೆ ಒಂದಷ್ಟು ಮಾಹಿತಿ...

Be aware of sexual life and what women want

ಮಿಲನ ಕ್ರಿಯೆ ಅಥವಾ ಸೆಕ್ಸ್ ಬಗ್ಗೆ ಮಾತನಾಡಲು ಇಂದಿಗೂ ಎಲ್ಲರಿಗೂ ಮುಜುಗರ. ಆ ಬಗ್ಗೆ ವಿಷ್ಯ ತಿಳಿದುಕೊಳ್ಳಲು ಹಿರಿಯರ ಬಳಿಯಂತೂ ಮಾತನಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿ ಪುಸ್ತಕ, ಇಂಟೆರ್‌ನೆಟ್ ಮೊರೆ ಹೋಗುವವರೇ ಹೆಚ್ಚು. ಒಳ್ಳೆ ಮಾಹಿತಿಯುಳ್ಳ ಪುಸ್ತಕ ಸಿಕ್ಕರೆ ಸರಿ. ಆದರೆ, ಸಿಗಬೇಕಲ್ಲ. ಸಿಕ್ಕಿದ್ದನ್ನೇ ಓದಿ ಓದಿಕೊಂಡು ನಿಮಗೆಲ್ಲ ತಿಳಿದಿದೆ ಅಂದುಕೊಳ್ಳಬೇಡಿ. ತಿಳಿಯದಿರುವುದೂ ಇದೆ ಬಹಳಷ್ಟು...

  • ಸೆಕ್ಸ್ ಎಂದರೆ ಕೇವಲ ಆ ಸುಖ ಪಡೆಯುವುದು ಮಾತ್ರವಲ್ಲ, ಅದಕ್ಕೂ ಮೊದಲು ರೋಮ್ಯಾಂಟಿಕ್ ಆಗಿರುವುದು ಸಹ ಸೆಕ್ಸ್ ನ ಒಂದು ಭಾಗ.
  • ಮಹಿಳೆಯರಿಗೆ ಕೇವಲ ಲೈಂಗಿಕ ಕ್ರಿಯೆಯಿಂದ ಮಾತ್ರ ತೃಪ್ತಿ ಸಿಗೋದಿಲ್ಲ. ಅವರಿಗೆ ಫೋರ್‌ ಪ್ಲೇ ಮುಖ್ಯ. ಆದರೆ ಸೆಕ್ಸ್‌ಗೂ ಮುನ್ನ ಅವರನ್ನು ಸಂಪೂರ್ಣವಾಗಿ ಪರವಶಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.
  • ಸೈಜ್‌ ಬಗ್ಗೆ ಟೆನ್ಶನ್ ಇದ್ರೆ ಅದ್ರಿಂದ ಮೂಡ್ ಕೆಡುತ್ತದೆ ಅಷ್ಟೇ. ಆದುದರಿಂದ ನಿಮ್ಮಾಕೆಯನ್ನು ಹೇಗೆ ಖುಷಿ ಪಡಿಸೋದು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತೆಲ್ಲಾ ಯೋಚನೆ ಮಾಡಬಾರದು.
  • ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅದು ನಿರೀಕ್ಷಿತ ಸುಖ ನೀಡದಿದ್ದರೆ ಬೇಸರವಾಗುತ್ತದೆ.
  • ಕಾಂಡೋಮ್ ಬಳಸಬೇಕು. ಆದರೆ, ಎರಡೆರಡಲ್ಲ. ಇದರಿಂದ ಕಷ್ಟ ಆಗೋದು ಖಂಡಿತಾ.
  • ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಲೇ ಬಾರದು, ಇದರಿಂದ ಮುಂದೆ ಸಮಸ್ಯೆ ಉಂಟಾಗೋದು ಖಂಡಿತಾ.
  • ಪಿರಿಯಡ್ಸ್‌ ಸಮಯದಲ್ಲಿ ಸೆಕ್ಸ್‌ ಮಾಡುವುದು ಸ್ವಚ್ಛತಾ ದೃಷ್ಟಿಯಿಂದ ಒಳ್ಳೆಯದಲ್ಲ. ಹೆಣ್ಣಿಗೆ ಕಿರಿ ಕಿರಿ ಎನಿಸಬಹುದು.
Latest Videos
Follow Us:
Download App:
  • android
  • ios