ಇಲ್ಲೊಂದು ಕಡೆ ಕುಟುಂಬದವರ ಜೊತೆಗೆ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಆಹಾರ ಆರ್ಡರ್‌ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 

ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲಾಗದು. ಇತ್ತೀಚೆಗಂತು ಸಣ್ಣ ಮಕ್ಕಳಿಂದ ಹಿಡಿದು ಹರೆಯಕ್ಕೆ ಕಾಲಿರಿಸಿದ ತರುಣರವರೆಗೆ ಅನೇಕರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ಅಲ್ಲಲ್ಲಿ ಆಗಾಗ ನಡೆಯುತ್ತಲೇ ಇದೆ. ಅದೇ ರೀತಿ ಇಲ್ಲೊಂದು ಕಡೆ ಕುಟುಂಬದವರ ಜೊತೆಗೆ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಆಹಾರ ಆರ್ಡರ್‌ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಸಾವು ಯಾವಾಗ ಬೇಕಾದರು ಯಾವ ಕ್ಷಣದಲ್ಲಿ ಬೇಕಾದರು ನಮ್ಮನ್ನಪ್ಪಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಿದೆ.

ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಘಟನೆ ಕಳೆದ ವರ್ಷಮಧ್ಯಪ್ರದೇಶದಲ್ಲಿ ನಡೆದಿದ್ದಾಗಿದೆ. ಮನೆಯಿಂದ ಹೊರಗಡೆ ಬಂದಿದ್ದ ಕುಟುಂಬವೊಂದು ಭೋಜನ ಸೇವಿಸುವುದಕ್ಕಾಗಿ ಹೊಟೇಲ್‌ ಬಂದಿದ್ದಾರೆ. ತಮಗಿಷ್ಟವಾದ ಆಹಾರವನ್ನು ಆರ್ಡರ್ ಕೂಡ ಮಾಡಿದ್ದಾರೆ. ಆದರೆ ಊಟ ಮೇಜಿನ ಮೇಲೆ ಬಂದು ತಲುಪುವುದರೊಳಗೆ ಆ ಕುಟುಂಬದ ಹಿರಿಯ ವ್ಯಕ್ತಿಯೊಬ್ಬರು ಟೇಬಲ್ ಮೇಲೆಯೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ. ಸಡನ್ ಆಗಿ ನಡೆದ ಈ ಘಟನೆಯಿಂದ ಕುಟುಂಬದವರು ಶಾಕ್‌ಗೆ ಒಳಗಾಗಿದ್ದಾರೆ.

ಹೊಟೇಲ್‌ನ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವೈರಲ್ ಆದ ವೀಡಿಯೋದಲ್ಲಿ ಅಪ್ಪ ಮಗ ಮಗಳು ಅಮ್ಮ ಇರುವ ಕುಟುಂಬವೊಂದು ಹೊಟೇಲ್‌ಗೆ ಆಗಮಿಸಿ ಟೇಬಲ್ ಮೇಲೆ ಕುಳಿತು ಫುಡ್ ಆರ್ಡರ್ ಮಾಡಿದ್ದಾರೆ. ಫುಡ್ ಟೇಬಲ್ ಮೇಲೆ ಬಂದು ತಲುಪುತ್ತಿದ್ದಂತೆ ಕುಟುಂಬದ ಯಜಮಾನ ಟೇಬಲ್ ಮೇಲೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರೆಲ್ಲಾ ಅವರ ನೆರವಿಗೆ ಧಾವಿಸಿ ಬಂದಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ. ತಾವು ಕೊನೆಯದಾಗಿ ಆರ್ಡರ್ ಮಾಡಿದ ಆಹಾರವನ್ನು ತಿನ್ನಲಾಗದೇ ಅವರು ತಮ್ಮ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಆಹಾ ನನ್ನ ಮದ್ವೆಯಂತೇ.., ಎಂದು ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹಾರ್ಟ್ ಅಟ್ಯಾಕ್!

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಯಾರ ಸಮಯ ಯಾವಾಗ ಮುಗಿಯುವುದೋ ಗೊತ್ತಿಲ್ಲ, ಹೀಗಾಗಿ ಎಲ್ಲರೊಂದಿಗೆ ಚೆನ್ನಾಗಿ ಖುಷಿ ಖುಷಿಯಾಗಿ ಬೆರೆಯುತ್ತಾ ಚೆನ್ನಾಗಿ ಇರಿ ಎಂಬ ಸಂದೇಶ ನೀಡುತ್ತಿದೆ. ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ, ಪ್ರತಿದಿನವೂ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ವರದಿ ಆಗುತ್ತಲೇ ಇವೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಸಹೋದ್ಯೋಗಿಯ ಔತಣಕೂಟದಲ್ಲಿ ಡಾನ್ಸ್ ಮಾಡುತ್ತಿದ್ದ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಒಬ್ಬರು ಖುಷಿಯಿಂದ ಡಾನ್ಸ ಮಾಡುತ್ತಿರುವಾಗಲೇ ಕುಸಿದು ಬಿದ್ದು, ಕೊನೆಯುಸಿರೆಳೆದಿದ್ದರು. ಅವರ ಕೊನೆ ಕ್ಷಣಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದವು.

ಎನ್ಐಎ ಅಧಿಕಾರಿ ಪುತ್ರಿ, ಕಾನೂನು ವಿದ್ಯಾರ್ಥಿನಿ ಕಾಲೇಜು ಹಾಸ್ಟೆಲ್‌ ರೂಮ್‌ನಲ್ಲಿ ಶವವಾಗಿ ಪತ್ತೆ

Scroll to load tweet…