ಯಾರಿಗೆ ತಾನೇ ಸುಖವಾಗಿ ನಿದ್ರೆ ಮಾಡೋದು ಬೇಡ ಹೇಳಿ? ಬಳಲಿದ ದೇಹಕ್ಕೆ ನೆಮ್ಮದಿಯ ನಿದ್ರೆಯಾದರೆ ಸಾಕು, ಫ್ರೆಷ್ ಫೀಲ್ ಆಗುತ್ತೆ. ಒತ್ತಡ, ಬದಲಾದ ಬದುಕಿನಿಂದ ಇಂಥ ಸುಖ ನಿದ್ರೆ ಹೇಳಿದಷ್ಟು ಸುಲಭವಲ್ಲ. ಈ ಆಹಾರ ಹೆಚ್ಚು ಬಳಸಿದರೆ ಸೊಂಪಾಗಿ ನಿದ್ರಿಸಬಹುದು...
ಪೂರ್ತಿ ದಿನ ಕೆಲಸ ಮಾಡಿ ಸುಸ್ತಾದಾಗ, ಮಲಗಿದರೆ ಸಾಕು ಎಂದೆನಿಸುತ್ತದೆ. ಆದರೆ ನೂರಾರು ಯೋಚನೆಗಳು ತಲೆಯೊಳಗೆ ತುಂಬಿದರೆ ನಿದ್ರೆ ಹತ್ತಿರವೂ ಸುಳಿಯೋಲ್ಲ. ಈ ಎಲ್ಲ ಸಮಸ್ಯೆ ದೂರವಾಗಲು ರಾತ್ರಿ ನಿದ್ರಿಸುವ ಮುನ್ನ ಈ ಆಹಾರ ಸೇವಿಸಬೇಕು.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಇರುತ್ತದೆ. ಕಾರ್ಬೋಹೈಡ್ರೇಟ್ ಟ್ರಿಪ್ಟಾಫ್ಫೆನ್ ಉತ್ಪಾದಿಸುತ್ತದೆ. ಇದು ಸುಖ ನಿದ್ರೆಗೆ ಸಹಕರಿಸುತ್ತದೆ. ಇದಲ್ಲದೇ ಹೆಚ್ಚಿನ ಪ್ರಮಾಣದ ಮೆಗ್ನೇಷಿಯಂ ಇರೋ ಬಾಳೆಹಣ್ಣು, ಮಸಲ್ಸ್ ಮತ್ತು ನರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಒಂದು ಗ್ಲಾಸ್ ಹಾಲು : ರಾತ್ರಿ ಮಲಗುವ ಮುನ್ನ ಹಾಲು ಕುಡಿದರೆ ಉತ್ತಮ. ಆಯುರ್ವೇದದ ಅನುಸಾರ ದಿನದ ಅಂತ್ಯದಲ್ಲಿ ಒಂದು ಗ್ಲಾಸ್ ಬಿಸಿ ಬಿಸಿ ಹಾಲು ಕುಡಿಯಿರಿ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ ನಿದ್ರೆಗೆ ಅಡ್ಡಿ ಪಡಿಸುವ ವಿಷಯವನ್ನು ದೂರ ಮಾಡಿ ಚೆನ್ನಾಗಿ ನಿದ್ರಿಸುವಂತೆ ಮಾಡುತ್ತದೆ.
ಜೇನು : ಮಲಗುವ ಮುನ್ನ ಜೇನು ಸೇವಿಸುವುದೂ ಉತ್ತಮ. ಜೇನಿನಲ್ಲಿರುವ ಪಾಸಿಟಿವ್ ಗುಣ ಪೂರ್ತಿ ದೇಹಕ್ಕೆ ಶಕ್ತಿ ನೀಡುತ್ತದೆ. ಜೇನು ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿಫಂಗಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಇದು ಒತ್ತಡ ಕಡಿಮೆ ಮಾಡಿ ಚೆನ್ನಾಗಿ ನಿದ್ರೆ ಬರುವಂತೆ ಮಾಡುತ್ತದೆ.
ಬಾದಾಮಿ: ಬಾದಾಮಿಯಲ್ಲಿ ಹೆಚ್ಚಿನ ಫ್ಯಾಟ್, ಅಮೈನೊ ಆ್ಯಸಿಡ್ ಮತ್ತು ಮೆಗ್ನೇಷಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಚೆನ್ನಾಗಿ ನಿದ್ರೆ ಮಾಡಿ ಸುಸ್ತು ದೂರವಾಗಲು ಸಹಾಯ ಮಾಡುತ್ತದೆ. ಆದುದರಿಂದ ರಾತ್ರಿ ಬಾದಾಮಿ ತಿಂದು ಮಲಗಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 25, 2019, 3:41 PM IST