ಹಸಿಮೆಣಸು ಆರೋಗ್ಯಕ್ಕೆ ಬೇಕಾ?
ನಾವು ಅಡುಗೆಗೆ ಬಳಸುವ ಎಲ್ಲ ತರಕಾರಿಗಳೂ, ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಹಸಿ ಮೆಣಸೂ ನಮ್ಮ ದೇಹಕ್ಕೆ ಅಗತ್ಯವೆಂಬುವುದು ನಿಮಗೇ ಗೊತ್ತಾ? ಓದಿ ಈ ಸುದ್ದಿ...
ಖಾರವಾಗಿರುವ ಹಸಿಮೆಣಸು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಇವು ಆರೋಗ್ಯಕ್ಕೂ ಒಳ್ಳೆಯದು. ಹಸಿಮೆಣಸಿನ ಬಗ್ಗೆ ನೀವು ತಿಳಿದುಕೊಂಡಿರದ ಸತ್ಯಗಳಿವು...
- ಸಂಶೋಧನೆಯೊಂದರ ಪ್ರಕಾರ ಹಸಿ ಮೆಣಸು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ರಕ್ತ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಪಚನಕ್ರಿಯೆಯನ್ನು ಸ್ಟ್ರಾಂಗ್ ಮಾಡುತ್ತದೆ. ಹಸಿಮೆಣಸಿನಲ್ಲಿರುವ ಫೈಬರ್ ಅಂಶ ಸೇವಿಸಿದ ಆಹಾರ ಬೇಗ ಜೀರ್ಣವಾಗುವಂತೆ ಮಾಡುತ್ತದೆ.
- ದೇಹದಲ್ಲಿ ಕಾಣಿಸುವ ಅರ್ಥರೈಟಿಸ್‌ನಂಥ ನೋವು ನಿವಾರಿಸುವಲ್ಲಿಯೂ ಹಸಿ ಮೆಣಸು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು.
- ಇದರಲ್ಲಿರುವ ವಿಟಮಿನ್ ಸಿ ಗಾಯವನ್ನು ಮಾಸಲು ಸಹಕರಿಸುತ್ತದೆ. ಜೊತೆಗೆ ವಿಟಾಮಿನ್ ಸಿ ಮೂಳೆ, ಹಲ್ಲು ಮತ್ತು ಕಣ್ಣಿನ ಆರೋಗ್ಯಕ್ಕೂ ಅಗತ್ಯ.
- ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೆಣಸು ಸೇವಿಸಿದರೆ ಕಣ್ಣು, ಮೂಗು ನಿರಾಳವಾಗಿ ಉಸಿರಾಟವನ್ನು ಸುಗಮಗೊಳಿಸುತ್ತದೆ.
- ಕ್ಯಾನ್ಸರ್ ವಿರುದ್ಧ ಹೋರಾಡಲು ಹಾಗೂ ಶರೀರವನ್ನು ಸುರಕ್ಷಿತವಾಗಿಡಲು ಇದು ಸಹಕಾರಿ. ಇದು ದೇಹವನ್ನು ಶುದ್ಧಗೊಳಿಸಿ, ರೆಡಿಕಲ್ ನಿವಾರಿಸಿ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.