ರಾಗಿಯಿಂದ ನಾವು ಏನೆಲ್ಲಾ ಮಾಡಿ ಸೇವಿಸುತ್ತೇವೆ ಅಲ್ವಾ? ರಾಗಿ ಮುದ್ದೆ, ಮಣ್ಣಿ, ಅಂಬಲಿ, ದೋಸೆ.. ಇತ್ಯಾದಿ. ಈ ಪುಟಾಣಿ ಧಾನ್ಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವ ಎಲ್ಲಾ ಶಕ್ತಿಯೂ ಇದೆ. ಪ್ರತಿ ದಿನ ಇದನ್ನು ಆಹಾರದಲ್ಲಿ ಬಳಸಿದರೆ ಹತ್ತು ಹಲವು ಅನಾರೋಗ್ಯಕ್ಕೆ ಮದ್ದಾಗಬಲ್ಲದು....

  • ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರ. ಇದು ಅರೋಗ್ಯ ವೃದ್ಧಿಸಿ ಅಸ್ತಮಾ ಬರದಂತೆ ತಡೆಗಟ್ಟುತ್ತದೆ. 
  • ದೇಹದ ಮೂಳೆಗಳು ಸ್ಟ್ರಾಂಗ್ ಆಗಿಸುತ್ತದೆ. ಇದರಲ್ಲಿರುವ  ಕ್ಯಾಲ್ಷಿಯಂ ಮತ್ತು ಮಿಟಮಿನ್ ಡಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಅಗತ್ಯ ಪೋಷಕಾಂಶಗಳನ್ನು ನೀಡಿ  ದೇಹವನ್ನು ಗಟ್ಟಿಮುಟ್ಟಾಗಿಸುತ್ತದೆ. 
  • ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿವೆ. ಇವು ದೇಹದಲ್ಲಿ ಕ್ಯಾನ್ಸರ್ ಕೋಶಗಳ ನಿವಾರಿಸುತ್ತದೆ. 
  • ಮಹಿಳೆಯರನ್ನು ಹೆಚ್ಚಾಗಿ ಕಾಡುವ ರಕ್ತಹೀನತೆ ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕ ಸಮಸ್ಯೆ. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿದೆ. ಇದರಿಂದ ರಕ್ತಹೀನತೆಯನ್ನು ತಡೆಯಬಹುದು. 
  • ಪ್ರತಿ ದಿನ ರಾಗಿ ತಿಂದರೆ ಅದರಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುತ್ತದೆ.

ಈ ಹಣ್ಣು ಮಧುಮೇಹಕ್ಕೂ ಮದ್ದು..

  • ಇದರಲ್ಲಿರುವ ಮೆಗ್ನೀಷಿಯಂ ಅಂಶ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ,  ಹೃದಯಾಘಾತ ಸಮಸ್ಯೆ ನಿವಾರಿಸುತ್ತದೆ. 
  • ರಾಗಿ ಆಹಾರ ಸೇವಿಸಿದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ. 
  • ರಾಗಿಯನ್ನು ಸೇವಿಸುವ ಜನರಲ್ಲಿ ಶೇ.30ರಷ್ಟು ಮಧುಮೇಹ  ಇಳಿಕೆ ಕಂಡುಬರುತ್ತದೆ.