Asianet Suvarna News Asianet Suvarna News

ಕಹಿ ಹಾಗಲ ಮೊಡವೆಗೆ ಮದ್ದು...!

ಈ ಪಿಂಪಲ್ ಯುವ ಜನಾಂಗವನ್ನು ನಿದ್ದೆ ಕೆಡಿಸುವ ಸಮಸ್ಯೆ. ಕೂದಲಿನ ಸ್ವಚ್ಛತೆ ಹಾಗೂ ಕೆಲವು ಸಿಂಪಲ್ ಔಷಧಗಳಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಈ ತರಕಾರಿಯೂ ಮೊಡವೆಗೆ ಆಗುತ್ತೆ ಮದ್ದು.. ಹೇಗೆ?

5 reason why Bitter gourd is good for pimple face
Author
Bengaluru, First Published Feb 11, 2019, 1:39 PM IST

ಹಾಗಲಕಾಯಿ ರುಚಿ ಕಹಿ ಇರಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ. ಹೆಚ್ಚಿನವರು ಹಾಗಲವನ್ನು ಇಷ್ಟಪಡೋದಿಲ್ಲ. ಆದರೆ ಇದನ್ನು ಬಳಸುವುದರಿಂದ ಆರೋಗ್ಯದೊಂದಿಗೆ ಸೌಂದರ್ಯವೂ ಹೆಚ್ಚುತ್ತದೆ. ಸೌಂದರ್ಯಕ್ಕೆ ಹಾಗಲಕಾಯಿಯೇ? ಹೇಗೆಂದು ತಿಳಿಯಲು ಮುಂದೆ ಓದಿ... 

  • ಮುಖದಲ್ಲಿ ಸುಕ್ಕು ಕಾಣಿಸಿಕೊಂಡರೆ, ವಯಸ್ಸಿಗೂ ಮುನ್ನವೇ ವೃದ್ಧಾಪ್ಯ ನಮ್ಮನ್ನು ಕಾಡುತ್ತದೆ. ಅದಕ್ಕೆ ಹಾಗಲಕಾಯಿ ಸೇವಿಸಲು ಆರಂಭಿಸಿ. ಯಾಕೆಂದರೆ ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಮುಖವನ್ನು ಯಂಗ್ ಆಗಿರುವಂತೆ ಮಾಡುತ್ತದೆ. 
  • ಹಾಗಲಕಾಯಿಯಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್ ಇರುತ್ತದೆ. ಇದು ರಕ್ತದಲ್ಲಿರುವ ಟಾಕ್ಸಿನ್ ಅಂಶವನ್ನು ದೇಹದಿಂದ ಹೊರ ಹಾಕುತ್ತದೆ. ಇದರಿಂದ ರಕ್ತ ಕ್ಲೀನ್ ಆಗುತ್ತದೆ. ಜೊತೆಗೆ ಸ್ಕಿನ್ ಸಂಬಂಧಿ ಸಮಸ್ಯೆಯನ್ನೂ ನಿವಾರಿಸುತ್ತದೆ.
  • ಸ್ಕಿನ್ ಮೇಲಿನ ಕಲೆ ನಿವಾರಿಸಲು ಎರಡು ಚಮಚ ಹಾಗಲ ಜ್ಯೂಸ್, ಎರಡು ಚಮಚ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಅದು ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಇದರಿಂದ ಮುಖದ ಕಲೆ ನಿವಾರಣೆಯಾಗುತ್ತದೆ. 
  • ನಿಮ್ಮ ಮುಖದಲ್ಲಿ ಪಿಂಪಲ್, ಕೆಂಪು ಚುಕ್ಕೆ ಇದ್ದರೆ ಹಾಗಲಕಾಯಿ ರಸವನ್ನು ಬೇರೆ ಹಣ್ಣಿನ ರಸದೊಂದಿಗೆ ಮಿಕ್ಸ್ ಮಾಡಿ ಸೇವಿಸಿ. ಇದರಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣ ತ್ವಚಾ ಸಂಬಂಧಿ ಸಮಸ್ಯೆಗಳನ್ನು ದೂರವಾಗಿಸುತ್ತದೆ. 
  • ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಹಾಗಲಕಾಯಿ ಫೇಸ್ ಪ್ಯಾಕ್ ಸಹ  ಸಿಗುತ್ತದೆ. ನಿಮ್ಮ ಸ್ಕಿನ್ ಇನ್ನಷ್ಟು ಗ್ಲೋ  ಆಗಬೇಕು, ಚೆನ್ನಾಗಿ ಕಾಣಬೇಕೆಂದರೆಹಾಗಲಕಾಯಿ ಫೇಸ್ ಪ್ಯಾಕ್ ಬಳಸಿ.
Follow Us:
Download App:
  • android
  • ios