ಬುಕ್ ಕೆಫೆ- ಆಹಾರ, ತಿರುಗಾಟ, ಓದು, ಏಕಾಂತ.... ಎಲ್ಲಕ್ಕೂ ಒನ್ ಸ್ಟಾಪ್

ಓದು ನಿಮ್ಮ ಹವ್ಯಾಸ. ಆದರೆ, ಮನೆಯ ಉಪ್ಪರಿಗೆಯಲ್ಲಿ ಕುಳಿತು ಓದಿ ಸಾಕಾಗಿದೆ. ಹೊಸ ಜಾಗ ಹುಡುಕಿಕೊಳ್ಳಬೇಕು ಎನಿಸುತ್ತಿದ್ದಾಗ ಸೃಜನಾತ್ಮಕವಾದ, ಆ್ಯಂಟಿಕ್ ಸೆಟಪ್‌ನ, ವಿಶಿಷ್ಠ ವಿನ್ಯಾಸದ ಹೊಟೆಲ್ ಲೈಬ್ರರಿ ಜೊತೆಗೆ ಚೆಂದಗೆ ಓದಿಸಿಕೊಂಡು ಹೋಗುವ ಪುಸ್ತಕಗಳು ಸಿಕ್ಕಿದರೆ ಎಷ್ಟು ಗಮ್ಮತ್ತಲ್ಲವೇ?

7 Book cafes in India

ಬೆಳೆಯಬೇಕೆಂದರೆ ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅಂತಾರೆ ದೊಡ್ಡವರು. ಇವೆರಡೂ ನಿಮ್ಮ ಹವ್ಯಾಸಗಳಾಗಿದ್ದಲ್ಲಿ  ನಿಮ್ಮ ತಿರುಗಾಟದ ಮಧ್ಯೆ ಈ ಬುಕ್ ಕೆಫೆ‌ಗಳ ಬಳಿ ಒಂದು ಸ್ಟಾಪ್ ಕೊಡಿ. ಬೇಕೆಂದಷ್ಟು ಹೊತ್ತು ಕುಳಿತುಕೊಳ್ಳಿ, ಬೇಕಾದ್ದು ತಿನ್ನಲು ಆರ್ಡರ್ ಮಾಡಿ, ಸಾಕೆನಿಸುವಷ್ಟು ಪುಸ್ತಕಗಳನ್ನು ಓದಿ.... ಹೌದು, ಆಹಾರ, ತಿರುಗಾಟ, ಓದು ಎಲ್ಲವೂ ನಿಮಗಿಷ್ಟವಿದ್ದಲ್ಲಿ ಎಲ್ಲಕ್ಕೂ ಕಾರಣವಾಗುವ ಬುಕ್ ಕೆಫೆಗಿಂತ ಅತ್ಯುತ್ತಮ ತಾಣ ಇನ್ನೆಲ್ಲಿ?  ಭಾರತದಾದ್ಯಂತ ಇಂಥ ವಿಶಿಷ್ಠ ಕಲ್ಪನೆಯ ಚೆಂದದ ಬುಕ್ ಕೆಫೆಗಳು ತೆರೆದುಕೊಳ್ಳುತ್ತಿವೆ. ಗ್ರಾಹಕರ ಹೊಟ್ಟೆ ಹಸಿವಿನೊಂದಿಗೆ ಓದಿನ ಹಸಿವನ್ನೂ ನೀಗಿಸುವ ಕೆಲಸ ಮಾಡುತ್ತಿವೆ. ಅಂಥ ಕೆಲವನ್ನು ಇಲ್ಲಿ ಕೊಡಲಾಗಿದೆ.

ಬೆಂಗಳೂರಿಗರ ದೀರ್ಘ ವಾರಾಂತ್ಯ ಪ್ರವಾಸ ಆಸೆಗೆ ತಣ್ಣೀರು

ನರ್ಡಿ ಇಂಡಿಯನ್ ಕೆಫೆ, ದೆಲ್ಲಿ ರಾಷ್ಟ್ರ ರಾಜಧಾನಿ ದೆಲ್ಲಿಯಲ್ಲಿ ಹೊಸದಾಗಿ ಆರಂಭವಾಗಿರುವ ನರ್ಡಿ ಇಂಡಿಯನ್ ಕೆಫೆ ಸೈನಿಕ್ ಫಾರ್ಮ್ ರಸ್ತೆಯಲ್ಲಿದೆ. ಇದು ಆಹಾರ ಆರ್ಡರ್ ಮಾಡಿದ ತನ್ನ ಗಿರಾಕಿಗಳಿಗೆ ಓದಲು ಪುಸ್ತಕಗಳನ್ನು ಒದಗಿಸುತ್ತದೆ. ಇಲ್ಲಿ ಕಾಮಿಕ್ಸ್, ಕ್ಲಾಸಿಕ್ಸ್, ಥ್ರಿಲ್ಲರ್ಸ್ ಸೇರಿದಂತೆ ವಿವಿಧ ಕೆಟಗರಿಯ ಸುಮಾರು 1000 ಪುಸ್ತಕಗಳು ಗ್ರಾಹಕರ ಓದಿನ ಹಸಿವಿಗೆ ಆಹಾರವಾಗಲು ಕಾದು ಕುಳಿತಿವೆ. ಒಬ್ಬರೇ ಹೋದರೆ ಇಲ್ಲಿ ಪುಸ್ತಕಗಳೇ ಕಂಪನಿ ನೀಡುತ್ತವೆ. 

ಚಾ ಬಾರ್- ಆಕ್ಸ್‌ಫರ್ಡ್ ಬುಕ್ ಸ್ಟೋರ್, ದೆಲ್ಲಿ

ರುಚಿಯಾದ ಟೀ ಸವಿಯುತ್ತಾ ಪುಸ್ತಕಗಳ ಮೇಲೆ ಕೈಯಾಡಿಸುತ್ತಾ ಸಮಯ ಸದುಪಯೋಗ ಮಾಡಿಕೊಳ್ಳಲು ಚಾ ಬಾರ್ ಹೇಳಿ ಮಾಡಿಸಿದ ತಾಣ. ದಿಲ್ಲಿಯೊಂದರಲ್ಲೇ ಅಲ್ಲದೆ ಹಲವು ನಗರಗಳಲ್ಲಿ ಈ ಚಾ ಬಾರ್ ಶಾಖೆಗಳನ್ನು ತೆರೆದಿದೆ. ಇಲ್ಲಿ ಬುಕ್ ರೀಡಿಂಗ್ ಸೆಶನ್‌‌ಗಳು, ಹೊಸ ಪುಸ್ತಕಗಳ ಬಿಡುಗಡೆ, ಬುಕ್ ಸೈನಿಂಗ್ ಮುಂತಾದ ಕಾರ್ಯಕ್ರಮಗಳೂ ನಡೆಯುತ್ತವೆ. 

ಕೆಫೆ ವಂಡರ್‌ಲಸ್ಟ್, ಗುರ್‌ಗಾವ್

ಹೆಸರೇ ಹೇಳುವಂತೆ ಇದು ಟ್ರಾವೆಲ್ ಕೆಫೆಯಾಗಿದ್ದು, ಇಲ್ಲಿ ಟ್ರಾವೆಲ್‌ಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಮ್ಯಾಗಜೀನ್ಸ್ ಹೇರಳವಾಗಿವೆ. ಕುಳಿತಲ್ಲಿಂದಲೇ ಮುಂದಿನ ಟ್ರಿಪ್ ಪ್ಲ್ಯಾನ್ ಮಾಡಲು ಈ ಪುಸ್ತಕಗಳು ನಿಮಗೆ ಸಹಾಯ ಮಾಡಬಹುದು. ಇಲ್ಲಿ ನೀವು ಬೇರೆ ಬೇರೆ ಸ್ಥಳಗಳ ವಿಶೇಷ ಖಾದ್ಯಗಳನ್ನು ಸವಿಯುತ್ತಾ ಟ್ರಾವೆಲ್ ಅಡ್ವೈಸರ್‌ಗಳ ಜೊತೆ ಕೂಡಾ ಮಾತನಾಡಬಹುದು. 

ರಿಚ್ಚೀ ರಿಚ್ ಫೀಲಿಂಗ್ ಬೇಕೇ? ಕಡಿಮೆ ದುಡ್ಡಿದ್ರೂ ಈ ದೇಶಗಳಲ್ಲಿ ಎಂಜಾಯ್ ಮಾಡ್ಬೋದು!

ದ ಕಾಫಿ ಶಾಪ್, ಸಿಖಂದರಾಬಾದ್

ಈ ಕಾಫಿ ಶಾಪ್‌ನಲ್ಲಿ ನೀವು ಪುಸ್ತಕ ಓದುವುದಲ್ಲದೆ, ಕೊಳ್ಳಲೂಬಹುದು. ಕುಟುಂಬ ಹಾಗೂ ಗೆಳೆಯರೊಂದಿಗೆ ಇಲ್ಲಿ ಭೇಟಿ ನೀಡಿದರೆ ಸಮಯ ಕಳೆಯಲು ಬೋರ್ಡ್ ಗೇಮ್ಸ್ ಕೂಡಾ ಇವೆ. 

ಕೆಫೆ ಸ್ಟೋರಿ, ಕೋಲ್ಕತಾ

ವೆಜಿಟೇರಿಯನ್ ಇಟಾಲಿಯನ್ ಹಾಗೂ ಕಾಂಟಿನೆಂಟಲ್ ಫುಡ್ ಸರ್ವ್ ಮಾಡುವ ಈ ಕೆಫೆಯ ಒಂದು ಫ್ಲೋರ್ ಪೂರ್ತಿ ಪುಸ್ತಕಗಳೇ ತುಂಬಿವೆ. ಪುಸ್ತಕದ ಹುಳುಗಳು ಇಲ್ಲಿಗೆ ಹುಡುಕಿಕೊಂಡು ಬಂದು ಜೋತು ಬೀಳುತ್ತವೆ. ಇಲ್ಲಿ ಫ್ರೀ ವೈಫೈ ಕೂಡಾ ನೀಡಲಾಗುತ್ತಿದೆ.

ಪಗ್ದಂಡಿ, ಪುಣೆ

ದಂಪತಿ ಸೇರಿ ನಡೆಸುತ್ತಿರುವ ಈ ಕೆಫೆ ಕೆಲ ಆರೋಗ್ಯಯುತ ಆಹಾರ ಹಾಗೂ ಟೀ ಸರ್ವ್ ಮಾಡುತ್ತದೆ. ಜೊತೆಗೆ, ಹೊಸದಾದ, ಏಕೈಕ ಪಬ್ಲಿಶರ್‌ಗಳು ಹೊರ ತಂದಂಥ ಪುಸ್ತಕಗಳನ್ನು ಓದಲು ಒದಗಿಸುತ್ತದೆ. 

ಹೋಗಬೇಕೆಂದರೂ ಈ ವಿಶೇಷ ಸ್ಥಳಗಳಿಗೆ ನೀವೆಂದೂ ಹೋಗಲಾರಿರಿ!

ಲಿಟೆರಟಿ, ಗೋವಾ

ಇಲ್ಲಿನ ಕ್ಯಾಲಗುಟೆಯ ಬಾರ್ದೆಜ್ ಬಲಿ ಇರುವ ಈ ಕೆಫೆ, ಗೋವಾದಲ್ಲಿ ಸಮಯ ಕಳೆಯಲು ಮತ್ತೊಂದು ಕಾರಣ ಒದಗಿಸುತ್ತದೆ.  ಇಲ್ಲಿ ಹೊಸದಾದ, ಜೊತೆಗೆ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ಕೂಡಾ ಓದಲು ಸಿಗುತ್ತವೆ. ಆಗಾಗ ಪುಸ್ತಕ ಸಂಬಂಧಿ ಕಾರ್ಯಕ್ರಮಗಳು ಕೂಡಾ ಇಲ್ಲಿ ನಡೆಯುತ್ತವೆ.

ಕೆಫೆ ಇಲ್ಲೆಟರೆಟಿ, ಧರ್ಮಶಾಲಾ

ಬೆಲ್ಜಿಯನ್ ದಂಪತಿ ನಡೆಸುತ್ತಿರುವ ಈ ಕೆಫೆ ಎಲ್ಲ ರೀತಿಯಿಂದಲೂ ಯೂರೋಪಿಯನ್ ಶೈಲಿಯಲ್ಲಿದೆ. ಮರದ ಫರ್ನಿಚರ್‌ಗಳು, ಜೀವಮಾನವಿಡೀ ಓದಿದರೂ ಮುಗಿಯದಷ್ಟು ಪುಸ್ತಕಗಳು, ಗಾಳಿಯಲ್ಲಿ ಸಣ್ಣದಾಗಿ ಹರಿದುಬರುವ ಸಂಗೀತ, ಕಾಫಿ ಹಾಗೂ ಕೆಲ ಸ್ನ್ಯಾಕ್ಸ್ ನಿಮ್ಮ ದಿನವನ್ನು ಜೀವಮಾನಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡುತ್ತವೆ. ಕೆಫೆಯ ಎದುರಿಗೆ ಹಿಮಚ್ಚಾದಿತ ಪರ್ವತವಿದ್ದು, ಈ ನೋಟ ಕೂಡಾ ಸವಿಯುತ್ತಾ ಕೂರಬಹುದು.

Latest Videos
Follow Us:
Download App:
  • android
  • ios