ಕಚೇರಿಯಲ್ಲಿ ಕೆಲಸದ ನಡುವೆ ಊಟ, ಕಾಫಿ, ಮಕ್ಕಳಿಗೆ ಹಾಲುಣಿಸಲು ಬ್ರೇಕ್ ನೀಡುವುದು ಸಾಮಾನ್ಯ. ಆದರೆ ಇದೀಗ ಸ್ವೀಡನ್ ಕಚೇರಿಯ ಸಿಬ್ಬಂದಿಗಳಿಗೆ ಸೆಕ್ಸ್ ಮಾಡಲು ಕೆಲಸದ ನಡುವೆ ಒಂದು ಗಂಟೆಯ ಬ್ರೇಕ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದೆಯಂತೆ.

ಸ್ವೀಡನ್(ಫೆ.27): ಕಚೇರಿಯಲ್ಲಿ ಕೆಲಸದ ನಡುವೆ ಊಟ, ಕಾಫಿ, ಮಕ್ಕಳಿಗೆ ಹಾಲುಣಿಸಲು ಬ್ರೇಕ್ ನೀಡುವುದು ಸಾಮಾನ್ಯ. ಆದರೆ ಇದೀಗ ಸ್ವೀಡನ್ ಕಚೇರಿಯ ಸಿಬ್ಬಂದಿಗಳಿಗೆ ಸೆಕ್ಸ್ ಮಾಡಲು ಕೆಲಸದ ನಡುವೆ ಒಂದು ಗಂಟೆಯ ಬ್ರೇಕ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದೆಯಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಓರ್ವ ರಾಜಕಾರಣಿ ಸಿಬ್ಬಂದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕೆಲಸದ ನಡುವೆ ಒಂದು ಗಂಟೆಯ 'ಸೆಕ್ಸ್ ಬ್ರೇಕ್' ನೀಡುವ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಸ್ವೀಡನ್'ನ ಸೋಷಲ್ ಡೆಮಾಕ್ರಟಿಕ್ ಪಾರ್ಟಿಯ 42 ವರ್ಷದ ಪೆರ್ ಎರಿಕ್ ಮುಸ್ಕೋಸ್'ರವರು ಇಲ್ಲಿನ ಕೌನ್ಸಿಲ್ ಮೀಟಿಂಗ್'ನಲ್ಲಿ ಇಂತಹುದ್ದೊಂದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬ್ರೇಕ್ ವೇಳೆ ತೆರಳಿದವರ ವೇತನವನ್ನು ಕಡಿತಗೊಳಿಸುವುದಿಲ್ಲ ಹಾಗೂ ಈ ಆದೇಶ ಜಾರಿಯಾದರೆ ದೇಶದಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ ಎಂಬ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ 'ವಿರಾಮವಿಲ್ಲದ ಬದುಕಿನಲ್ಲಿ ಪ್ರೇಮಿಗಳು ಹಾಗೂ ವಿವಾಹಿತ ಜೋಡಿಗಳಿಗೆ ಒಟ್ಟಾಗಿ ಸಮಯ ಕಳೆಯುವ ಅವಕಾಶ ಸಿಗುತ್ತಿಲ್ಲ. ಇಂತಹುದ್ದೊಂದು ಆದೇಶ ಜಾರಿಯಾದರೆ ದಂಪತಿಗಳ ನಡುವಿನ ಜಗಳ ಕಡಿಮೆಯಾಗಿ ಸಂಬಂಧಗಳಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಕಚೇರಿಗಳಲ್ಲಿ ವ್ಯಾಯಾಮ ಮಾಡಲು ವಿರಾಮ ನೀಡಲಾಗುತ್ತದೆ, ಅಧ್ಯಯನದ ಮೂಲಕ 'ಸೆಕ್ಸ್' ಕೂಡಾ ಒಂದು ರೀತಿಯ ವ್ಯಾಯಾಮ ಎಂದು ತಿಳಿದು ಬಂದಿದೆ. ಹೀಗಿರುವಾಗ 'ಸೆಕ್ಸ್'ಗಾಗಿ ವಿರಾಮ ನೀಡಲು ಹಿಂದೇಟು ಹಾಕಬಾರದು' ಎಂದು ಎರಿಕ್ ಮುಸ್ಕೋಸ್ ತಿಳಿಸಿದ್ದಾರೆ.

ಸ್ವೀಡನ್'ನಲ್ಲಿ ಸಿಬ್ಬಂದಿಗಳಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದಿನದಲ್ಲಿ ಎರಡು ಮೂರು ಬಾರು ಕಾಫಿ/ಟೀ ಬ್ರೇಕ್ ನೀಡಲಾಗುತ್ತದೆ. ಇವೆಲ್ಲದರೊಂದಿಗೆ ತಂದೆಯಾದಾಗ 480 ದಿನಗಳ ಹೆಚ್ಚಿನ ರಜೆಯನ್ನೂ(Parental Leave) ನೀಡಲಾಗುತ್ತದೆ.

ಕೃಪೆ: ND Tv