ಮಾತೇಟಿಗಿಂತ ಕಣ್ಣೇಟೆ ಜೋರಿರಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Oct 2018, 4:04 PM IST
7 ways to romance your husband
Highlights

'ಮಾತು ಬೆಳ್ಳಿ ಮೌನ ಬಂಗಾರ...' ಎನ್ನುವ ಮಾತಿದೆ. ಅದರಲ್ಲಿಯೂ ರೊಮ್ಯಾನ್ಸ್ ವಿಷಯದಲ್ಲಿ ಮಾತು ಕಮ್ಮಿ ಮಾಡಿ, ಭಾವನೆಗಳನ್ನು ವಿಧವಿಧವಾಗಿ ಎಕ್ಸ್‌ಪ್ರೆಸ್ ಮಾಡಬೇಕು. ಸಣ್ಣ ಪುಟ್ಟ ಆಂಗಿಕ ಭಾಷೆಗಳೇ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಮಾತಿಗಿಂತ ಪವರ್‌ಫುಲ್ ಆಗಿರೋದು ಭಾವನೆ. ಮನಸ್ಸಿನ ಭಾವನೆಗಳು ಆಂಗಿಕವಾಗಿ ಹೊರ ಹೊಮ್ಮುತ್ತದೆ.  ಒಂದು ಕಣ್ಣೋಟ ಸಾಕು, ನಮ್ಮವರ ಹೃದಯ ಗೆಲ್ಲಲು. ನಗು, ಸ್ಪರ್ಶ..ಹೀಗೆ ಎಲ್ಲವೂ ಪ್ರೀತಿ ಹೆಚ್ಚಿಸಿ, ಸಾಂಗತ್ಯದ ಅನುಭವ ನೀಡಿ, ಬಾಂಧವ್ಯ ಗಟ್ಟಿಗೊಳ್ಳಲು ನೆರವಾಗುತ್ತದೆ. ಮಾತಿನಲ್ಲಿ ಹೇಳಬೇಕಾದ್ದನ್ನೂ ಹೇಗೆಲ್ಲಾ ಹೇಳಬಹುದು ನೋಡಿ....

ಕಣ್ಣೋಟ
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಆತ್ಮ ವಿಶ್ವಾಸದ ಸಂಕೇತ. ಪ್ರೀತಿ ಭರಿತ, ಆತ್ಮ ವಿಶ್ವಾಸದ ನೋಟ ಎಂಥವರ ಹೃದಯವನ್ನೂ ಕದ್ದು ಬಿಡಬಲ್ಲದು. ಅದರೊಂದಿಗೆ ನಗುವಿದ್ದರಂತೂ ಇನ್ನೂ ಒಳ್ಳೆಯದು. 

ಲಿಪ್ ಮತ್ತು ಲಿಪ್‌ಸ್ಟಿಕ್
ಸಂಗಾತಿಗಳಲ್ಲಿ ಒಬ್ಬರಿಗೊಬ್ಬರನ್ನು ಆಕರ್ಷಿಸುವಲ್ಲಿ ತುಟಿ ಪ್ರಮುಖ ಪಾತ್ರವಹಿಸುತ್ತದೆ. ಆಕರ್ಷಕವಾಗಿ ಕಾಣಿಸಲು ಲಿಪ್‌ಸ್ಟಿಕ್ ಹಚ್ಚಿಕೊಳ್ಳಬೇಕು. ತುಟಿಯ ರೊಮಾನ್ಸ್ ಟೆನ್ಷನ್ ಕಡಿಮೆ ಮಾಡಿ, ರೊಮ್ಯಾಂಟಿಕ್ ಮೂಡನ್ನು ತರಿಸುತ್ತದೆ.

ಕೂದಲಿನ ಜೊತೆ ಆಟ 
ಸೌಂದರ್ಯ ಹೆಚ್ಚಿಸೋ ಕೂದಲು, ಸಂಗಾತಿಯನ್ನು ಆಕರ್ಷಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಸಂಗಾತಿ ಬಳಿ ಹೋಗಿ ಕುತ್ತಿಗೆ, ಕಿವಿ ಬಳಿ ಕೂದಲಿನಿಂದ ಕಚಗುಳಿ ಇಡಿ. ಜೊತೆಗೆ ಅವರ ಕೂದಲಿನ ಮೇಲೆ ಕೈಯಾಡಿಸುತ್ತಿದ್ದರೆ, ರೊಮ್ಯಾಂಟಿಕ್ ಮೂಡ್‌ಗೆ ಬೇಗ ಬರಬಹುದು.

ಈ ಟಚ್ಚಲ್ಲಿ ಏನೋ ಇದೆ....
ಸುಖಾ ಸುಮ್ಮನೆ ಕೈ, ಕಾಲನ್ನು ಸ್ಪರ್ಶಿಸುವುದು, ಪ್ರೀತಿಯ ಮಾತುಗಳನ್ನು ಆಡುವುದರಿಂದ ಸಂಗಾತಿಯನ್ನು ಮೂಡ್‌ಗೆ ತರಬಹುದು. 

ಫೇಷಿಯಲ್ ಎಕ್ಸ್‌ಪ್ರೆಷನ್
ಹೆಣ್ಣು ಬೋಲ್ಡ್ ಆಗಿದ್ದರೆ, ತನ್ನ ಮುಖದ ಭಾವನೆಯಿಂದಲೇ ಗಂಡನನ್ನು ಆಕರ್ಷಿಸಬಲ್ಲಳು. ಗಂಡನನ್ನು ಬೋಲ್ಡ್ ಮಾಡಲು, ಬೋಲ್ಡ್‌ನೆಸ್ ಬೇಕಷ್ಟೆ. ಸಂಗಾತಿ ಮನಸ್ಸನ್ನು ಅರಿತುಕೊಳ್ಳುವ ಮನಸ್ಸಿರಬೇಕು ಸಂಗಾತಿಗಳಿಗಿರಬೇಕು.

ಮುಖದ ಮೇಲಿರಲಿ ಮಂದಸ್ಮಿತ್
ನಗು ಎಲ್ಲವನ್ನೂ, ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲದು. ಸಾಕಷ್ಟು ಸಮಸ್ಯೆಗಳಿಗೆ ನಗುವೊಂದೇ ಉತ್ತರವಾಗಬಲ್ಲದು. ಸುಮ್ ಸುಮ್ಮನೆ ಕೆಲವು ಭಾವನೆಗಳನ್ನು ಎಕ್ಸ್‌ಪ್ರಸ್ ಮಾಡೋ ಬದಲು, ಸಣ್ಣ ನಗುವೊಂದರಿಂದ ಸಮಸ್ಯೆಗಳನ್ನು ದೂರ ಮಾಡಬಲ್ಲದು. ಮನಸ್ಸನ್ನು ಒಂದಾಗಿಸಿ, ಸಂಗಾತಿಯನ್ನು ಆಕರ್ಷಿಸುವ ಶಕ್ತಿ ಈ ನಗುವಿಗಿದೆ.

ಸ್ಪರ್ಶ ಸುಖ 
ಸಾಂಗತ್ಯದಲ್ಲಿ ಸ್ಪರ್ಶ ಸುಖ ಸಾಕಷ್ಟುಸಮಸ್ಯೆಗಳನ್ನು ದೂರವಾಗಿಸಬಲ್ಲದು. ಗುಡ್ ಟಚ್ ಯಾವಾಗಲೂ ಪಾಸಿಟಿವ್ ಆಗಿಯೇ ಕಾರ್ಯನಿರ್ವಹಿಸುತ್ತದೆ. ಮಸಾಜ್ ಸಹ ಸಾಂಗತ್ಯದಲ್ಲಿ ಪ್ರೀತಿ ಉಕ್ಕಿಸಲು ನೆರವಾಗುತ್ತದೆ.
 

loader