ನಾವು ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು. ಆದರೆ ಹಾಗೆ ಧೈರ್ಯ ತೋರಿಸಿ ಘೋಷಿಸಿಕೊಂಡಲ್ಲಿ ಬದುಕು ಸಹನಶೀಲವಾಗುತ್ತದೆ ಎಂದ ಎಲ್ ಜಿ ಬಿ ಟಿ ಹಕ್ಕುಗಳ ಪ್ರತಿಪಾದಕ ವಸುಧೇಂದ್ರ
ನಿಮ್ಮ ಲೈಂಗಿಕ ನಿಲುವನ್ನು ಬಚ್ಚಿಟ್ಟುಕೊಳ್ಳಬೇಡಿ ಎಂದು ಖ್ಯಾತ ಸಾಹಿತಿ, ಎಲ್ ಜಿ ಬಿ ಟಿ ಹಕ್ಕುಗಳ ಪ್ರತಿಪಾದಕ ವಸುಧೇಂದ್ರ ಕರೆ ನೀಡಿದ್ದಾರೆ. 'ಅವಧಿ' ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ 'ಚಾಕ್ ಸರ್ಕಲ್' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
'ನನ್ನ ಬರವಣಿಗೆ ನನಗೆ ಹಣ, ಕೀರ್ತಿ ಹಾಗೂ ಪ್ರೀತಿಯನ್ನು ತಂದುಕೊಟ್ಟಿರಬಹುದು. ಆದರೆ ನಾನು ಗೇ ಲೋಕದ ಸಂಗತಿಗಳನ್ನು ಒಳಗೊಂಡ 'ಮೋಹನಸ್ವಾಮಿ' ಬರೆದಾಗ ಅದು ನನಗೆ ಬದುಕನ್ನು ಮರಳಿ ತಂದುಕೊಟ್ಟಿತು ಎಂದಿದ್ದಾರೆ.
15 ವರ್ಷವಾದ್ರೂ ಸಂತಾನ ಭಾಗ್ಯವಿಲ್ಲ: ಕರುವನ್ನು ಮಗನಾಗಿ ದತ್ತು ಸ್ವೀಕರಿಸಿದ ರೈತ ದಂಪತಿ
ಸಮಾಜದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆಂದೇ ನಾವು ಹಾಕಿಕೊಳ್ಳುವ ಮುಖವಾಡಗಳನ್ನು ಕಳಚಬೇಕಾದ ಅಗತ್ಯವಿದೆ. ಹಾಗೆ ಮುಖವಾಡಗಳನ್ನು ಕಳಚಿ ನಮ್ಮಂತೆ ಬದುಕಿದರೆ ನಾವು ಸುಂದರವಾಗಿತೆ ಕಾಣುತ್ತೇವೆ. ಆ ಜ್ಞಾನವನ್ನು ಬೆಳೆಸಿಕೊಳ್ಳಬೇಕು.
ನಾವು ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು. ಆದರೆ ಹಾಗೆ ಧೈರ್ಯ ತೋರಿಸಿ ಘೋಷಿಸಿಕೊಂಡಲ್ಲಿ ಬದುಕು ಸಹನಶೀಲವಾಗುತ್ತದೆ ಎಂದರಲ್ಲದೆ ನಾನು ಹಾಗೆ ಮೋಹನಸ್ವಾಮಿ ಕೃತಿಯ ಮೂಲಕ ಗೇ ಎಂದು ಘೋಷಿಸಿಕೊಂಡಾಗಲೇ ಸುಪ್ರೀಂ ಕೋರ್ಟ್ ಸಲಿಂಗ ಬದುಕನ್ನು ಅಪರಾಧ ಎನ್ನುವ ತೀರ್ಪು ಕೊಟ್ಟಿತ್ತು. ಆ ಸಮಯದಲ್ಲಿ ನಾನು ತುಂಬು ಆತಂಕದಿಂದ ದಿನಗಳನ್ನು ಕಳೆದಿದ್ದೇನೆ.
ಸಮಾಜದಲ್ಲಿರುವ ಹೋಮೊಫೋಬಿಯಾ ಹೋಗಬೇಕಾದರೆ ಜ್ಞಾನಪ್ರಸರಣ ಆಗಬೇಕು. ಈ ಕಾರಣದಿಂದಲೇ ನಾನು ಹೆಚ್ಚೆಚ್ಚು ಈ ಅರಿವಿನ ಪ್ರಸಾರದಲ್ಲಿ ನಿರತನಾಗಿದ್ದೇನೆ ಮತ್ತು ಗೇ ಕೌನ್ಸೆಲಿಂಗ್ ನಡೆಸುತ್ತಿದ್ದೇನೆ ಎಂದಿದ್ದಾರೆ. 'ಅವಧಿ'ಯ ಪ್ರಧಾನ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 17, 2020, 6:55 PM IST