ವಿಷಕಾರಿ ಕಿಂಗ್ ಕೋಬ್ರಾವನ್ನೇ ಕಚ್ಚಿ ತಿನ್ನುತ್ವೆ ಈ ಪ್ರಾಣಿಗಳು!
ಕಿಂಗ್ ಕೋಬ್ರಾ ಹೆಸರು ಕೇಳಿದ್ರೆ ನಡುಕ ಬರುತ್ತೆ. ಆದ್ರೆ ಕಿಂಗ್ ಕೋಬ್ರಾಗೂ ಕೆಲ ಪ್ರಾಣಿಗಳನ್ನು ನೋಡಿದ್ರೆ ಭಯ ಶುರುವಾಗುತ್ತೆ. ಯಾಕೆಂದ್ರೆ ಕಿಂಗ್ ಕೋಬ್ರಾ ವಿಷಕ್ಕೆ ಆ ಪ್ರಾಣಿಗಳು ಜಗ್ಗೋದಿಲ್ಲ.
ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಕಿಂಗ್ ಕೋಬ್ರಾ (King Cobra) ಸೇರಿದೆ. ಅದು ಕಚ್ಚಿ ಕೆಲವೇ ನಿಮಿಷದಲ್ಲಿ ಮನುಷ್ಯ ಸಾವನ್ನಪ್ತಾನೆ. ಅಷ್ಟು ವಿಷವಿದ್ರೂ, ಅಪಾಯಕಾರಿಯಾಗಿದ್ರೂ ಕಿಂಗ್ ಕೋಬ್ರಾ ಭಯಪಡುವ ಪ್ರಾಣಿಗಳಿವೆ. ಕಿಂಗ್ ಕೋಬ್ರಾಗೆ ಒಂದಿಷ್ಟು ಶತ್ರು ಪ್ರಾಣಿಗಳಿವೆ. ನಾವು ಕಿಂಗ್ ಕೋಬ್ರಾ ನೋಡಿದ್ರೆ ಪ್ರಾಣ ರಕ್ಷಿಸಿಕೊಳ್ಳಲು ಓಡಿ ಹೋಗ್ತೇವೆ. ಅದೇ ರೀತಿ, ಕೆಲ ಪ್ರಾಣಿಗಳನ್ನು ನೋಡಿದ್ರೆ ಕಿಂಗ್ ಕೋಬ್ರಾಗೆ ಪ್ರಾಣ ಭಯ ಶುರುವಾಗುತ್ತೆ. ಅಷ್ಟೊಂದು ವಿಷವಿದ್ರೂ ಈ ಕಿಂಗ್ ಕೋಬ್ರಾಗಳನ್ನೇ ಹಲ್ಲಲ್ಲಿ ಅಗೆಯುವ ಪ್ರಾಣಿಗಳಿವೆ ಅಂದ್ರೆ ನೀವು ನಂಬ್ಲೇಬೇಕು. ನಾವಿಂದು ಕಿಂಗ್ ಕೋಬ್ರಾ ಶತ್ರುಗಳ ಪಟ್ಟಿಯನ್ನು ನಿಮಗೆ ನೀಡ್ತೇವೆ.
ಕಿಂಗ್ ಕೋಬ್ರಾಗೂ ಹೆದರಲ್ಲ ಈ ಪ್ರಾಣಿಗಳು :
ಮೊಸಳೆ (crocodile) : ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಮೊಸಳೆಗಳು ಸೇರಿವೆ. ಕಿಂಗ್ ಕೋಬ್ರಾ ಶತ್ರು ಇದು. ಶಕ್ತಿಯುತ ದವಡೆಗಳಿಂದ ಕಿಂಗ್ ಕೋಬ್ರಾ ಹಿಡಿದು ನುಂಗುತ್ವೆ ಮೊಸಳೆ.
ಹದ್ದು : ಬಿಳಿ ಹೊಟ್ಟೆಯ ಸಮುದ್ರ ಹದ್ದುಗನಂತಹ ಕೆಲವು ಹದ್ದು ಕಿಂಗ್ ಕೋಬ್ರಾಗಳನ್ನು ಹಿಡಿದು ತಿನ್ನುತ್ತವೆ. ಅವರು ಸಾಮಾನ್ಯವಾಗಿ ಮೇಲಿನಿಂದ ದಾಳಿ ಮಾಡುತ್ತವೆ. ಹಾವನ್ನು ಕಚ್ಚಿಕೊಂಡು ಮೈಲುಗಳವರೆಗೆ ಹಾರುವ ಶಕ್ತಿ ಇವಕ್ಕಿದೆ. ಈ ಸಮಯದಲ್ಲಿ ಹಾವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ.
ತನ್ನ 11 ಮಕ್ಕಳು, ಪತ್ನಿಯರ ಒಂದೇ ಸೂರಿನಡಿ ತರಲು 294 ಕೋಟಿ ರೂ ಮನೆ ಖರೀದಿಸಿದ ಮಸ್ಕ್!
ಮುಂಗುಸಿ : ಹಾವು - ಮುಂಗುಸಿ ಕಥೆ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ. ಕಿಂಗ್ ಕೋಬ್ರಾದೊಂದಿಗೆ ಹೋರಾಡಲು ಮತ್ತು ಅದನ್ನು ಕೊಲ್ಲಲು ಮುಂಗುಸಿ ಮುಂದಿದೆ. ಹಾವಿನ ದಾಳಿಯಿಂದ ಪಾರಾಗಲು ತಮ್ಮ ಚಾಕಚಕ್ಯತೆ ಮತ್ತು ವೇಗವನ್ನು ಬಳಸುತ್ತವೆ. ನಂತರ ಹಾವಿನ ತಲೆಯನ್ನು ಕಚ್ಚಿ ಕೊಲ್ಲುತ್ತವೆ.
ರಕೂನ್ : ಕಿಂಗ್ ಕೋಬ್ರಾ ತಿನ್ನುವ ಪ್ರಾಣಿಗಳಲ್ಲಿ ರಕೂನ್ ಸೇರಿದೆ. ಇವು ಹಾವಿನ ತಲೆಯ ಮೇಲೆ ದಾಳಿ ಮಾಡುತ್ತವೆ. ನಂತ್ರ ಹಾವನ್ನು ತಿನ್ನುತ್ವೆ.
ಕಾಡು ಹಂದಿ : ಕಾಡು ಹಂದಿಗಳು ಕಿಂಗ್ ಕೋಬ್ರಾಗಳನ್ನು ತಮ್ಮ ಚೂಪಾದ ಹಲ್ಲುಗಳಿಂದ ಕಚ್ಚಿ ಕೊಲ್ಲುತ್ತವೆ. ಹಾವನ್ನು ಕೊಲ್ಲಲು ಅವು ತಮ್ಮ ದೇಹವನ್ನು ಸಹ ಬಳಸುತ್ತವೆ.
ರಣಹದ್ದು : ಹಾವುಗಳ ಮೇಲೆ ದಾಳಿ ಮಾಡೋದ್ರಲ್ಲಿ ರಣಹದ್ದು ಮೊದಲ ಸ್ಥಾನದಲ್ಲಿದೆ. ಅವು ತಮ್ಮ ಬೇಟೆಯನ್ನು ಎತ್ತರದಿಂದ ಗುರುತಿಸುತ್ತವೆ. ವೇಗವಾಗಿ ಕೆಳಗೆ ಬರುವ ರಣಹದ್ದುಗಳು ಅರೆಕ್ಷಣದಲ್ಲಿ ಹಾವನ್ನು ಕಚ್ಚಿ ಮೇಲಕ್ಕೊಯ್ಯುತ್ತವೆ. ತಮ್ಮ ಉಗುರುಗಳಿಂದ ಅವು ಭೇಟೆಯನ್ನು ಹಿಡಿಯುತ್ತವೆ. ತಮ್ಮ ಉಗುರಿನಿಂದಲೇ ನಾಗರ ತಲೆಬುರುಡೆಯನ್ನು ಪುಡಿಮಾಡುತ್ತವೆ.
ಸಂಬಂಧ ಹಾಳು ಮಾಡ್ತು ಸಂಬಳದ ಒಂದೇ ಒಂದು ಸೊನ್ನೆ! ವಾಟ್ಸ್ ಅಪ್ ಚಾಟ್ ವೈರಲ್
ವಿಷಕಾರಿ ಹಾವು ತಿಂದ್ರೂ ಈ ಪ್ರಾಣಿಗಳು ಏಕೆ ಸಾಯಲ್ಲ? : ವಿಷಪೂರಿತ ಹಾವು ಮನುಷ್ಯನಿಗೆ ಕಚ್ಚಿದರೆ ಅದರ ವಿಷ ರಕ್ತಪ್ರವಾಹಕ್ಕೆ ಸೇರುತ್ತದೆ ಮತ್ತು ಆತ ಸಾಯುತ್ತಾನೆ. ಆದರೆ ಆ ಹಾವನ್ನು ಸೇವಿಸುತ್ತಿದ್ದರೆ ಹೊಟ್ಟೆಯಲ್ಲಿರುವ ಆಮ್ಲೀಯ ಜೀರ್ಣಕಾರಿ ಕಿಣ್ವಗಳಿಂದ ವಿಷ ಗ್ರಂಥಿಗಳು ಜೀರ್ಣವಾಗುತ್ತದೆ. ಹಾಗಾಗಿ ಹಾವನ್ನು ತಿನ್ನುವ ಪ್ರಾಣಿಗಳು ಸಾಯೋದಿಲ್ಲ. ಕೆಲ ಪ್ರಾಣಿಗಳು ವಿಶೇಷ ಜೀರ್ಣಕಾರಿ ಶಕ್ತಿಯನ್ನು ಹೊಂದಿವೆ. ಹಂದಿ ದೇಹದಲ್ಲಿ ವಿಶೇಷ ರೀತಿಯ ರಾಸಾಯನಿಕ ನ್ಯೂರೋಟಾಕ್ಸಿನ್ ಇರುತ್ತದೆ. ಅದು ಹಾವಿನ ವಿಷವನ್ನು ನಾಶಪಡಿಸುತ್ತದೆ ಮತ್ತು ಅದನ್ನು ಮತ್ತಷ್ಟು ಹರಡಲು ಬಿಡುವುದಿಲ್ಲ. ಇಷ್ಟೇ ಅಲ್ಲ, ಹಾವು ಕಡಿತ ಹನಿ ಬ್ಯಾಜರ್‌ಗಳ ಮೇಲೂ ಪರಿಣಾಮ ಬೀರುವುದಿಲ್ಲ. ಅದು ಯಾವ ಹಾವೇ ಆಗಿರಲಿ, ಅದರ ವಿಷವು ಅದರ ದೇಹದಲ್ಲಿ ಹರಡುವುದಿಲ್ಲ. ಮರದ ಇಲಿ ಒಂದು ರೀತಿಯ ಇಲಿಯಾಗಿದ್ದು, ಇದು ಹಾವಿನ ವಿಷದಿಂದ ಪ್ರಭಾವಿತವಾಗುವುದಿಲ್ಲ. ಆದ್ರೆ ದೊಡ್ಡ ಹಾವುಗಳು ಸಾಮಾನ್ಯವಾಗಿ ಅವುಗಳನ್ನು ಸಂಪೂರ್ಣವಾಗಿ ನುಂಗುತ್ತವೆ. ಹಾಗಾಗಿ ಅವು ಹಾವುಗಳಿಂದ ದೂರ ಓಡುತ್ತವೆ.