Asianet Suvarna News Asianet Suvarna News

ಮುಟ್ಟಿನ ನೋವು ಮಾಯಾವಾಗಿಸೋ ಆಹಾರ...

ಪಿರಿಯಡ್ಸ್ ವೇಳೆ ಮಹಿಳೆಯರನ್ನು ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಹೊಟ್ಟೆ ನೋವು, ಬೆನ್ನು ನೋವು ಕಾಮನ್. ಆಗ ಕೆಲವು ಆಹಾರ ಪದಾರ್ಥಗಳ ಸೇವಿಸಿದರೆ ಒಳಿತು. ಇದರಲ್ಲಿರುವ ಕೆಲವೊಂದು ಪೋಷಕಾಂಶಗಳು ಪಿರಿಯಡ್ಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತವೆ. 

7 Foods that will reduce menstrual cramps
Author
Bengaluru, First Published Apr 12, 2019, 4:27 PM IST

7 Foods that will reduce menstrual cramps

  • ಪಿರಿಯಡ್ಸ್ ವೇಳೆ ಜೀರ್ಣ ಕ್ರಿಯೆ ಅನಿಯಮಿತವಾಗಿರುತ್ತದೆ. ಈ ಸಮಯದಲ್ಲಿ ಬೀನ್ಸ್ ಮತ್ತು ಅಲಸಂದೆಯಂಥ ಕಾಳುಗಳನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಬೇಕಾದಷ್ಟು ಮೆಗ್ನೇಷಿಯಂ ಸಿಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತವೆ. 
  • ಡಾರ್ಕ್ ಚಾಕಲೇಟಿನಲ್ಲಿಇರುವ  ಹಲವು ಪೋಷಕಾಂಶಗಳು ಸೆರೋಟೋನಿನ್ ಸ್ತರವನ್ನು ಹೆಚ್ಚಿಸುತ್ತದೆ. ಇದರಿಂದ ಸುಸ್ತು ಕಡಿಮೆಯಾಗುತ್ತದೆ. 
  • ಕಾಂಪ್ಲೆಕ್ಸ್ ಕಾರ್ಬೋರೇಟೆಡ್ ಅಂಶವುಳ್ಳ ಆಹಾರಗಳು, ಹಣ್ಣು, ಧಾನ್ಯಗಳನ್ನು ಪಿರಿಯಡ್ಸ್ ಸಮಯದಲ್ಲಿ ಸೇವಿಸಿ. ಇದು ಶುಗರ್ ಕ್ರೇವಿಂಗ್ ಕಡಿಮೆ ಮಾಡುತ್ತದೆ. ಇದರಲ್ಲಿ ಖರ್ಜೂರ, ಕಿತ್ತಳೆ, ಪ್ಲಮ್, ಕ್ಯಾರಟ್ ಸೇರ್ಪಡೆಯಾಗಿದೆ. 
  • ಪಿರಿಯಡ್ಸ್ ವೇಳೆ ಆಹಾರ ಎಷ್ಟು ಅವಶ್ಯಕತೆ ಇದೆಯೋ ಅದೇ ರೀತಿ ನೀರೂ ಅಗತ್ಯ. 
  • ವಿಟಮಿನ್ ಸಿ ಮಹಿಳೆಯರಿಗೆ ಅಂಡಾಣು ಮತ್ತು ಪ್ರಜನನ ಪ್ರಣಾಲಿ ಫಲವತ್ತತೆ ಹೆಚ್ಚಿಸುತ್ತದೆ. ಅದಕ್ಕಾಗಿ ಕಿತ್ತಳೆ ಹಣ್ಣು, ನಿಂಬೆ ಸೇವಿಸುವುದು ಉತ್ತಮ.
  • ಕ್ಯಾಲ್ಸಿಯಂ ಇರುವ ಬ್ರೊಕೋಲಿ, ಮೊಸರು, ಎಳ್ಳಿನ ಬೀಜ ಹೆಚ್ಚಾಗಿ ಸೇವಿಸಬೇಕು. 
  • ವಿಟಮಿನ್ ಬಿ6 ಪೋಷಕಾಂಶ ಹೊಂದಿದ ಆಹಾರಗಳಾದ ಆಲೂಗಡ್ಡೆ, ಬಾಳೆಹಣ್ಣು ಸೇವಿಸಿ. ಇವು ಮಾನಸಿಕವಾಗಿ ನಿಮ್ಮನ್ನು ಚೆನ್ನಾಗಿಡುತ್ತದೆ. 
Follow Us:
Download App:
  • android
  • ios