Asianet Suvarna News Asianet Suvarna News

ಜಪಾನಿನ ಈ 24 ಕೆಂಪು ದ್ರಾಕ್ಷಿ ಬೆಲೆ 74 ಲಕ್ಷ ರೂ.!

ಸಾಮಾನ್ಯವಾಗಿ ನಾವು ಮಾರ್ಕೆಟ್‌ನಿಂದ ದ್ರಾಕ್ಷಿ ಖರೀದಿಸಿದರೆ 80 ಅಥವಾ 100 ಜಾಸ್ತಿ ಎಂದರೆ 200  ರೂ. ಕೊಟ್ಟು ಖರೀದಿಸಿರಬಹುದು. ಆದರೆ ಲಕ್ಷಾಂತರ ಬೆಲೆ ಬಾಳುವ ದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿದೆಯಾ? 

A bunch of 24 ruby roman grapes costs 74 lac
Author
Bangalore, First Published Jul 13, 2019, 3:58 PM IST

ಕಪ್ಪು, ಹಸಿರು ಬಣ್ಣದ ದ್ರಾಕ್ಷಿ ನೀವು ಸವಿದಿರಬಹುದು, ಆದ್ರೆ ಟೊಮ್ಯಾಟೋದಂತೆ ಕೆಂಪಾಗಿರುವ ದುಬಾರಿ ದ್ರಾಕ್ಷಿ ಹಣ್ಣನ್ನು ಟೇಸ್ಟ್ ಮಾಡಿದ್ದೀರಾ? ಬಿಡಿ, ಭಾರತೀಯ ಶ್ರೀ ಸಾಮಾನ್ಯ ಈ ಹಣ್ಣಿನ ಬೆಲೆ ಕೇಳಿದರೆ ದೂರ ಹೋಗುತ್ತಾನೆ. ಜಪಾನಿನಲ್ಲಿ 24 ಕೆಂಪು ದ್ರಾಕ್ಷಿ ಹಣ್ಣಿನ ಬೆಲೆ ಬರೋಬ್ಬರಿ 7.5 ಲಕ್ಷ ರು.! 

ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....

ಇದು ಜೋಕ್ ಅಲ್ಲ. ವಿಶೇಷ ಜಾತಿಗೆ ಸೇರಿದ ಈ ಕೆಂಪು ದ್ರಾಕ್ಷಿಯ ಒಂದು ಹಣ್ಣು ಸುಮಾರು 20 ಗ್ರಾಂ ತೂಗುತ್ತದೆ. ಹನ್ನೆರಡು ವರ್ಷಗಳ ಹಿಂದೆ ಜಪಾನಿನ ಇಶಿಕಾವಾ ಪ್ರಾಂತ್ಯದ ಸರ್ಕಾರ ಈ ತಳಿಯನ್ನು ಬೆಳೆಸಿತು. ಬೆಲೆ ಕೇಳಿದರೆ ಸಾಕು, ಇದು ಸಿರಿವಂತರ ಹಣ್ಣೆಂದು ಹೇಳುವುದೇ ಬೇಡ.

ಶಕ್ತಿವರ್ಧಕ ಒಣದ್ರಾಕ್ಷಿಯಲ್ಲಿ ಅತ್ಯಧಿಕ ಆರೋಗ್ಯ ಗುಣ

ರೂಬಿ ರೋಮನ್ ಎನ್ನುತ್ತಾರೆ ಈ ಹಣ್ಣನ್ನು. ಇದು ಸಿಹಿಯಾಗಿದ್ದು, ರಸಭರಿತವಾಗಿರುತ್ದೆ. ಜೊತೆಗೆ ಸ್ವಲ್ಪ ಅಸಿಡಿಕ್ ಕೂಡ ಆಗಿದೆ. ಇದನ್ನು ಇಲ್ಲಿ ಶುಭ ಸಂದರ್ಭದಲ್ಲಿ ಅಥವಾ ಕೆಲಸದ ಪ್ರೊಮೋಷನ್ ವೇಳೆ ಉಡುಗೊರೆಯಾಗಿ ನೀಡುತ್ತಾರೆ.

ದುರ್ಲಭವಾದ ಈ ಹಣ್ಣಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಹೆಚ್ಚು. ಈ ಹಣ್ಣು ತಯಾರಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಣ್ಣನ್ನು ಹರಾಜು ಮಾಡಲಾಗಿತ್ತು. ಈ ಹಣ್ಣನ್ನು 7.5 ಲಕ್ಷ ರೂ. ಕೊಟ್ಟು ಜಪಾನಿನ ಹಯಕುರಾಕೂಸೋ ಕಂಪನಿ ಖರೀದಿಸಿದೆ. ನೀವೇ ಲೆಕ್ಕ ಹಾಕಿ ಈ ಹಣ್ಣಿಗೆ ಅದೆಂಥಾ ಡಿಮ್ಯಾಂಡ್, ಅದೆಷ್ಟು ರುಚಿ ಇರಬಹುದೆಂದು.

Follow Us:
Download App:
  • android
  • ios